ದುಬೈ : ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 2020-21ರ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ಮಂಗಳವಾರ ಸಾರ್ವಕಾಲಿಕ ಟೆಸ್ಟ್ ಸರಣಿ ಎಂದು ಹೆಸರಿಸಲಾಗಿದೆ.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ಗೂ ಮುನ್ನ ನಾವು ಸಾರ್ವಕಾಲಿಕ ಟೆಸ್ಟ್ ಸರಣಿಯನ್ನು ನಿರ್ಧಿರಿಸಿದ್ದೇವೆ. 15 ಬಾರಿಯ ಮುಖಾಮುಖಿಯ ನಂತರ ಮತ್ತು ನಮ್ಮ ಸಾಮಾಜಿಕ ಚಾನೆಲ್ಗಳಲ್ಲಿ 70 ಲಕ್ಷಕ್ಕೂ ಹೆಚ್ಚು ಮತಗಳನ್ನು ಪಡೆದಿರುವ ವಿನ್ನರ್ ಯಾರೆಂದು ನಾವು ಕಂಡುಕೊಂಡಿದ್ದೇವೆ. ಆ ಕಿರೀಟ 2020-21ರ ಬಾರ್ಡರ್-ಗವಾಸ್ಕರ್ ಟ್ರೋಫಿಗೆ ಸಂದಿದೆ" ಎಂದು ಐಸಿಸಿ ಟ್ವೀಟ್ ಮೂಲಕ ಹೇಳಿದೆ.
ಒಟ್ಟು 16 ಸರಣಿಗಳಲ್ಲಿ 2020/21ರ ಬಾರ್ಡರ್-ಗವಾಸ್ಕರ್ ಸರಣಿ ಮತ್ತು 1999ರ ಭಾರತ ಮತ್ತು ಪಾಕಿಸ್ತಾನ ನಡುವಿನ ಟೆಸ್ಟ್ ಸರಣಿಗಳ ನಡುವೆ ಸ್ಪರ್ಧೆ ಏರ್ಪಟ್ಟಿತ್ತು. ಕೊನೆಗೆ ಬಾರ್ಡರ್-ಗವಾಸ್ಕರ್ ಟ್ರೋಫಿ ಹೆಚ್ಚಿನ ಮತಗಳನ್ನು ಪಡೆದು ವಿಜೇತವಾಗಿದೆ.
-
How we got there #TheUltimateTestSeries pic.twitter.com/XGM4To5W86
— ICC (@ICC) June 8, 2021 " class="align-text-top noRightClick twitterSection" data="
">How we got there #TheUltimateTestSeries pic.twitter.com/XGM4To5W86
— ICC (@ICC) June 8, 2021How we got there #TheUltimateTestSeries pic.twitter.com/XGM4To5W86
— ICC (@ICC) June 8, 2021
ಸೆಮಿಫೈನಲ್ನಲ್ಲಿ 2005ರ ಆ್ಯಶಷ್ ಸರಣಿಯನ್ನು 1999ರಲ್ಲಿ ಭಾರತ ಮತ್ತು ಪಾಕಿಸ್ತಾನ ಟೆಸ್ಟ್ ಸರಣಿ ಹಿಂದಿಕ್ಕಿ ಫೈನಲ್ ಪ್ರವೇಶಿಸಿದರೆ, ಮತ್ತೊಂದು ಸೆಮಿಫೈನಲ್ನಲ್ಲಿ 2021ರ ಬಾರ್ಡರ್ ಗವಾಸ್ಕರ್ ಟ್ರೋಫಿ 2001ರ ಭಾರತ ಮತ್ತು ಆಸ್ಟ್ರೇಲಿಯಾ ಟೆಸ್ಟ್ ಸರಣಿಯನ್ನು ಹಿಂದಿಕ್ಕಿ ಫೈನಲ್ ಪ್ರವೇಶಿಸಿತ್ತು.
2021ರ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯನ್ನು ಯುವ ಭಾರತ ತಂಡ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಮಣಿಸಿ 2-1ರಲ್ಲಿ ಸರಣಿ ಜಯಿಸಿತ್ತು.
ಇದನ್ನು ಓದಿ : ಭಾರತಕ್ಕಿಂತ ಕಿವೀಸ್ WTC ಫೈನಲ್ ಗೆಲ್ಲುವ ನೆಚ್ಚಿನ ತಂಡ: ಆದರೆ ಕೊಹ್ಲಿ ಟಾಪ್ ಸ್ಕೋರರ್ : ಅಗರ್ಕರ್ ವಿಶ್ವಾಸ