ಹೈದರಾಬಾದ್: ಶೆಫಾಲಿನ ಮಿಂಚಿನಂತೆ, ಎದುರಾಳಿಗಳು ಅವರಿಗೆ ಭಯ ಪಡ್ತಾರೆ, ಅದು ನಡೆದಿರೋದನ್ನು ನಾನು ಕಂಡಿದ್ದೇನೆ ಎಂದು ಭಾರತ ತಂಡದ ಮಾಜಿ ಕೋಚ್ ಡಬ್ಲ್ಯೂವಿ ರಾಮನ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ಈಟಿವಿ ಭಾರತ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ, ಶೆಫಾಲಿ ಮುಂಬರುವ ಆಸ್ಟ್ರೇಲಿಯಾ ವಿರುದ್ಧ ಟಿ-20 ಸರಣಿಯಲ್ಲಿ ಭಾರತದ ಗೇಮ್ ಚೇಂಜರ್ ಆಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಡೇ ಅಂಡ್ ನೈಟ್ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಪ್ರಾಬಲ್ಯ ಸಾಧಿಸಿ ಭಾರತ ತಂಡ ಗುರುವಾರದಿಂದ ಗೋಲ್ಡ್ಕಾಸ್ಟ್ನಲ್ಲಿ ಆರಂಭವಾಗಲಿರುವ 3 ಪಂದ್ಯಗಳ ಟಿ-20 ಸರಣಿಯಲ್ಲಿ ಆತಿಥೇಯರ ವಿರುದ್ಧ ಪ್ರಾಬಲ್ಯ ಸಾಧಿಸುವ ಉತ್ಸಾಹದಿಂದಿದೆ.
-
It was the first time they played with the pink ball and their faces tell you the story!
— BCCI Women (@BCCIWomen) October 3, 2021 " class="align-text-top noRightClick twitterSection" data="
Well done, girls! #TeamIndia🙌🏾 #PinkballTest #AUSvIND pic.twitter.com/h1eKRcuG8F
">It was the first time they played with the pink ball and their faces tell you the story!
— BCCI Women (@BCCIWomen) October 3, 2021
Well done, girls! #TeamIndia🙌🏾 #PinkballTest #AUSvIND pic.twitter.com/h1eKRcuG8FIt was the first time they played with the pink ball and their faces tell you the story!
— BCCI Women (@BCCIWomen) October 3, 2021
Well done, girls! #TeamIndia🙌🏾 #PinkballTest #AUSvIND pic.twitter.com/h1eKRcuG8F
ಶೆಫಾಲಿ ವರ್ಮಾ ಮುಂಬರುವ ಸರಣಿಯಲ್ಲಿ ಬಹುದೊಡ್ಡ ಪಾತ್ರವಹಿಸಲಿದ್ದಾರೆ. ಅವರು ಎದರಾಳಿ ಬೌಲಿಂಗ್ ದಾಳಿಯನ್ನು ಪೀಡಿಸಲಿದ್ದಾರೆ ಮತ್ತು ಪಂದ್ಯವನ್ನು ಅವರಿಂದ ದೂರ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಮತ್ತು ಸ್ಮೃತಿ ಮಂಧಾನ ಉತ್ತಮ ಫಾರ್ಮ್ನಲ್ಲಿದ್ದಾರೆ, ಅವರು ತಮ್ಮ ಅಮೋಘ ಪ್ರದರ್ಶನವನ್ನು ಮುಂದುವರಿಸಲಿದ್ದಾರೆ ಎಂಬ ಭರವಸೆ ನನಗಿದೆ.
ಚುಟುಕು ಕ್ರಿಕೆಟ್ನಲ್ಲಿ ಆಕೆಗೆ ಪ್ರಮುಖ ಪಾತ್ರವಿದೆ. ಏಕೆಂದರೆ ಕಣ್ಣು ಮಿಟುಕಿಸುವ ಹೊತ್ತಿಗೆ ಅವರು ಸಾಕಷ್ಟು ರನ್ಗಳಿಸಬಲ್ಲರು. ವಿಶೇಷವಾಗಿ ಚೇಸಿಂಗ್ ಮಾಡುವ ವೇಳೆ ಅವರ ಆಟ ನಂಬಲಾಸಾಧ್ಯವಾಗಿರುತ್ತದೆ ಎಂದು ರಾಮನ್ ಭಾರತೀಯ ಆರಂಭಿಕ ಜೋಡಿಯನ್ನು ಗುಣಗಾನ ಮಾಡಿದ್ದಾರೆ.
-
Player of the Match is @mandhana_smriti and she speaks about the experience of playing Test cricket under lights and her knock. #AUSvIND pic.twitter.com/F6FLoYBp4O
— BCCI Women (@BCCIWomen) October 3, 2021 " class="align-text-top noRightClick twitterSection" data="
">Player of the Match is @mandhana_smriti and she speaks about the experience of playing Test cricket under lights and her knock. #AUSvIND pic.twitter.com/F6FLoYBp4O
— BCCI Women (@BCCIWomen) October 3, 2021Player of the Match is @mandhana_smriti and she speaks about the experience of playing Test cricket under lights and her knock. #AUSvIND pic.twitter.com/F6FLoYBp4O
— BCCI Women (@BCCIWomen) October 3, 2021
ರಾಮನ್ 2020ರ ಮಹಿಳಾ ಟಿ-20 ವಿಶ್ವಕಪ್ ಸಂದರ್ಭದಲ್ಲಿ ಭಾರತ ತಂಡದ ಕೋಚ್ ಆಗಿದ್ದರು. ಇವರ ಮಾರ್ಗದರ್ಶನದಲ್ಲಿ ಭಾರತ ತಂಡ ಫೈನಲ್ ಪ್ರವೇಶಿಸಿತ್ತು.
ಇದನ್ನು ಓದಿ:ನಾನೆಂದೂ ಇಶಾನ್ ಕಿಶನ್ ಸಾಮರ್ಥ್ಯದ ಬಗ್ಗೆ ನಂಬಿಕೆ ಕಳೆದುಕೊಂಡಿರಲಿಲ್ಲ: ರೋಹಿತ್ ಶರ್ಮಾ