ETV Bharat / sports

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಳೆಯ ಆಟ.. ಸರಣಿ ಸಮ.. ಪ್ರಶಸ್ತಿ ಹಂಚಿಕೊಂಡ ಭಾರತ-ದಕ್ಷಿಣ ಆಫ್ರಿಕಾ!

author img

By

Published : Jun 20, 2022, 6:55 AM IST

Updated : Jun 20, 2022, 7:01 AM IST

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿದ್ದ ಭಾರತ- ದಕ್ಷಿಣ ಆಫ್ರಿಕಾ ನಡುವಣ ಸರಣಿ ನಿರ್ಣಾಯಕ ಪಂದ್ಯವು ಮಳೆಯ ಕಾರಣ ರದ್ದಾಗಿದೆ. ಟಾಸ್​ಗೂ ಮುನ್ನ ಮಳೆಯಾಗಿದ್ದರಿಂದ ಪಂದ್ಯವು ವಿಳಂಬವಾಗಿಯೇ ಶುರು ಮಾಡಲಾಗಿತ್ತು. ಆದ್ರೂ ಸಹ ವರುಣನ ಅಡ್ಡಿ ಮುಂದುವರಿದ ಪರಿಣಾಮ ಐದನೇ ಟಿ-20 ಪಂದ್ಯವನ್ನು ಬಿಸಿಸಿಐ ರದ್ದುಮಾಡಿದ್ದರಿಂದ ಸರಣಿ ಸಮ ಬಲವಾಯಿತು. ಪರಿಣಾಮ ಉಭಯ ತಂಡಗಳು ಪ್ರಶಸ್ತಿ ಹಂಚಿಕೊಂಡವು.

Fifth T20I called off due to rain, T20I series shared, Fifth T20I called off in Bengaluru, Heavy rain in Bengaluru,  South Africa tour of India 2022, Bengaluru Chinnaswamy Stadium, ಐದನೇ ಟಿ20ಐ ಮಳೆಯಿಂದಾಗಿ ರದ್ದು, ಟಿ20ಐ ಸರಣಿ ಹಂಚಿಕೊಂಡ ಭಾರತ ಮತ್ತು ದಕ್ಷಿಣಆಫ್ರಿಕಾ, ಬೆಂಗಳೂರಿನಲ್ಲಿ ರದ್ದಾದ ಐದನೇ ಟಿ20, ಬೆಂಗಳೂರಿನಲ್ಲಿ ಭಾರೀ ಮಳೆ, 2022ರ ಭಾರತಕ್ಕೆ ದಕ್ಷಿಣ ಆಫ್ರಿಕಾ ಪ್ರವಾಸ, ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣ,
ಸರಣಿ ಸಮ

ಬೆಂಗಳೂರು: ಭಾರತದ ಸರಣಿ ಗೆಲುವಿನ ಆಸೆಗೆ ವರುಣ ಅಡ್ಡಿ ಪಡಿಸಿದ್ದಾನೆ. ನಗರದಲ್ಲಿ ಸುರಿದ ಮಳೆಯಿಂದಾಗಿ ದಕ್ಷಿಣ ಆಫ್ರಿಕಾ ಮತ್ತು ಭಾರತ ತಂಡ ನಡುವಿನ ಐದನೇ ಟಿ20 ಪಂದ್ಯ ರದ್ದು ಮಾಡಲಾಯಿತು. ಈ ಮೂಲಕ ಸರಣಿಯು 2-2ರಲ್ಲಿ ಸಮಬಲವಾಯಿತು. ರೋಚಕ ಸರಣಿಯು ನಿರಾಶಾದಾಯಕ ಅಂತ್ಯ ಕಂಡಿತು.

ಬೆಂಗಳೂರಿನಲ್ಲಿ ಮಳೆ ಸುರಿದ ಪರಿಣಾಮವಾಗಿ ನಿಗದಿತ ಸಮಯಕ್ಕೆ ಪಂದ್ಯ ಆರಂಭವಾಗಿರಲಿಲ್ಲ. ಬಳಿಕ ಇಡೀ ಪಿಚ್ ಅನ್ನು ಹೊದಿಕೆಯಿಂದ ಮುಚ್ಚಲಾಗಿತ್ತು. ಹವಾಮಾನ ಇಲಾಖೆಯೂ ಸಹ ಮಳೆಯ ಬಗ್ಗೆ ಮುನ್ಸೂಚನೆ ನೀಡಿತ್ತು. ಸ್ವಲ್ಪ ಸಮಯದ ಬಳಿಕ ಮಳೆ ನಿಂತಾಗ ಅಂಪೈರ್ ಮೈದಾನದ ಸಿಬ್ಬಂದಿ ಜತೆ ಮಾತುಕತೆ ನಡೆಸಿದ್ರು. ಮೈದಾನದಿಂದ ನೀರನ್ನು ಹೊರತೆಗೆದ ಬಳಿಕ ಪಂದ್ಯ ರಾತ್ರಿ 7.50ಕ್ಕೆ ಆರಂಭವಾಯಿತು. ಈ ವೇಳೆ ಉಭಯ ತಂಡಗಳಿಗೆ ತಲಾ ಒಂದೊಂದು ಓವರ್‌ಗಳನ್ನು ಕಡಿತಗೊಳಿಸಲಾಗಿತ್ತು.

