ETV Bharat / sports

EXCLUSIVE : ಸಂಜು ಸಾಮ್ಸನ್ ಗೆಲುವು ತಂದುಕೊಡಬಲ್ಲ ಆಟಗಾರ.. ಆದರೆ, ಸ್ಥಿರತೆ ಮುಖ್ಯ ಅಂತಾರೆ ಅಗರ್ಕರ್​.. - ಸಂಜು ಸಾಮ್ಸನ್ ಬಗ್ಗೆ ಅಜಿತ್ ಅಗರ್ಕರ್

ಸಂಜು ಸಾಮ್ಸನ್ ಅವರ ಸಾಮರ್ಥ್ಯ ಏನೆಂಬುದು ನಮಗೆಲ್ಲರಿಗೂ ತಿಳಿದಿದೆ. ಅವರು ಹೊಸ ಆಟಗಾರನಲ್ಲದ ಕಾರಣ ಸ್ಥಿರತೆಯನ್ನು ಕಾಪಾಡಿಕೊಳ್ಳಬೇಕೆಂದು ನಾನು ಭಾವಿಸುತ್ತೇನೆ. ಅಲ್ಲದೆ ಈಗ ಅವರು ಅನುಭವಿ ಆಟಗಾರ, ಆತನಿಗೆ ಯುವಕರಿಗೆ ನೀಡಿದಷ್ಟು ಬೆಂಬಲ ಸಿಗುವುದಿಲ್ಲ..

ಅಜಿತ್ ಅಗರ್ಕರ್
ಅಜಿತ್ ಅಗರ್ಕರ್
author img

By

Published : Jul 14, 2021, 9:03 PM IST

Updated : Jul 14, 2021, 10:59 PM IST

ಹೈದರಾಬಾದ್​ : ಭಾರತ ತಂಡಕ್ಕೆ ಯುವ ಆಟಗಾರರು ಬರುವಿಕೆ ಹೆಚ್ಚಾಗುತ್ತಿರುವುದರಿಂದ ತಂಡದಲ್ಲಿ ಖಾಯಂ ಸ್ಥಾನ ಪಡೆಯಲು ಸ್ಫೋಟಕ ಬ್ಯಾಟ್ಸ್​ಮನ್ ಸಂಜು ಸಾಮ್ಸನ್​ ಸ್ಥಿರ ಪ್ರದರ್ಶನ ತೋರುವ ಅವಶ್ಯಕತೆಯಿದೆ ಎಂದು ಭಾರತದ ಮಾಜಿ ವೇಗದ ಬೌಲರ್​ ಅಜಿತ್ ಅಗರ್ಕರ್​ ಅಭಿಪ್ರಾಯಪಟ್ಟಿದ್ದಾರೆ.

ಶಿಖರ್ ಧವನ್ ನೇತೃತ್ವದಲ್ಲಿ ಭಾರತ ತಂಡ ಶ್ರೀಲಂಕಾ ವಿರುದ್ಧ ಸೀಮಿತ ಓವರ್​ಗಳ ಸರಣಿಯನ್ನಾಡಲಿದೆ. ಅಕ್ಟೋಬರ್​ನಲ್ಲಿ ಟಿ20 ವಿಶ್ವಕಪ್ ಇರುವುದರಿಂದ ಸಿಕ್ಕ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ಟಿ20 ವಿಶ್ವಕಪ್ ತಂಡದಲ್ಲಿ ಅವಕಾಶ ಪಡೆಯಲು ಸಾಮ್ಸನ್​ ಅವಿರತ ಪ್ರಯತ್ನ ಮಾಡುತ್ತಿದ್ದಾರೆ.

