ಸಿಡ್ನಿ (ಆಸ್ಟ್ರೇಲಿಯ): ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಬಂಧಿತರಾಗಿರುವ ಶ್ರೀಲಂಕಾ ಕ್ರಿಕೆಟಿಗ ಧನುಷ್ಕಾ ಗುಣತಿಲಕ ಅವರಿಗೆ ಸ್ಥಳೀಯ ನ್ಯಾಯಾಲಯ ಜಾಮೀನು ನಿರಾಕರಿಸಿದೆ. ಸೋಮವಾರ ಅವರು ಇಲ್ಲಿಯ ಸ್ಥಳೀಯ ನ್ಯಾಯಾಲಯದಲ್ಲಿ ವಿಡಿಯೋ ಲಿಂಕ್ ಮೂಲಕ ವಿಚಾರಣೆಗೆ ಹಾಜರಾಗಿದ್ದರು. ಇವರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಜಾಮೀನು ನಿರಾಕರಿಸಿದೆ. ಪರಿಣಾಮ ಕ್ರಿಕೆಟಿಗ ಧನುಷ್ಕಾ ಜೈಲಿನಲ್ಲೇ ಇರಬೇಕಾದ ಪರಿಸ್ಥಿತಿ ಎದುರಾಗಿದೆ.
ನವೆಂಬರ್ 2 ರಂದು ತನ್ನ ಮೇಲೆ ಅತ್ಯಾಚಾರ ಎಸಲಾಗಿದೆ ಎಂದು ಆರೋಪಿಸಿ ಮಹಿಳೆಯೊಬ್ಬರು 31 ವರ್ಷದ ಧನುಷ್ಕಾ ಗುಣತಿಲಕ ವಿರುದ್ಧ ದೂರು ನೀಡಿದ್ದರು. ಪ್ರಕರಣ ಸಂಬಂಧ ಅವರನ್ನು ಭಾನುವಾರ (ನವೆಂಬರ್ 6) ಬೆಳಗ್ಗೆಯೇ ಬಂಧಿಸಿ ಜೈಲಿಗೆ ಕರೆತರಲಾಗಿತ್ತು. ವಿಚಾರಣೆ ವೇಳೆ ಬೂದು ಬಣ್ಣದ ಟಿ-ಶರ್ಟ್ ಮತ್ತು ನೀಲಿ ಜೀನ್ಸ್ ಧರಿಸಿದ್ದ ಅವರನ್ನು ಕೈಕೋಳ ಹಾಕಿಕೊಂಡೇ ಕರೆದುಕೊಂಡು ಬರಲಾಗಿತ್ತು.
ಸುಪ್ರೀಂಕೋರ್ಟ್‌ಗೆ ಪಲಾಯನ: ಅವರ ವಕೀಲ ಆನಂದ ಅಮರನಾಥ್ ಅವರು ಮುಚ್ಚಿದ ಲಕೋಟೆಯಲ್ಲಿ ಕೋರ್ಟ್ಗೆ ಜಾಮೀನು ಅರ್ಜಿ ಸಲ್ಲಿಸಿದರು. ಆದರೆ, ಮ್ಯಾಜಿಸ್ಟ್ರೇಟ್ ರಾಬರ್ಟ್ ವಿಲಿಯಮ್ಸ್ ಜಾಮೀನು ನಿರಾಕರಿಸಿದ್ದಾರೆ. ಹೀಗಾಗಿ ಸುಪ್ರೀಂಕೋರ್ಟ್‌ಗೆ ಹೋಗುವುದಾಗಿ ಅಮರಂಥ್ ಪ್ರತಿಕ್ರಿಯೆ ನೀಡಿದ್ದಾರೆ. ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ-20 ವಿಶ್ವಕಪ್ ಶನಿವಾರ ಟೂರ್ನಿಯಿಂದ ಶ್ರೀಲಂಕಾ ತಂಡ ಹೊರಬಿದ್ದಿದ್ದು, ಪ್ರಕರಣದ ಹಿನ್ನೆಲೆ ಧನುಷ್ಕ ಹೊರತು ಉಳಿದ ಎಲ್ಲ ಆಟಗಾರರು ತವರಿಗೆ ತೆರಳಿದ್ದಾರೆ.
-
Exec Committee of Sri Lanka Cricket decided to suspend Danushka Gunathilaka from all forms of cricket with immediate effect&won't consider him for any selections after being informed he was arrested&charged with sexual assault of a woman in Australia:Sri Lanka Cricket
— ANI (@ANI) November 7, 2022 " class="align-text-top noRightClick twitterSection" data="
(File pic) pic.twitter.com/gYRAl028y0
">Exec Committee of Sri Lanka Cricket decided to suspend Danushka Gunathilaka from all forms of cricket with immediate effect&won't consider him for any selections after being informed he was arrested&charged with sexual assault of a woman in Australia:Sri Lanka Cricket
— ANI (@ANI) November 7, 2022
(File pic) pic.twitter.com/gYRAl028y0Exec Committee of Sri Lanka Cricket decided to suspend Danushka Gunathilaka from all forms of cricket with immediate effect&won't consider him for any selections after being informed he was arrested&charged with sexual assault of a woman in Australia:Sri Lanka Cricket
— ANI (@ANI) November 7, 2022
(File pic) pic.twitter.com/gYRAl028y0
ಕ್ರಿಕೆಟ್‌ನಿಂದ ಅಮಾನತು: ಇನ್ನೊಂದೆಡೆ ಅತ್ಯಾಚಾರ ಆರೋಪ ಪ್ರಕರಣ ಎದುರಿಸುತ್ತಿರುವ ಅವರನ್ನು ತಕ್ಷಣದಿಂದಲೇ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ಅಮಾನತುಗೊಳಿಸಲು ನಿರ್ಧರಿಸಲಾಗಿದೆ ಶ್ರೀಲಂಕಾ ಕ್ರಿಕೆಟ್‌ನ ಕಾರ್ಯನಿರ್ವಾಹಕ ಸಮಿತಿ ಹೇಳಿಕೊಂಡಿದೆ.
ಇದನ್ನೂ ಓದಿ: ಸೂರ್ಯಕುಮಾರ್ ಯಾದವ್ ಆಕರ್ಷಕ ಸಿಕ್ಸರ್‌ಗೆ ಕ್ರಿಕೆಟ್ ಲೋಕ ಮಂತ್ರಮುಗ್ಧ! ವಿಡಿಯೋ