ಓದಿ: IND vs SA 5th T20: ಕೊನೆಯ ಪಂದ್ಯದಲ್ಲೂ ಟಾಸ್​ ಗೆದ್ದ ಆಫ್ರಿಕಾ ಬೌಲಿಂಗ್​ ಆಯ್ಕೆ, ಗೆದ್ದವರಿಗೆ ಸರಣಿ

ಟಾಸ್ ಗೆದ್ದ ಸೌತ್ ಆಫ್ರಿಕಾ ತಂಡವು ಬೌಲಿಂಗ್ ಆಯ್ದುಕೊಂಡಿತು. ದಕ್ಷಿಣ ಆಫ್ರಿಕಾ ಪರ ನಾಯಕ ಕೇಶವ್ ಮಹಾರಾಜ್ ಬೌಲಿಂಗ್ ಆರಂಭಿಸಿದ್ದರು. ಇತ್ತ ಭಾರತ ತಂಡದ ಪರ ಇಶಾನ್ ಕಿಶನ್ ಮತ್ತು ರಿತುರಾಜ್ ಗಾಯಕ್ವಾಡ್ ಆರಂಭಿಕರಾಗಿ ಕಣಕ್ಕಿಳಿದಿದ್ದರು. ಕೇಶವ್ ಮಹಾರಾಜ್ ಮೊದಲ ಓವರ್‌ನಲ್ಲಿ 16 ರನ್ ನೀಡಿದರು. ನಾಯಕನ ಈ ಓವರ್ ಅತ್ಯಂತ ದುಬಾರಿ ಎನಿಸಿತ್ತು. ಲುಂಗಿ ಎನ್‌ಗಿಡಿ ಎರಡನೇ ಓವರ್‌ನಲ್ಲಿಯೇ ಇಶಾನ್ ಕಿಶನ್​ರನ್ನು ಬೌಲ್ಡ್ ಮಾಡಿದರು. ಕಿಶನ್ 7 ಎಸೆತಗಳಲ್ಲಿ 15 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು.

ಕಗಿಸೊ ರಬಾಡ ಮೂರನೇ ಓವರ್​ನಲ್ಲಿ ಕೇವಲ ಐದು ರನ್ ನೀಡಿದರು. ಎನ್‌ಗಿಡಿ ತಮ್ಮ ಎರಡನೇ ಓವರ್​ನಲ್ಲಿ ರಿತುರಾಜ್ ಗಾಯಕ್ವಾಡ್ ಅವರನ್ನು ಔಟ್ ಮಾಡಿದರು. ಗಾಯಕ್ವಾಡ್​ 12 ಎಸೆತಗಳಲ್ಲಿ 10 ರನ್ ಗಳಿಸಿ ಪೆವಿಲಿಯನ್​ಗೆ ವಾಪಾಸ್​ ಆದರು. 21 ಎಸೆತಗಳ ಬಳಿಕ ಒಮ್ಮೆಲೆ ಮಳೆ ಸುರಿಯಲಾರಂಭಿಸಿದ್ದು, ಪಂದ್ಯವನ್ನು ನಿಲ್ಲಿಸಲಾಗಿತ್ತು. 10 ಗಂಟೆಯ ನಂತರವೂ ಮಳೆ ಮುಂದುವರಿಯುತ್ತಿತ್ತು. ಮಳೆ ನಿಲ್ಲದ ಕಾರಣ ಬಿಸಿಸಿಐ ಅಧಿಕಾರಿಗಳು ಪಂದ್ಯ ರದ್ದುಪಡಿಸಿದರು. ಸರಣಿಯು 2-2ರಲ್ಲಿ ಸಮಬಲವಾಯಿತು. ರೋಚಕ ಸರಣಿಯು ನಿರಾಶಾದಾಯಕವಾಗಿ ಅಂತ್ಯ ಕಂಡಿತು.

Last Updated : Jun 20, 2022, 7:01 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.