"ಸಂಜು ಸಾಮ್ಸನ್ ಅವರ ಸಾಮರ್ಥ್ಯ ಏನೆಂಬುದು ನಮಗೆಲ್ಲರಿಗೂ ತಿಳಿದಿದೆ. ಅವರು ಹೊಸ ಆಟಗಾರನಲ್ಲದ ಕಾರಣ ಸ್ಥಿರತೆ ಕಾಪಾಡಿಕೊಳ್ಳಬೇಕೆಂದು ನಾನು ಭಾವಿಸುತ್ತೇನೆ. ಅಲ್ಲದೆ ಈಗ ಅವರು ಅನುಭವಿ ಆಟಗಾರ, ಆತನಿಗೆ ಯುವಕರಿಗೆ ನೀಡಿದಷ್ಟು ಬೆಂಬಲ ಸಿಗುವುದಿಲ್ಲ" ಎಂದು Etv Bharatಗೆ ಅಗರ್ಕರ್​ ಹೇಳಿದ್ದಾರೆ.

ಅವರು ಹೊಸ ವ್ಯಕ್ತಿಯಾಗಿದ್ದರೆ, ನೀವು ಅವರಿಗೆ ಸ್ವಲ್ಪ ಅವಕಾಶ ನೀಡಿ, ಒಂದೆರಡು ಋತುಗಳನ್ನು ನೀಡುತ್ತೀರಿ. ಆದರೆ, ಈಗ ಅವರು ಒಬ್ಬ ಅನುಭವಿ ಆಟಗಾರರಾಗಿದ್ದಾರೆ. ಉಳಿದ ಯುವ ಆಟಗಾರರು ಅವರಿಗಿಂತ ಹೆಚ್ಚು ಸ್ಥಿರವಾದ ಪ್ರದರ್ಶನಗಳನ್ನು ನೀಡುತ್ತಿದ್ದಾರೆ" ಎಂದು ಮುಂಬೈ ಮಾಜಿ ವೇಗಿ ತಿಳಿಸಿದ್ದಾರೆ.

"ಭಾರತ ತಂಡದಲ್ಲಿ ಅವರ ಜಾಗಕ್ಕೆ ಸ್ಪರ್ಧೆ ಇದೆ. ಆದರೆ, ಅವರಿಗಿಂತ ಸ್ವಲ್ಪ ಹೆಚ್ಚು ಸ್ಥಿರವಾಗಿರುವ ಇತರ ಹುಡುಗರು ಪೈಪೋಟಿಯಲ್ಲಿದ್ದಾರೆ. ಆದರೂ ಟಿ20 ಮಾದರಿ ಸ್ಥಿರವಾಗಿರಲು ಕಷ್ಟಕರವಾದ ಸ್ವರೂಪ. ಆದರೆ, ಸಾಮ್ಸನ್​ ಸ್ಥಿರ ಪ್ರದರ್ಶನ ತೋರಿದರೆ ಅವರು ತಂಡದಲ್ಲಿ ಅವಕಾಶ ಪಡೆಯದಿರಲು ನನಗೆ ಯಾವುದೇ ಕಾರಣಗಳು ಕಾಣಿಸುತ್ತಿಲ್ಲ "ಎಂದು ಅಗರ್ಕರ್ ಅಭಿಪ್ರಾಯಪಟ್ಟಿದ್ದಾರೆ.

ಭುವನೇಶ್ವರ್​ ಕಮ್​ಬ್ಯಾಕ್ ಮಾಡಲಿದ್ದಾರೆ

ಭುವಿ ಇಂಗ್ಲೆಂಡ್ ವಿರುದ್ಧದ ಸೀಮಿತ ಓವರ್​ಗಳ ಸರಣಿಯಲ್ಲಿ ಆಕರ್ಷಕ ಪ್ರದರ್ಶನ ತೋರಿದ್ದಾರೆ. ನೀವು ದೀರ್ಘಕಾಲದ ಗಾಯದಿಂದ ಚೇತರಿಸಿಕೊಂಡು ಮರಳಿದಾಗ ಕೆಲವೊಮ್ಮೆ ಪ್ರದರ್ಶನದಲ್ಲಿ ಏರುಪೇರಾಗಬಹುದು. ಆ ಕಾರಣದಿಂದ ಅವರು ಮುಂದೂಡಲ್ಪಟ್ಟ ಐಪಿಎಲ್​ನಲ್ಲಿ ನಿರೀಕ್ಷಿಸಿದಷ್ಟು ವಿಕೆಟ್ ಪಡೆಯಲಾಗಲಿಲ್ಲ. ಆದರೆ, ಆತ ಪ್ರತಿಭಾನ್ವಿತ ಬೌಲರ್​, ಆತ ತನ್ನ ದಾಳಿಯಲ್ಲಿ ವಿಭಿನ್ನ ಆಯಾಮವನ್ನು ಹೊಂದಿದ್ದಾರೆ ಎಂದು ಭಾರತದ ಪರ 191 ಏಕದಿನ ಪಂದ್ಯಗಳನ್ನಾಡಿರುವ ಅಜಿತ್ ಅಗರ್ಕರ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರೋಹಿತ್-ರಾಹುಲ್ ಆರಂಭಿಕರಾಗಬೇಕು

