ETV Bharat / sports

ಅವರಿಬ್ಬರಿಗೋಸ್ಕರ ಇನ್ನೆಷ್ಟು ದಿನ ಯುವಕರನ್ನ ಹೊರಗಿಡ್ತೀರಾ?: ರಹಾನೆ-ಪೂಜಾರ ಆಟಕ್ಕೆ ನೆಟ್ಟಿಗರ ಅಸಮಾಧಾನ - ಭಾರತ ತಂಡದಿಂದ ದಕ್ಷಿಣ ಆಫ್ರಿಕಾ ಪ್ರವಾಸ

ಕೇಪ್​ಟೌನ್​ ಟೆಸ್ಟ್​ನಲ್ಲಿ ಮೊದಲ ಇನ್ನಿಂಗ್ಸ್​ನಲ್ಲಿ ಸೊನ್ನೆ ಸುತ್ತಿದ್ದ ಅಜಿಂಕ್ಯ ರಹಾನೆ 2ನೇ ಇನ್ನಿಂಗ್ಸ್​​ನಲ್ಲಿ ಒಂದು ರನ್​ಗೆ ವಿಕೆಟ್​ ಒಪ್ಪಿಸಿದರು. ಇತ್ತ ಪೂಜಾರ ಮೊದಲ ಇನ್ನಿಂಗ್ಸ್​ನಲ್ಲಿ 43 ರನ್​ಗಳಿಸಿದರೂ, ಎರಡನೇ ಇನ್ನಿಂಗ್ಸ್​ನಲ್ಲಿ ಕೇವಲ 9 ರನ್​ಗಳಿಗೆ ವಿಕೆಟ್​ ಒಪ್ಪಿಸಿ ನಿರಾಸೆ ಮೂಡಿಸಿದ್ದಾರೆ.

Pujara - Ajinkya Rahane Cape Town Test
ಚೇತೇಶ್ವರ್ ಪೂಜಾರ - ಅಜಿಂಕ್ಯ ರಹಾನೆ
author img

By

Published : Jan 13, 2022, 3:36 PM IST

ಕೇಪ್ ​ಟೌನ್​: ಭಾರತ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್​ಗಳಾದ ಚೇತೇಶ್ವರ್ ಪೂಜಾರ ಮತ್ತು ಅಜಿಂಕ್ಯ ರಹಾನೆ ಸರಣಿ ನಿರ್ಧರಿಸುವ ಪಂದ್ಯದಲ್ಲಿ ನಿರಾಸದಾಯಕ ಬ್ಯಾಟಿಂಗ್ ಪ್ರದರ್ಶನ ತೋರಿರುವುದಕ್ಕೆ ಕೆಲವು ಕ್ರಿಕೆಟ್​ ವಿಶ್ಲೇಷಕರು ಸೇರಿದಂತೆ ಭಾರತೀಯ ಕ್ರಿಕೆಟ್​ ಅಭಿಮಾನಿಗಳು ಅಸಮಾಧಾನ ಹೊರಹಾಕಿದ್ದಾರೆ. ಇನ್ನು ಮುಂದಾದರು ಬೆಂಚ್​ ಕಾಯುತ್ತಿರುವ ಪ್ರತಿಭಾನ್ವಿತ ಆಟಗಾರರಿಗೆ ಅವಕಾಶ ಕೊಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿದ್ದಾರೆ.

ಕೇಪ್​ಟೌನ್​ ಟೆಸ್ಟ್​ನಲ್ಲಿ ಮೊದಲ ಇನ್ನಿಂಗ್ಸ್​ನಲ್ಲಿ ಸೊನ್ನೆ ಸುತ್ತಿದ್ದ ಅಜಿಂಕ್ಯ ರಹಾನೆ 2ನೇ ಇನ್ನಿಂಗ್ಸ್​​ನಲ್ಲಿ ಒಂದು ರನ್​ಗೆ ವಿಕೆಟ್​ ಒಪ್ಪಿಸಿದರು. ಇತ್ತ ಪೂಜಾರ ಮೊದಲ ಇನ್ನಿಂಗ್ಸ್​ನಲ್ಲಿ 43 ರನ್​ಗಳಿಸಿದರೂ, ಎರಡನೇ ಇನ್ನಿಂಗ್ಸ್​ನಲ್ಲಿ ಕೇವಲ 9 ರನ್​ಗಳಿಗೆ ವಿಕೆಟ್​ ಒಪ್ಪಿಸಿ ನಿರಾಸೆ ಮೂಡಿಸಿದ್ದಾರೆ.

  • Cheteshwar Pujara in the Test series against South Africa: 124 runs in 6 innings

    Ajinkya Rahane in the Test series against South Africa: 136 runs in 6 innings

    India's senior pros' struggle to score big runs continues 😐😐#INDvSA #Cricket pic.twitter.com/SuZwQ9c4WZ

    — Wisden India (@WisdenIndia) January 13, 2022 " class="align-text-top noRightClick twitterSection" data=" ">

ರಹಾನೆ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ 6 ಇನ್ನಿಂಗ್ಸ್​ಗಳಲ್ಲಿ 48, 20, 0, 58, 9, 0 ರನ್​ಗಳಿಗೆ ವಿಕೆಟ್​ ಒಪ್ಪಿಸಿದ್ದರಾರೆ. ಅವರು 2020 ಡಿಸೆಂಬರ್​​ನಲ್ಲಿ ಆಸ್ಟ್ರೇಲಿಯಾದಲ್ಲಿ ಶತಕ ಸಿಡಿಸಿದ್ದು ಹೊರತುಪಡಿಸಿದರೆ ಕಳೆದ 30 ಇನ್ನಿಂಗ್ಸ್​ಗಳಲ್ಲಿ ಕೇವಲ 3 ಅರ್ಧಶತಕ ಸಿಡಿಸಿದ್ದಾರೆ. ಜೊತೆಗೆ 2021ರಲ್ಲಿ 11 ಬಾರಿ ಒಂದಂಕಿ ಮೊತ್ತಕ್ಕೆ ವಿಕೆಟ್​ ಒಪ್ಪಿಸಿದರೆ, 6 ಬಾರಿ 20 ರನ್​ಗಳಿಸಲೂ ಕೂಡ ವಿಫಲರಾಗಿದ್ದಾರೆ.

