ಜಮೈಕಾ: ಪಾಕಿಸ್ತಾನ ತಂಡದ ಆಪತ್ಪಾಂಧವ ಎನಿಸಿಕೊಂಡಿರುವ ಫವಾದ್ ಆಲಮ್ ವೆಸ್ಟ್ ಇಂಡೀಸ್ ವಿರುದ್ಧ ಆಕರ್ಷಕ ಶತಕ ಸಿಡಿಸುವ ಮೂಲಕ ವೇಗವಾಗಿ 5 ಶತಕ ಸಿಡಿಸಿದ ಏಷ್ಯಾದ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ.
ಜಮೈಕಾದಲ್ಲಿ ವಿಂಡೀಸ್ ವಿರುದ್ಧ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಫವಾದ್ ಅಜೇಯ 124 ರನ್ ಗಳಿಸಿದ್ದರು. 76 ರನ್ ಗಳಿಸಿದ್ದ ವೇಳೆ ಕಾಲಿನ ನೋವಿನ ಕಾರಣ ವಿಶ್ರಾಂತಿ ತೆಗೆದುಕೊಂಡಿದ್ದ ಫವಾದ್, 3ನೇ ದಿನ ಕಣಕ್ಕಿಳಿದು ಶತಕ ಪೂರ್ಣಗೊಳಿಸಿದರು. 35 ವರ್ಷದ ಕ್ರಿಕೆಟಿಗನ ಅದ್ಭುತ ಪ್ರಯತ್ನದಿಂದ ಪಾಕಿಸ್ತಾನ ತಂಡ 302-9 ರನ್ಗಳಿಗೆ ಡಿಕ್ಲೇರ್ ಘೋಷಿಸಿತು.
-
5⃣ centuries
— ICC (@ICC) August 23, 2021 " class="align-text-top noRightClick twitterSection" data="
5⃣ countries
Pakistan's @iamfawadalam25 is going places!#WIvPAK | #WTC23 pic.twitter.com/G18nVNuJHU
">5⃣ centuries
— ICC (@ICC) August 23, 2021
5⃣ countries
Pakistan's @iamfawadalam25 is going places!#WIvPAK | #WTC23 pic.twitter.com/G18nVNuJHU5⃣ centuries
— ICC (@ICC) August 23, 2021
5⃣ countries
Pakistan's @iamfawadalam25 is going places!#WIvPAK | #WTC23 pic.twitter.com/G18nVNuJHU
11 ವರ್ಷಗಳ ಕಾಲ ಟೆಸ್ಟ್ ತಂಡದಲ್ಲಿ ಅವಕಾಶ ವಂಚಿತನಾಗಿದ್ದ ಫವಾದ್ ಕಳೆದ ವರ್ಷ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಅವಕಾಶ ಪಡೆದಿದ್ದರು. ಇದೀಗ ಕಳೆದ 8 ತಿಂಗಳಲ್ಲಿ 4 ಶತಕ ಸಿಡಿಸುವ ಮೂಲಕ ವೇಗವಾಗಿ 5 ಶತಕ ಸಿಡಿಸಿದ ಏಷ್ಯಾದ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ. 13ನೇ ಟೆಸ್ಟ್ ಪಂದ್ಯವನ್ನಾಡುತ್ತಿರುವ ಫವಾದ್ 5 ಶತಕ ಹಾಗೂ ಒಂದು ಅರ್ಧಶತಕ ಸಿಡಿಸಿದ್ದಾರೆ.
ವೇಗವಾಗಿ 5 ಶತಕ ಸಿಡಿಸಿದ ಏಷ್ಯಾದ ಬ್ಯಾಟ್ಸ್ಮನ್
- ಫವಾದ್ ಆಲಂ- 22 ಇನ್ನಿಂಗ್ಸ್
- ಚೇತೇಶ್ವರ್ ಪೂಜಾರ- 24 ಇನ್ನಿಂಗ್ಸ್
- ಸುನೀಲ್ ಗವಾಸ್ಕರ್- 25 ಇನ್ನಿಂಗ್ಸ್
- ಸೌರವ್ ಗಂಗೂಲಿ- 25 ಇನ್ನಿಂಗ್ಸ್
- ವಿಜಯ ಹಜಾರೆ- 26 ಇನ್ನಿಂಗ್ಸ್