ETV Bharat / sports

ಕೊಹ್ಲಿ, ರೋಹಿತ್, ಧವನ್ ರಂತಹ ಸ್ಟಾರ್​ ಆಟಗಾರರನ್ನೇ ಹಿಂದಿಕ್ಕಿದ ಗಾಯಕ್ವಾಡ್​ - ಚೆನ್ನೈ ಸೂಪರ್ ಕಿಗ್ಸ್

ಹೈದರಾಬಾದ್​ ವಿರುದ್ಧ ಪಂದ್ಯದಲ್ಲಿ ಗಾಯಕ್ವಾಡ್ 23 ರನ್​ಗಳಿಸಿದ್ದ ವೇಳೆ ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ವೇಗವಾಗಿ 1000 ರನ್​ ಪೂರೈಸಿದ ಬ್ಯಾಟರ್ ಎಂಬ ದಾಖಲೆಯನ್ನು ಸಚಿನ್​ ತೆಂಡೂಲ್ಕರ್ ಅವರೊಂದಿಗೆ ಹಂಚಿಕೊಂಡರು. ಸಚಿನ್​ ಕೂಡ ತಮ್ಮ 31ನೇ ಐಪಿಎಲ್ ಇನ್ನಿಂಗ್ಸ್​ನಲ್ಲಿ ಈ ಸಾಧನೆ ಮಾಡಿದ್ದರು.

Ruturaj Gaikwad Equals Sachin Tendulkar  record
ಋತುರಾಜ್ ಗಾಯಕ್ವಾಡ್ ದಾಖಲೆ
author img

By

Published : May 2, 2022, 5:39 PM IST

ಪುಣೆ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆರಂಭಿಕ ಬ್ಯಾಟರ್​ ಋತುರಾಜ್ ಗಾಯಕ್ವಾಡ್​ ಭಾನುವಾರ ನಡೆದ ಸನ್​ರೈಸರ್ಸ್​ ವಿರುದ್ಧದ ಪಂದ್ಯದಲ್ಲಿ ವಿಶೇಷ ಸಾಧನೆಗೆ ಪಾತ್ರರಾಗಿದ್ದಾರೆ. 24 ವರ್ಷದ ಬ್ಯಾಟರ್ ಐಪಿಎಲ್ ಇತಿಹಾಸದಲ್ಲಿ ವೇಗವಾಗಿ 1000 ರನ್​ ಪೂರೈಸಿದ ಭಾರತದ ಬ್ಯಾಟರ್ ಎಂಬ ದಾಖಲೆಯನ್ನು ದಂತಕತೆ ಸಚಿನ್ ತೆಂಡೂಲ್ಕರ್ ಅವರೊಂದಿಗೆ ಹಂಚಿಕೊಟ್ಟಿದ್ದಾರೆ.

ಭಾನುವಾರ ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್​ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಗಾಯಕ್ವಾಡ್​ 57 ಎಸೆತಗಳಲ್ಲಿ ತಲಾ 6 ಬೌಂಡರಿ ಮತ್ತು ಸಿಕ್ಸರ್​ಗಳ ಸಹಿತ 99 ರನ್​ಗಳಿಸಿದ್ದರು. ಕೇವಲ ಒಂದು ರನ್​ನಿಂದ ತಮ್ಮ 2ನೇ ಐಪಿಎಲ್ ಶತಕ ಮಿಸ್​ ಮಾಡಿಕೊಂಡರು. ಗಾಯಕ್ವಾಡ್​ ಮತ್ತು ಕಾನ್ವೆ(85) ಮತ್ತು ಮುಕೇಶ್ ಚೌಧರಿ ಅವರ ಅದ್ಭುತ ಬೌಲಿಂಗ್ ನೆರವಿನಿಂದ ಚೆನ್ನೈ 18 ರನ್​ಗಳ ಜಯ ಸಾಧಿಸಿತು.

ಈ ಪಂದ್ಯದಲ್ಲಿ ಗಾಯಕ್ವಾಡ್ 23 ರನ್​ಗಳಿಸಿದ್ದ ವೇಳೆ ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ವೇಗವಾಗಿ 1000 ರನ್​ ಪೂರೈಸಿದ ಬ್ಯಾಟರ್ ಎಂಬ ದಾಖಲೆಯನ್ನು ಸಚಿನ್​ ತೆಂಡೂಲ್ಕರ್ ಅವರೊಂದಿಗೆ ಹಂಚಿಕೊಂಡರು. ಸಚಿನ್​ ಕೂಡ ತಮ್ಮ 31ನೇ ಐಪಿಎಲ್ ಇನ್ನಿಂಗ್ಸ್​ನಲ್ಲಿ ಈ ಸಾಧನೆ ಮಾಡಿದ್ದರು.

ಇವರ ನಂತರದ ಸ್ಥಾನದಲ್ಲಿ ಸುರೇಶ್ ರೈನಾ (34), ರಿಷಭ್ ಪಂತ್ (35), ದೇವದತ್ ಪಡಿಕ್ಕಲ್( 35), ಗೌತಮ್ ಗಂಭೀರ್​, (36) ಎಂ.ಎಸ್.ಧೋನಿ(37) ,ರೋಹಿತ್ ಶರ್ಮಾ( 37) ,ರಹಾನೆ(37),ಗಂಗೂಲಿ(38), ಕೆ.ಎಲ್.ರಾಹುಲ್​(38) ವಿರಾಟ್​ ಕೊಹ್ಲಿ(45) ಇದ್ದಾರೆ.

ಇದನ್ನೂ ಓದಿ:ವೃತ್ತಿ ಜೀವನದ ಅಂತ್ಯದವರೆಗೆ ಧೋನಿಗೆ ಸಿಕ್ಕಂತಹ ಬೆಂಬಲ ನಮಗ್ಯಾರಿಗೂ ಸಿಗಲಿಲ್ಲ: ಯುವರಾಜ್ ಸಿಂಗ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.