ETV Bharat / sports

ರವಿಶಾಸ್ತ್ರಿಯ ಆ ಒಂದು ಹೇಳಿಕೆ ನನ್ನ ಮನಸ್ಸನ್ನು ಪುಡಿ ಪುಡಿ ಮಾಡಿತ್ತು: ಅಶ್ವಿನ್​

author img

By

Published : Dec 21, 2021, 3:29 PM IST

ನಾನು ರವಿ ಭಾಯ್​ ಅವರನ್ನು ತುಂಬಾ ಗೌರವಿಸುತ್ತೇನೆ. ನಾನೊಬ್ಬನೇ ಅಲ್ಲ ನಾವೆಲ್ಲರೂ ಕೂಡ. ನಾವೆಲ್ಲರೂ ಕೆಲವು ವಿಷಯಗಳ ಬಗ್ಗೆ ಮಾತನಾಡಬಹುದು ಮತ್ತು ಹಿಂತೆಗೆದುಕೊಳ್ಳಬಹುದು ಎಂಬುದನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ಆದರೆ, ಅವರ ಹೇಳಿಕೆ, ನನ್ನನ್ನು ಆ ಕ್ಷಣದಲ್ಲಿ ನಜ್ಜುಗುಜ್ಜಾಗಿಸಿತ್ತು. ಬಸ್ಸಿನಡಿ ಸಿಕ್ಕಿ ಹಾಕಿಕೊಂಡಂತಾಗಿದ್ದೆ ಎಂದು ಇಎಸ್​ಪಿಎನ್​ಗೆ ತಿಳಿಸಿದ್ದಾರೆ..

Ashwin on Ravi Shastri terming Kuldeep Yadav as India's no.1 overseas spinner
ರವಿಚಂದ್ರನ್ ಅಶ್ವಿನ್

ನವದೆಹಲಿ : ಭಾರತ ತಂಡದ ಮಾಜಿ ಮುಖ್ಯ ಕೋಚ್​ ರವಿಶಾಸ್ತ್ರಿ ಆಸ್ಟ್ರೇಲಿಯಾದಲ್ಲಿ ಅದ್ಭುತ ಪ್ರದರ್ಶನ ತೋರಿದ್ದ ಕುಲ್ದೀಪ್​ ಯಾದವ್​ ಅವರನ್ನು ಭಾರತದ ನಂಬರ್​ 1 ಸ್ಪಿನ್ನರ್​ ಎಂದು ಹೇಳಿದ ಸಂದರ್ಭದಲ್ಲಿ ತಮ್ಮ ಮನಸ್ಸು ನುಚ್ಚುನೂರಾದಂತಹ ಅನುಭವವಾಗಿತ್ತು ಎಂದು ರವಿಚಂದ್ರನ್​ ಅಶ್ವಿನ್​ ಹೇಳಿದ್ದಾರೆ.

2019ರ ಆಸ್ಟ್ರೇಲಿಯಾ ಪ್ರವಾಸದಲ್ಲಿ ಕುಲ್ದೀಪ್​ ಯಾದವ್​ ಸಿಡ್ನಿ ಟೆಸ್ಟ್​ ಪಂದ್ಯದಲ್ಲಿ 5 ವಿಕೆಟ್​ ಪಡೆದಿದ್ದರು. ಈ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡು ಭಾರತ 2-1ರಲ್ಲಿ ಸರಣಿ ಜಯಿಸಿತ್ತು. ಈ ಸಂದರ್ಭದಲ್ಲಿ ಮಾತನಾಡಿದ್ದ ಶಾಸ್ತ್ರಿ, ಲೆಗ್​ ಸ್ಪಿನ್ನರ್​ ಯಾದವ್​ರನ್ನು ವಿದೇಶಿ ಪಿಚ್​​ನಲ್ಲಿ ಭಾರತದ ನಂಬರ್ 1 ಸ್ಪಿನ್ನರ್ ಎಂದು ಗುಣಗಾನ ಮಾಡಿದ್ದರು. ಆದರೆ, ಇದು ತಮ​​ಗೆ ಬೇಸರವನ್ನುಂಟು ಮಾಡಿತ್ತು ಎಂದು ಅಶ್ವಿನ್ ಹೇಳಿದ್ದಾರೆ.

ನಾನು ರವಿ ಭಾಯ್​ ಅವರನ್ನು ತುಂಬಾ ಗೌರವಿಸುತ್ತೇನೆ. ನಾನೊಬ್ಬನೇ ಅಲ್ಲ ನಾವೆಲ್ಲರೂ ಕೂಡ. ನಾವೆಲ್ಲರೂ ಕೆಲವು ವಿಷಯಗಳ ಬಗ್ಗೆ ಮಾತನಾಡಬಹುದು ಮತ್ತು ಹಿಂತೆಗೆದುಕೊಳ್ಳಬಹುದು ಎಂಬುದನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ಆದರೆ, ಅವರ ಹೇಳಿಕೆ, ನನ್ನನ್ನು ಆ ಕ್ಷಣದಲ್ಲಿ ನಜ್ಜುಗುಜ್ಜಾಗಿಸಿತ್ತು. ಬಸ್ಸಿನಡಿ ಸಿಕ್ಕಿ ಹಾಕಿಕೊಂಡಂತಾಗಿದ್ದೆ ಎಂದು ಇಎಸ್​ಪಿಎನ್​ಗೆ ತಿಳಿಸಿದ್ದಾರೆ.

