ETV Bharat / sports

Bhuvneshwar Kumar: ಭಾರತ ತಂಡಕ್ಕೆ ವಿದಾಯ ಹೇಳ್ತಾರಾ ಸ್ಟಾರ್​​ ವೇಗಿ.?

Bhuvneshwar Kumar Instagram bio: ಒಂದು ಕಾಲದಲ್ಲಿ, ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಬೌಲರ್ ಮತ್ತು ಎಲ್ಲ ಮೂರು ಮಾದರಿಯ ಕ್ರಿಕೆಟ್​ನಲ್ಲಿ ಆಡಿದ ವೇಗದ ಬೌಲರ್ ಭುವನೇಶ್ವರ್‌ ಕುಮಾರ್‌ ಶೀಘ್ರದಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಲಿದ್ದಾರೆ, ಏಕೆಂದರೆ ಸ್ಟಾರ್ ಆಟಗಾರ ಈಗ ತಮ್ಮ Instagram ಬಯೋದಿಂದ ಕ್ರಿಕೆಟರ್ ಪದವನ್ನು ತೆಗೆದುಹಾಕಿದ್ದಾರೆ.

Bhuvneshwar Kumar
ಭುವನೇಶ್ವರ್‌ ಕುಮಾರ್‌
author img

By

Published : Jul 28, 2023, 4:23 PM IST

ನವದೆಹಲಿ: ಭಾರತ ಕ್ರಿಕೆಟ್‌ ತಂಡದ ಪರ ಎಲ್ಲಾ ಮೂರು ಮಾದರಿಯಲ್ಲೂ ಆಡುವ ಹಾಗೂ ಎಲ್ಲಾ ಮೂರು ಮಾದರಿಗಳಲ್ಲಿ 5 ವಿಕೆಟ್‌ ಕಬಳಿಸಿ ದಾಖಲೆ ಬರೆದಿರುವ ವೇಗದ ಬೌಲರ್‌ ಭುವನೇಶ್ವರ್‌ ಕುಮಾರ್‌ ಈಗ ಭಾರತದ ಪರ ಆಡುತ್ತಿರುವುದು ಅಪರೂಪ ಆಗಿದೆ. ಶೀಘ್ರದಲ್ಲೇ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಲಿದ್ದಾರೆ. ಭಾರತ ತಂಡದ ಆಯ್ಕೆ ಮಂಡಳಿ ಮತ್ತು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯಿಂದ ನಿರಂತರ ನಿರ್ಲಕ್ಷ್ಯಕ್ಕೆ ಗುರಿಯಾಗಿರುವ ಭುನೇಶ್ವರ್ ಕುಮಾರ್ ತಮ್ಮ ಇನ್‌ಸ್ಟಾಗ್ರಾಮ್ ಬಯೋದಿಂದ ಕ್ರಿಕೆಟರ್ ಎಂಬ ಪದವನ್ನು ತೆಗೆದುಹಾಕಿದ್ದಾರೆ.

ಭಾರತೀಯ ವೇಗದ ಬೌಲರ್ ಕ್ರಿಕೆಟರ್ ಪದವನ್ನು ತೆಗೆದುಹಾಕಿದ್ದರಿಂದ ನಿವೃತ್ತಿಯ ವಿಷಯ ಮುನ್ನಲೆಗೆ ಬಂದಿದೆ. ಸಮಾಜಿಕ ಜಾಲತಾಣದಲ್ಲಿ ಭುವನೇಶ್ವರ್‌ ಕುಮಾರ್‌​ ಕುರಿತು ಕ್ರಿಕೆಟ್​ ಅಭಿಮಾನಿಗಳು ಚರ್ಚಿಸುತ್ತಿದ್ದಾರೆ. ಭುವನೇಶ್ವರ್ ಅವರ ಇನ್‌ಸ್ಟಾ ಬಯೋ ಹಿಂದೆ 'ಭಾರತೀಯ ಕ್ರಿಕೆಟಿಗ' ಎಂದಿತ್ತು. ಆದರೆ, ಈಗ ಅವರ ಬಯೋ ಬದಲಾಗಿದ್ದು ಅದರಲ್ಲಿ "ಭಾರತೀಯ, ಕುಟುಂಬ ಮೊದಲು, ಪ್ರಾಣಿ ಪ್ರೇಮಿ, ಕ್ಯಾಶುಯಲ್ ಗೇಮರ್" ಎಂದಿದೆ.

