ETV Bharat / sports

’ಬ್ಯಾಟಿಂಗ್ ಬಲಪಡಿಸಬೇಕು ಇಲ್ಲ ಅಮೂಲ್ಯ ಆಟಗಾರನನ್ನು ಕೈಬಿಡಬೇಕು‘.. ಕೊಹ್ಲಿ ಮುಂದಿರುವುದು ಇವರೆಡೇ ದಾರಿ! - ಭಾರತ vs ಇಂಗ್ಲೆಂಡ್ 4ನೇ ಟೆಸ್ಟ್​

ಲಾರ್ಡ್ಸ್​ನಲ್ಲಿ ಗೆದ್ದು 1-0ಯಲ್ಲಿ ಸರಣಿ ಮುನ್ನಡೆ ಸಾಧಿಸಿದ್ದ ಭಾರತ ತಂಡ ನಂತರ 3ನೇ ಟೆಸ್ಟ್​ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿ ಇನ್ನಿಂಗ್ಸ್​ ಹಾಗೂ 76 ರನ್​ಗಳ ಹೀನಾಯ ಸೋಲು ಕಂಡಿತ್ತು. ಸ್ವಿಂಗ್ ಬೌಲರ್​ಗಳ ಮುಂದೆ ಭಾರತದ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದು, ಆಸ್ಟ್ರೇಲಿಯಾ ವಿರುದ್ಧ ತನ್ನ ಟೆಸ್ಟ್​ ಕ್ರಿಕೆಟ್ ಇತಿಹಾಸದಲ್ಲೇ ಕಡಿಮೆ ಮೊತ್ತ 36ಕ್ಕೆ ಆಲೌಟ್ ಆದ ಅಡಿಲೇಡ್​ ಟೆಸ್ಟ್​ ಪಂದ್ಯವನ್ನು ಮತ್ತೊಮ್ಮೆ ನೆನಪಿಸಿತು.

India vs England 4th test
ವಿರಾಟ್ ಕೊಹ್ಲಿ
author img

By

Published : Sep 1, 2021, 1:43 PM IST

ಮುಂಬೈ: ಕೆಳಕ್ರಮಾಂಕದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿರುವ ಭಾರತ ತಂಡದ ತಳಪಾಯ ಭದ್ರಪಡಿಸುವ ಜವಾಬ್ದಾರಿ ನಾಯಕ ವಿರಾಟ್​ ಕೊಹ್ಲಿ ಮುಂದಿದೆ. ಇಂಗ್ಲೀಷ್​ ಶ್ರೇಷ್ಠ ಬೌಲಿಂಗ್ ದಾಳಿಯ ಮುಂದೆ ಕೆಳಕ್ರಮಾಂಕದ ಬ್ಯಾಟಿಂಗ್ ಸಂಯೋಜನೆಯನ್ನು ಭದ್ರಪಡಿಸಬೇಕಿದೆ, ಇದಕ್ಕಾಗಿ ತಂಡದ ಒಬ್ಬ ಶ್ರೇಷ್ಠ ಆಟಗಾರನ್ನು ತ್ಯಾಗ ಮಾಡಬಹುದು ಎಂದು ಭಾರತ ತಂಡದ ಮಾಜಿ ಕ್ರಿಕೆಟಿಗ ಡಬ್ಲ್ಯೂಸಿ ರಾಮನ್ ಅಭಿಪ್ರಾಯಪಟ್ಟಿದ್ದಾರೆ.

ಲಾರ್ಡ್ಸ್​ನಲ್ಲಿ ಗೆದ್ದು 1-0ಯಲ್ಲಿ ಸರಣಿ ಮುನ್ನಡೆ ಸಾಧಿಸಿದ್ದ ಭಾರತ ತಂಡ ನಂತರ 3ನೇ ಟೆಸ್ಟ್​ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿ ಇನ್ನಿಂಗ್ಸ್​ ಹಾಗೂ 76 ರನ್​ಗಳ ಹೀನಾಯ ಸೋಲು ಕಂಡಿತ್ತು. ಸ್ವಿಂಗ್ ಬೌಲರ್​ಗಳ ಮುಂದೆ ಭಾರತದ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದು, ಆಸ್ಟ್ರೇಲಿಯಾ ವಿರುದ್ಧ ತನ್ನ ಟೆಸ್ಟ್​ ಕ್ರಿಕೆಟ್ ಇತಿಹಾಸದಲ್ಲೇ ಕಡಿಮೆ ಮೊತ್ತ 36ಕ್ಕೆ ಆಲೌಟ್ ಆದ ಅಡಿಲೇಡ್​ ಟೆಸ್ಟ್​ ಪಂದ್ಯವನ್ನು ಮತ್ತೊಮ್ಮೆ ನೆನಪಿಸಿತು.

ಸೋಲಿಗೆ ಮೂಲ ಕಾರಣವೇನು?