ಆದರೆ, ನಾವೆಲ್ಲರೂ ತಂಡದ ಸಹ ಆಟಗಾರರ ಯಶಸ್ಸನ್ನು ಹೇಗೆ ಸಂಭ್ರಮಿಸಬೇಕೆಂದು ಮಾತನಾಡುತ್ತಿರುತ್ತೇವೆ. ಕುಲ್ದೀಪ್ ಪ್ರದರ್ಶನ ನನಗೆ ಸಂತೋಷ ತಂದಿತ್ತು. ಏಕೆಂದರೆ, ನನ್ನಿಂದ ಆಸ್ಟ್ರೇಲಿಯಾದಲ್ಲಿ 5 ವಿಕೆಟ್ ಪಡೆಯಲು ಸಾಧ್ಯವಾಗಿರಲಿಲ್ಲ. ಆದರೆ, ಆತ ತೆಗೆದುಕೊಂಡಿದ್ದ. ಅದು ಎಷ್ಟು ದೊಡ್ಡ ಸಾಧನೆ ಎನ್ನುವುದು ನನಗೆ ತಿಳಿದಿದೆ.

ನಾನು ಸಾಕಷ್ಟು ಬಾರಿ ಅತ್ಯುತ್ತಮವಾಗಿ ಬೌಲಿಂಗ್ ಮಾಡಿದರೂ ನನ್ನಿಂದ 5 ವಿಕೆಟ್ ಪಡೆಯಲು ಸಾಧ್ಯವಾಗಿರಲಿಲ್ಲ. ಪ್ರಮಾಣಿಕವಾಗಿ ಅವರ ಸಾಧನೆಯನ್ನು ಆನಂದಿಸಿದ್ದೆ. ಆಸ್ಟ್ರೇಲಿಯಾದಲ್ಲಿ ಸರಣಿ ಗೆಲ್ಲುವುದು ನಮಗೆಲ್ಲರಿಗೂ ಅತ್ಯುತ್ತಮ ಭಾವನೆ ಉಂಟು ಮಾಡಿತ್ತು ಎಂದಿದ್ದಾರೆ.

"ಆದರೆ, ನಾನು ಅವನ(ಕುಲ್ದೀಪ್​) ಸಂತೋಷ ಮತ್ತು ತಂಡದ ಯಶಸ್ಸಿನ ಭಾಗವಾಗಬೇಕಾದರೆ, ನಾನು ಅಲ್ಲಿಯೇ ಎಲ್ಲರೊಂದಿಗೆ ಒಬ್ಬನಾಗಿದ್ದೇನೆ ಎಂಬ ಭಾವನೆ ಇರಬೇಕು. ಆದರೆ, ನಾನು ಹತಾಷನಾಗಿದ್ದಾಗ ಅಲ್ಲಿಗೆ ಹೇಗೆ ಬರಬೇಕು? ತಂಡ ಅಥವಾ ತಂಡದ ಸಹ ಆಟಗಾರನ ಯಶಸ್ಸಿನ ಪಾರ್ಟಿಯನ್ನು ಹೇಗೆ ಆನಂದಿಸಬೇಕು? ಹಾಗಾಗಿ, ನಾನು ನನ್ನ ರೂಮಿಗೆ ಹಿಂತಿರುಗಿದೆ ಮತ್ತು ನಾನು ನನ್ನ ಹೆಂಡತಿ ಮಕ್ಕಳೊಂದಿಗೆ ಮಾತನಾಡಿದೆ. ಆದರೂ ನಾನು ಪಾರ್ಟಿಯಲ್ಲಿ ಪಾಲ್ಗೊಂಡಿದ್ದೆ. ಏಕೆಂದರೆ, ನಾವು ಬಹುದೊಡ್ಡ ಸರಣಿಯನ್ನು ಗೆದ್ದಿದ್ದೆವು " ಎಂದು ಅಶ್ವಿನ್ ತಮಗೆ ರವಿಶಾಸ್ತ್ರಿ ಹೇಳಿಕೆಯಿಂದ ಉಂಟಾಗಿದ್ದ ಭಾವನೆಯನ್ನು ಹೊರ ಹಾಕಿದ್ದಾರೆ.

ಇದನ್ನೂ ಓದಿ:ದಕ್ಷಿಣ ಆಫ್ರಿಕಾ ನಂತರ ಹಾರ್ದಿಕ್ ಪಾಂಡ್ಯ ವಿಂಡೀಸ್​ ಸರಣಿಯಿಂದಲೂ ಹೊರಗುಳಿಯುವ ಸಾಧ್ಯತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.