ಭಾರತ ತಂಡದ ಈ ವೇಗದ ಬೌಲರ್ 2022 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕಾಗಿ ಕೊನೆಯ ಏಕದಿನ ಪಂದ್ಯವನ್ನು ಆಡಿದರು, ಅಲ್ಲಿ ಅವರು 8 ಓವರ್‌ ಮಾಡಿದ್ದು, ಯಾವುದೇ ವಿಕೆಟ್​ ಪಡೆದುಕೊಂಡಿರಲಿಲ್ಲ. ಆ ನಂತರ ಗಾಯ ಮತ್ತು ಕಳಪೆ ಫಾರ್ಮ್‌ನಿಂದಾಗಿ ಅವರನ್ನು ಏಕದಿನ ತಂಡದಿಂದ ಕೈಬಿಡಲಾಯಿತು. ಆದರೆ, ಭುವನೇಶ್ವರ್‌ ಕುಮಾರ್‌ ಅವರು ನವೆಂಬರ್ 2022 ರಲ್ಲಿ ನಡೆದ ಟಿ 20 ವಿಶ್ವಕಪ್​ ತಂಡದ ಭಾಗವಾಗಿದ್ದರು. ವಿಶ್ವಕಪ್​ನಲ್ಲಿ ಅವರು 4 ಪಂದ್ಯಗಳನ್ನು ಆಡಿದ್ದು 3 ವಿಕೆಟ್ ಪಡೆದಿದ್ದರು. ವಿಶ್ವಕಪ್​ನಲ್ಲಿ ಅವರಿಂದ ಗಮನಾರ್ಹ ಪ್ರದರ್ಶನ ಕಂಡು ಬಂದಿರಲಿಲ್ಲ.

ಅವರು ಕೊನೆಯ ಬಾರಿಗೆ ನೇಪಿಯರ್‌ನಲ್ಲಿ ನ್ಯೂಜಿಲ್ಯಾಂಡ್​ ವಿರುದ್ಧ ಭಾರತಕ್ಕಾಗಿ ಟಿ-20 ಪಂದ್ಯವನ್ನು ಆಡಿದರು, ಅಲ್ಲಿ ಅವರು 4 ಓವರ್‌ಗಳನ್ನು ಬೌಲ್ ಮಾಡಿದರು. ಈ ಅವಧಿಯಲ್ಲಿ ಅವರು ಯಾವುದೇ ವಿಕೆಟ್ ಪಡೆಯದಿದ್ದರೂ, ರನ್​ಗೆ ಕಡಿವಾಣ ಹಾಕಿದ್ದರು. ಇದರ ನಂತರ, ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಗೂ ಅವರನ್ನು ಆಯ್ಕೆ ಮಾಡಲಾಗಿಲ್ಲ. ಸದ್ಯಕ್ಕೆ ಅವರನ್ನು ಬಿಸಿಸಿಐ ಒಪ್ಪಂದದ ಭಾಗವಾಗಿಯೂ ಮಾಡಲಾಗಿಲ್ಲ. ಅಲ್ಲದೇ ಭುವನೇಶ್ವರ್‌ ಕುಮಾರ್‌ ಅವರನ್ನು ಈ ಬಾರಿಯ ಗುತ್ತಿಗೆಯಲ್ಲಿ ಬಿಸಿಸಿಐ ಪರಿಗಣಿಸಿಲ್ಲ. ಆದ್ದರಿಂದಲೇ ಭುವಿ ಅಂತರಾಷ್ಟ್ರೀಯ ಕ್ರೀಡಾ ಜೀವನ ಕೊನೆಯ ಹಂತದಲ್ಲಿದೆಯಾ ಎಂಬ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಹುಟ್ಟಿಕೊಂಡಿದೆ. ಅಲ್ಲದೇ ಈ ವರ್ಷ ನಡೆಯುವ ವಿಶ್ವಕಪ್​​ನಲ್ಲಿ ಭುವಿಗೆ ಸ್ಥಾನ ಇರಲಿದೆಯಾ ಎಂಬ ಪ್ರಶ್ನೆಯೂ ಉದ್ಭವಿಸಿದೆ.

ಭುವನೇಶ್ವರ್‌ ಕುಮಾರ್‌ ಅವರು ಭಾರತ ತಂಡಕ್ಕಾಗಿ ಒಟ್ಟು 21 ಟೆಸ್ಟ್ ಪಂದ್ಯಗಳು, 121 ಏಕದಿನ ಮತ್ತು 87 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರು ಕ್ರಮವಾಗಿ 63, 141 ಮತ್ತು 90 ವಿಕೆಟ್​ಗಳನ್ನು ಪಡೆದಿದ್ದಾರೆ. ಭುನೇಶ್ವರ್ ಕುಮಾರ್ ಟೆಸ್ಟ್, ಏಕದಿನ ಮತ್ತು ಟಿ20 ಪಂದ್ಯಗಳಲ್ಲಿ 5 ವಿಕೆಟ್ ಪಡೆದ ದಾಖಲೆ ಮಾಡಿದ್ದಾರೆ.

ಇದನ್ನೂ ಓದಿ: West Indies vs India, 1st ODI: ಮೊದಲ ಏಕದಿನ ಪಂದ್ಯದಲ್ಲಿ ವೆಸ್ಟ್​ ಇಂಡೀಸ್​ ಮಣಿಸಿದ ಭಾರತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.