ಇತ್ತ ಪೂಜಾರ ಶತಕ ಸಿಡಿಸಿ 3 ವರ್ಷಗಳೇ ಕಳೆದಿದೆ. 2019 ಜನವರಿಯಲ್ಲಿ ಆಸೀಸ್​ ವಿರುದ್ಧ ಕೊನೆಯ ಬಾರಿ ಶತಕ ಸಿಡಿಸಿದ್ದರು. 2021ರಲ್ಲಿ ಪೂಜಾರ ಕೂಡ 11 ಬಾರಿ ಒಂದಂಕಿ ಮೊತ್ತಕ್ಕೆ ವಿಕೆಟ್​ ಒಪ್ಪಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಯುವ ಬ್ಯಾಟರ್​ಗಳ ಜೊತೆಯಲ್ಲಿ ಐತಿಹಾಸಿಕ ಸರಣಿ ಗೆಲ್ಲುವಲ್ಲಿ ನೆರವಾಗಿದ್ದ ಚೇತೇಶ್ವರ್ ಪೂಜಾರ ಆ ನಂತರ ಹೇಳಿಕೊಳ್ಳುವ ಪ್ರದರ್ಶನ ತೋರಿಲ್ಲ.

ಬಾರ್ಡರ್​ ಗವಾಸ್ಕರ್ ಸರಣಿಯ ನಂತರ ಪೂಜಾರ 26 ಇನ್ನಿಂಗ್ಸ್​ಗಳಲ್ಲಿ ಬ್ಯಾಟಿಂಗ್ ಮಾಡಿದ್ದು, ಕೇವಲ 4 ಅರ್ಧಶತಕ ಸಿಡಿಸಿದ್ದಾರೆ. ಈ ಸರಣಿಯ 6 ಇನ್ನಿಂಗ್ಸ್​ಗಳಲ್ಲಿ ಪೂಜಾರ 0, 16, 3,53, 43, 9 ರನ್​ಗಳಿಸಿ ವಿಕೆಟ್​ ಒಪ್ಪಿಸಿದ್ದಾರೆ.

  • Iyer who scored a century recently. Despite that, he was not a part of the playing XI. It is a pity that the real talent was not given a chance in the affair of two failure players.

    The #BCCI , coach, captain and chairman have all remained blind. #SAvsIND #SAvsIND #rahane pic.twitter.com/35IWkLYp04

    — Deepa (தீபா)🇮🇳 (@Deepa_Gurukkal) January 13, 2022 " class="align-text-top noRightClick twitterSection" data=" ">

ಒಟ್ಟಿನಲ್ಲಿ ತಂಡಕ್ಕೆ ಆಧಾರವಾಗಬೇಕಿದ್ದ ಈ ಅನುಭವಿ ಆಟಗಾರರು ಪದೇ ಪದೇ ಕಳಪೆ ಮೊತ್ತಕ್ಕೆ ವಿಕೆಟ್​ ಒಪ್ಪಿಸುತ್ತಿರುವುದು ತಂಡಕ್ಕೆ ದೊಡ್ಡ ಸಮಸ್ಯೆಯಾಗಿದ್ದು, ಮುಂದಿನ ಸರಣಿಯಲ್ಲಾದರೂ ಉತ್ತಮ ಫಾರ್ಮ್​ನಲ್ಲಿದ್ದರೂ ಅವಕಾಶ ವಂಚಿತರಾಗಿರುವ ಹನುಮ ವಿಹಾರಿ, ಶ್ರೇಯಸ್​ ಅಯ್ಯರ್​, ಶುಬ್ಮನ್​ ಗಿಲ್​ ಅಂತಹ ಯುವ ಆಟಗಾರರಿಗೆ ಅವಕಾಶ ಕೊಟ್ಟು ಭವಿಷ್ಯದಲ್ಲಿ ತಂಡದ ಮಧ್ಯಮ ಕ್ರಮಾಂಕವನ್ನು ಬಲಿಷ್ಠಗೊಳಿಸಲು ನೆರವಾಗಬೇಕೆಂದು ಸಾಮಾಜಿಕ ಜಾಲಾತಾಣದಲ್ಲಿ ಅಭಿಮಾನಿಗಳು ಮನವಿ ಮಾಡುತ್ತಿದ್ದಾರೆ.

ಇದನ್ನೂ ಓದಿ:ಆ್ಯಷಸ್​ ಕ್ರಿಕೆಟ್​: ಆಸ್ಟ್ರೇಲಿಯಾದ ಮಾರ್ಕ್ ಹ್ಯಾರೀಸ್​ಗೆ ಕೊಕ್​.. ಉಸ್ಮಾನ್​ ಖವಾಜಾಗೆ ಚಾನ್ಸ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.