" 3ನೇ ಪಂದ್ಯದಲ್ಲಿ ಬ್ಯಾಟಿಂಗ್ ಕುಸಿತದಿಂದಾಗಿ ಭಾರತ ತಂಡ ಸಂಕಷ್ಟಕ್ಕೆ ಸಿಲುಕಿತು. ಆದ್ದರಿಂದ ಅವರು(ಟೀಮ್ ಮ್ಯಾನೇಜ್​ಮೆಂಟ್) ಸೋಲಿಗೆ ಮೂಲ ಕಾರಣವಾಗಿರುವುದನ್ನು ಮೊದಲು ಪರಿಹರಿಸಿಕೊಳ್ಳಬೇಕಾಗಿದೆ. ತಂಡದಲ್ಲಿ ಐದು ಬ್ಯಾಟ್ಸ್‌ಮನ್ ಜೊತೆಗೆ ಪಂತ್ ಒಬ್ಬರೇ ಸಾಕಾಗಬಹುದೇ ಅಥವಾ ಒಬ್ಬ ಕೆಳ ಕ್ರಮಾಂಕದ ಅಮೂಲ್ಯವಾದ ಆಟಗಾರನನ್ನು ತ್ಯಾಗ ಮಾಡಿ, ಆ ಸ್ಥಾನದಲ್ಲಿ ಒಬ್ಬ ಹೆಚ್ಚುವರಿ ಬ್ಯಾಟ್ಸ್‌ಮನ್ ಅಗತ್ಯವಿದೆಯೇ ಎಂದು ನೋಡಬೇಕಾಗಿದೆ."

ಇದು ಅವರು ನಾಲ್ಕನೇ ಟೆಸ್ಟ್​ಗೂ ಮುನ್ನ ಗಮನಿಸಲೇಬೇಕಾದ ಸಂಗತಿ. ಬೇಕಾದರೆ ವಿಹಾರಿಯನ್ನು ತಂಡಕ್ಕೆ ತರಬಹುದು, ಅವರು ಕೆಳ ಕ್ರಮಾಂಕದ ಬ್ಯಾಟಿಂಗ್​ ಬಲಪಡಿಸಬಲ್ಲರಲ್ಲದೇ ಸ್ಪಿನ್​ ರೂಪದಲ್ಲಿ ಕೆಲವು ಓವರ್​ಗಳನ್ನು ಎಸೆಯಬಲ್ಲರು. ಆದರೆ, ನಾನು ಇದೇ ಆಗಬೇಕೆಂದು ಹೇಳುತ್ತಿಲ್ಲ, ನನ್ನ ಅಭಿಪ್ರಾಯವಷ್ಟೆ. ಟೀಮ್ ಮ್ಯಾನೇಜ್​ಮೆಂಟ್​ ಬಳಿ ಅನೇಕ ಯೋಜನೆಗಳಿವೆ, ಯಾರು ತಂಡಕ್ಕೆ ಏನು ನೀಡಬಲ್ಲರು ಎಂಬುದು ಅವರಿಗೆ ತಿಳಿದಿದೆ ಎಂದು ನಾನು ಭಾವಿಸುತ್ತೇನೆ " ಎಂದು ವರ್ಚುಯಲ್ ಪತ್ರಿಕಾಗೋಷ್ಠಿಯಲ್ಲಿ ಈಟಿವಿ ಭಾರತ್ ಕೇಳಿದ ಪ್ರಶ್ನೆಗೆ ರಾಮನ್ ಉತ್ತರಿಸಿದರು.

India vs England 4th test
ಸರಣಿಯಲ್ಲಿ ವೇಗಿ ಜೇಮ್ಸ್ ಆ್ಯಂಡರ್ಸನ್ 13 ವಿಕೆಟ್​ ಪಡೆದು ಭಾರತೀಯ ವಿರುದ್ಧ ಪ್ರಾಬಲ್ಯ ಸಾಧಿಸಿದ್ದಾರೆ.

ಆದರೆ, ಈಗಾಗಲೇ ನಾಯಕ ವಿರಾಟ್​ ಕೊಹ್ಲಿ ತಾವೂ ಬ್ಯಾಟಿಂಗ್ ಬಲ ಹೆಚ್ಚಿಸಿಕೊಳ್ಳಲು ತಂಡಕ್ಕೆ ಗೆಲುವು ತಂದುಕೊಡಬಲ್ಲ ಒಬ್ಬ ಬೌಲರ್​ ಅನ್ನು ಕಳೆದುಕೊಳ್ಳಲು ತಾವೂ ಇಚ್ಚಿಸುವುದಿಲ್ಲ ಎಂದು 4ನೇ ಟೆಸ್ಟ್​ ಪಂದ್ಯಕ್ಕೂ ಮುನ್ನ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದಾರೆ. ಜೊತೆಗೆ ಕೆಳ ಕ್ರಮಾಂಕ ನಮಗೆ ಯಾವಾಗಲೂ ಗೆಲುವು ತಂದುಕೊಡಲು ಸಾಧ್ಯವಿಲ್ಲ ಎಂದಿದ್ದರು. ಈ ಮಾತನ್ನು ರಾಮನ್ ಕೂಡ ಒಪ್ಪಿಕೊಂಡಿದ್ದಾರೆ.