ಭಾರತ ತಂಡದಲ್ಲಿ ಆರಂಭಿಕ ಸ್ಥಾನಕ್ಕೆ ಪೈಪೋಟಿ ಕಂಡು ಬರುತ್ತಿದೆ. ರಾಹುಲ್​ ಬದಲಾಗಿ ವಿರಾಟ್​ ಕೊಹ್ಲಿ ಉಪನಾಯಕ ರೋಹಿತ್ ಜೊತೆಗೆ ಇನ್ನಿಂಗ್ಸ್​ ಆರಂಭಿಸುವ ಹೊಸ ಆಲೋಚನೆಯಲ್ಲಿದೆ. ಜೊತೆಗೆ ಪೃಥ್ವಿ ಶಾ ಕೂಡ ಡೊಮೆಸ್ಟಿಕ್​ ಕ್ರಿಕೆಟ್​ನಲ್ಲಿ ಉತ್ತಮ ಪ್ರದರ್ಶನ ನೀಡಿ ರಾಷ್ಟ್ರೀಯ ತಂಡದ ಬಾಗಿಲು ತಟ್ಟುತ್ತಿದ್ದಾರೆ. ಈ ಕುರಿತು ಕೇಳಿದ್ದಕ್ಕೆ ಉತ್ತರಿಸಿದ ಅಗರ್​ಕರ್​, ರಾಹುಲ್ ಮತ್ತು ರೋಹಿತ್ ಸೂಕ್ತ ಎಂದಿದ್ದಾರೆ.

ನನ್ನ ಪ್ರಕಾರ ರಾಹುಲ್ ಮತ್ತು ರೋಗಿತ್​ ಟಿ20 ವಿಶ್ವಕಪ್​ನಲ್ಲಿ ಆರಂಭಿಕರಾಗಿ ಕಣಕ್ಕಿಳಿಯಬೇಕು. ವಿರಾಟ್​ ನಂಬರ್ 3ರಲ್ಲಿ ಆಡಿದರೆ ಸೂಕ್ತ. ಟಿ20 ಕ್ರಿಕೆಟ್‌ನಲ್ಲಿ ಕೆಎಲ್ ರಾಹುಲ್ ಅಸಾಧಾರಣ ಮತ್ತು ರೋಹಿತ್ ಬಗ್ಗೆ ಹೇಳಬೇಕಾಗಿಲ್ಲ. ಅವರು ಫಾರ್ಮ್​ನಲ್ಲಿಲ್ಲ ಅಥವಾ ಉತ್ತಮವಾಗಿ ಆಡುತ್ತಿಲ್ಲ ಎಂದಾದರೆ ನೀವು ಬೇರೆ ಆಯ್ಕೆ ಬಗ್ಗೆ ಆಲೋಚಿಸಬಹುದಷ್ಟೇ.. ರೋಹಿತ್​-ರಾಹುಲ್​ ಭಾರತಕ್ಕಾಗಿ ಇನ್ನಿಂಗ್ಸ್ ಆರಂಭಿಸಬೇಕೆಂದು ತಿಳಿಸಿದ್ದಾರೆ.

ಇದನ್ನೂ ಓದಿ:ಧವನ್ ಅಲ್ಲ, ಹಾರ್ದಿಕ್ ಪಾಂಡ್ಯ ಭಾರತ ತಂಡದ ನಾಯಕನಾಗಬೇಕಿತ್ತು: ಪಾಂಡ್ಯ ಕೋಚ್

Last Updated : Jul 14, 2021, 10:59 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.