ETV Bharat / sports

ನವೆಂಬರ್​ 19 ರಿಂದ ಆರಂಭವಾಗಲಿದೆ 5ನೇ ಆವೃತ್ತಿಯ ಅಬುಧಾಬಿ ಟಿ10 ಲೀಗ್ - ಯುನೈಟೆಡ್ ಅರಬ್ ಎಮಿರೇಟ್ಸ್​

ಲೀಗ್​ನ ಫೈನಲ್ ಪಂದ್ಯ ಯುನೈಟೆಡ್ ಅರಬ್ ಎಮಿರೇಟ್ಸ್​ನ 50ನೇ ರಾಷ್ಟ್ರೀಯ ದಿನದಂದು ನಡೆಯಲಿದೆ. 2021ರ ಅಬುಧಾಬಿ ಟಿ10 ಲೀಗ್​ ಈ ವರ್ಷದಿಂದ 90 ನಿಮಿಷಗಳಿಗೆ ಮತ್ತು 10ರ ಬದಲಾಗಿ 15 ದಿನಗಳ ಕಾಲ ನಡೆಯಲಿದೆ.

ಅಬು ಧಾಬಿ ಟಿ10 ಲೀಗ್
ಅಬು ಧಾಬಿ ಟಿ10 ಲೀಗ್
author img

By

Published : May 6, 2021, 5:34 PM IST

ಅಬುಧಾಬಿ: 5ನೇ ಆವೃತ್ತಿಯ ಅಬು ಧಾಬಿ ಟಿ10 ಲೀಗ್​ ನವೆಂಬರ್​ 19 ರಿಂದ ಡಿಸೆಂಬರ್​ 2ರವರೆಗೆ ನಡೆಯಲಿದೆ ಎಂದು ಆಯೋಜಕರು ಬುಧವಾರ ತಿಳಿಸಿದ್ದಾರೆ.

ಇನ್ನು ಲೀಗ್​ನ ಫೈನಲ್ ಪಂದ್ಯ ಯುನೈಟೆಡ್ ಅರಬ್ ಎಮಿರೇಟ್ಸ್​ನ 50ನೇ ರಾಷ್ಟ್ರೀಯ ದಿನದಂದು ನಡೆಯಲಿದೆ. 2021ರ ಅಬುಧಾಬಿ ಟಿ10 ಲೀಗ್​ ಈ ವರ್ಷದಿಂದ 90 ನಿಮಿಷಗಳಿಗೆ ಮತ್ತು 10ರ ಬದಲಾಗಿ 15 ದಿನಗಳ ಕಾಲ ನಡೆಯಲಿದೆ.

2017ರಲ್ಲಿ ಕೇವಲ 4 ತಂಡಗಳೊಂದಿಗೆ ಶುರುವಾದ ಟೂರ್ನಿ ಇಂದು ಕ್ರಿಕೆಟ್​ ಜಗತ್ತಿನ ಒಂದು ಭಾಗವಾಗಿರುವುದು ನಮಗೆ ಹೆಮ್ಮೆ ತಂದಿದೆ. ವಿಶ್ವ ಕ್ರಿಕೆಟ್​ನ ಟಾಪ್​ ಕ್ರಿಕೆಟರ್​ಗಳು ಈ ಲೀಗ್​ನಲ್ಲಿ ಆಡುತ್ತಿರುವುದನ್ನು ನೋಡುವುದಕ್ಕೆ ಹೃದಯ ತುಂಬಿ ಬರುತ್ತಿದೆ. ಇದೊಂದು ಅತ್ಯಂತ ಜನಪ್ರಿಯ ಮಾದರಿಯ ಕ್ರಿಕೆಟ್ ಆಗಿದ್ದು, ಭವಿಷ್ಯದ ಕ್ರಿಕೆಟಿಗರು ಈ ವೇದಿಕೆಯನ್ನು ಉಪಯೋಗಿಸಿಕೊಂಡು ತಮ್ಮ ಸಾಮರ್ಥ್ಯ ತೋರಿಸಲು ನೆರವಾಗಿದೆ ಎಂದು ಟೆನ್ ಸ್ಪೋರ್ಟ್ಸ್​ ಮ್ಯಾನೇಜ್​ಮೆಂಟ್​ ಅಧ್ಯಕ್ಷ ಶಾಜಿ ಉಲ್ ಮುಲ್ಕ್​ ಹೇಳಿದ್ದಾರೆ.

ಟೂರ್ನಮೆಂಟ್​ ಕಳೆದ ವರ್ಷ ಕಠಿಣ ಕೋವಿಡ್​ ಪ್ರೋಟೋಕಾಲ್​ಗಳೊಂದಿಗೆ ಯಶಸ್ವಿಯಾಗಿ ನಡೆದಿತ್ತು. ಈ ವರ್ಷವೂ ಕೂಡ ಅದೇ ಮಾದರಿಯಲ್ಲಿ ನಡೆಯಲಿದೆ .

ಇದನ್ನು ಓದಿ:ಅಸಡ್ಡೆ ಬೇಡ, ಆದಷ್ಟು ಬೇಗ ಕೋವಿಡ್ ವ್ಯಾಕ್ಸಿನ್ ಪಡೆದುಕೊಳ್ಳಿ: ಶಿಖರ್ ಧವನ್ ಮನವಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.