ದೊಡ್ಡ ಮೊತ್ತ ಗಳಿಸುವಲ್ಲಿ ವಿರಾಟ್​ ವಿಫಲ

ಇನ್ನು ಸ್ವತಃ ವಿರಾಟ್​ ಈ ಟೆಸ್ಟ್​ಸರಣಿಯಲ್ಲಿ ಒತ್ತಡಕ್ಕೆ ಒಳಗಾಗಿ ದೊಡ್ಡ ಮೊತ್ತ ಗಳಿಸುವಲ್ಲಿ ವಿಫಲರಾಗುತ್ತಿದ್ದಾರೆ. ಕೇವಲ ಒಂದೇ ಅರ್ಧಶತಕ ಸಿಡಿಸಿದ್ದಾರೆ. ಈ ಕುರಿತು ಮಾತನಾಡಿದ ರಾಮನ್​, ಕೊಹ್ಲಿ ಇತರ ಆಟಗಾರರನ್ನು ಮುಂದೆ ನಿಂತು ತಂಡವನ್ನು ಮುನ್ನೆಡೆಸಲು ಬಿಟ್ಟು ತಮ್ಮ ಮೇಲಿನ ಒತ್ತಡ ಕಡಿಮೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

" ಇದರಲ್ಲಿ ನಾವು ಅವರದು ತಪ್ಪು ಎಂದು ಹೇಳಲಾಗುವುದಿಲ್ಲ. ಕ್ರಿಕೆಟ್ ಜೀವನದಲ್ಲಿ ಇದು ಸಾಮಾನ್ಯವಾಗಿ ನಡೆಯುತ್ತದೆ. ಆದರೆ, ಕೊಹ್ಲಿ ಎಲ್ಲ ಒತ್ತಡವನ್ನು ತಾವೇ ಸ್ವೀಕರಿಸುತ್ತಿದ್ದಾರೆ. ಆತ ಏನೇ ಮಾಡಿದರೂ ನಾವು ಕೂಡ ಅದರ ಮೇಲೆ ಹೆಚ್ಚು ಗಮನ ನೀಡುತ್ತಿದ್ದೇವೆ. ಆತ ಒಬ್ಬ ಶ್ರೇಷ್ಠ ಬ್ಯಾಟ್ಸ್​ಮನ್ ಎಂದು ಗೊತ್ತಿರುವುದರಿಂದ ಸಾಮಾನ್ಯವಾಗಿ ನಾವೆಲ್ಲರೂ ಆತನಿಂದ ಉತ್ತಮವಾದದ್ದನ್ನೇ ನಿರೀಕ್ಷಿಸುತ್ತಿದ್ದೇವೆ. ಇದು ಹೆಚ್ಚು ಕಡಿಮೆ ಸಚಿನ್​ ಆಡುತ್ತಿದ್ದಾಗಲೂ ಹೀಗೆ ಇತ್ತು. ಆ ಸಂದರ್ಭದಲ್ಲಿಅವರು 95 ರನ್​ಗಳಿಸಿದರೂ ಅದು ವೈಫಲ್ಯ ಎಂದು ಭಾವಿಸಲಾಗುತ್ತಿತ್ತು" ಎಂದು ರಾಮನ್ ಹೇಳಿದ್ದಾರೆ.

ನಾನು ವಿರಾಟ್ ತರಬೇತುದಾರನಾಗಿದ್ದರೆ ಅವರಿಗೆ " ವಿರಾಟ್, ನೀವು ತಂಡವನ್ನು ನಾಯಕತ್ವದ ದೃಷ್ಟಿಕೋನದಿಂದ ಮುನ್ನಡೆಸುವುದನ್ನು ಬಿಟ್ಟು ಇತರ ಆಟಗಾರರು ತಂಡದ ಒಳಿತಿಗಾಗಿ ನಿಮ್ಮಿಂದ ಏನು ಸಾಧ್ಯವೋ ಅದನ್ನು ಮಾಡಿ ಎಂದು ಅವರ ಬೆನ್ನಿಗೆ ನಿಂತು ಹುರಿದುಂಬಿಸಿ" ಎಂದು ಹೇಳುತ್ತಿದ್ದೆ ಎಂದಿದ್ದಾರೆ.

ಕೊಹ್ಲಿ ಯಾವುದೇ ಸಮಯದಲ್ಲಿ ಅವರ ಅತ್ಯುತ್ತಮ ಲಯಕ್ಕೆ ಮರಳುತ್ತಾರೆ ಎಂಬುದರ ಬಗ್ಗೆ ನನಗೆ ಖಾತ್ರಿಯಿದೆ. ಅವರ ಕೊನೆಯ ಇನ್ನಿಂಗ್ಸ್​ನಲ್ಲಿ ತಮ್ಮ ಹಳೆಯ ಆಟವನ್ನು ತೋರಿಸಿದ್ದಾರೆ. ಖಂಡಿತ ಅವರಿಂದ ಮುಂದಿನ ಎರಡು ಟೆಸ್ಟ್ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಾರೆ ಎಂದು ನನಗೆ ನಂಬಿಕೆಯಿದೆ" ಎಂದು ಮಾಜಿ ಮಹಿಳಾ ತಂಡದ ಮುಖ್ಯ ಕೋಚ್​ ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.