ETV Bharat / sports

ಸಖತ್​ ಸದ್ದು ಮಾಡುತ್ತಿದೆ ಇಶಾನ್​ ರನ್ನಿಂಗ್​ ಕ್ಯಾಚ್​: ಫೀಲ್ಡಿಂಗ್ ಕೋಚ್ ಬಳಿ ಕಿಶನ್ ಹೇಳಿದ್ದೇನು?

ಶ್ರೀಲಂಕಾ ವಿರುದ್ಧದ ಮೊದಲ ಪಂದ್ಯದಲ್ಲಿ ವಿಕೆಟ್ ಕೀಪರ್ ಇಶಾನ್ ಕಿಶನ್ ಅದ್ಭುತ ಕ್ಯಾಚ್-​ ಗಮನ ಸೆಳೆದ ಆಟ- ಓಡಿ ಹೋಗಿ ಬಾಲ್​ ಹಿಡಿದ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​

author img

By

Published : Jan 4, 2023, 5:45 PM IST

Updated : Jan 4, 2023, 5:56 PM IST

excellent-catch-ishan-kishan-t-dilip-fielding-coach
ಸಖತ್​ ಸದ್ದು ಮಾಡುತ್ತಿದೆ ಇಶಾನ್​ ರನ್ನಿಂಗ್​ ಕ್ಯಾಚ್

ಮುಂಬೈ (ಮಹಾರಾಷ್ಟ್ರ): ಮುಂಬೈನ ವಾಂಖೆಡೆ ಮೈದಾನದಲ್ಲಿ ಮಂಗಳವಾರ ನಡೆದ ಮೊದಲ ಟಿ20 ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಭಾರತ ತಂಡ 2 ರನ್‌ಗಳಿಂದ ರೋಚಕ ಗೆಲುವು ದಾಖಲಿಸಿದೆ. ಈ ಮೂಲಕ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿ, ಶುಭಾರಂಭ ಮಾಡಿದೆ. ಇದೇ ಪಂದ್ಯದಲ್ಲಿ ಟೀಂ ಇಂಡಿಯಾದ ವಿಕೆಟ್ ಕೀಪರ್ ಇಶಾನ್ ಕಿಶನ್ ಹಿಡಿದ ಕ್ಯಾಚ್​ ಬಗ್ಗೆ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ.

ಮೊದಲ ಬ್ಯಾಟಿಂಗ್​ ಮಾಡಿದ್ದ ಟೀಂ ಇಂಡಿಯಾ ಲಂಕಾಗೆ 162 ರನ್‌ಗಳ ಸಾಧಾರಣ ಟಾರ್ಗೆಟ್​ ನೀಡಿತ್ತು. ಆದರೆ, ನಂತರ ಯುವ ಮಧ್ಯಮ ವೇಗಿ ಶಿವಂ ಮಾವಿ ತಮ್ಮ ಚೊಚ್ಚಲ ಪಂದ್ಯದಲ್ಲೇ ಲಂಕಾದ 4 ವಿಕೆಟ್​ ಕಬಳಿಸಿ ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆದಾಗ್ಯೂ, ಇಶಾನ್ ಕಿಶನ್ ಹಿಡಿದ ಅದ್ಭುತ ಕ್ಯಾಚ್​ ಸಖತ್ ಸದ್ದು ಮಾಡುತ್ತಿದೆ. ಬಹು ದೂರ ಓಡಿ ಇಶಾನ್​ ಕಿಶನ್​ ಕ್ಯಾಚ್​ ದೃಶ್ಯದ ತುಣುಕು ಸೋಷಿಯಲ್​ ಮೀಡಿಯಾದಲ್ಲಿ ಭಾರೀ ವೈರಲ್​ ಆಗಿದೆ.

ಲಂಕಾದ ಇನ್ನಿಂಗ್ಸ್​ನ 8ನೇ ಓವರ್​​ಗಳಲ್ಲಿ ಚರಿತ್ ಅಸಲಂಕಾ ಬಾರಿಸಿದ ಬಾಲ್​ಅನ್ನು ಇಶಾನ್​ ಕಿಶನ್ ತಮ್ಮ​ ಕೈಗಳಲ್ಲಿ ಭದ್ರವಾಗಿ ಹಿಡಿದುಕೊಳ್ಳುವಲ್ಲಿ ಯಶಸ್ವಿಯಾಗಿದರು. ಇದಕ್ಕಾಗಿ ಇಶಾನ್ ಕಿಶನ್ ವಿಕೆಟ್ ಹಿಂದಿನಿಂದ ಬಹು ದೂರ ಓಡಬೇಕಾಯಿತು. ಉಮ್ರಾನ್ ಮಲಿಕ್ ಎಸೆದ ಈ ಓವರ್​ನಲ್ಲಿ ಚರಿತಾ ಅಸಲಂಕಾ ಚೆಂಡನ್ನು ಗಾಳಿಯಲ್ಲಿ ಹೊಡೆದರು. ಈ ಬಾಲ್​ ಫೈನ್ ಲೆಗ್ ಕಡೆಗೆ ಹೋಯಿತು. ಆಗ ಡೀಪ್​ನಲ್ಲಿ ನಿಂತಿದ್ದ ಹರ್ಷಲ್ ಪಟೇಲ್ ಕ್ಯಾಚ್ ಹಿಡಿಯಲು ಮುಂದೆ ಬಂದರು. ಆದರೆ, ಕ್ಯಾಚ್ ತೆಗೆದುಕೊಳ್ಳಲು ಓಡಿದ ಇಶಾನ್ ಕಿಶನ್​ ಕೈಸನ್ನೆಯಲ್ಲಿಯೇ ಪಟೇಲ್​ ಅವರನ್ನು ನಿಲ್ಲಿಸಿ, ಬಾಲ್​ ಹಿಡಿದರು. ಇಶಾನ್ ಕಿಶನ್‌ ಹಿಡಿದ ಈ ಕ್ಯಾಚ್‌ಗೆ ಸಹ ಆಟಗಾರರ ಮಾತ್ರವಲ್ಲದೇ ಅಭಿಮಾನಿಗಳು ಕೂಡ ಫಿದಾ ಆಗಿದ್ದಾರೆ.

ಜೊತೆಗೆ ಈ ಕ್ಯಾಚ್​ ಬಗ್ಗೆ ಟೀಂ ಇಂಡಿಯಾದ ಫೀಲ್ಡಿಂಗ್ ಕೋಚ್ ಟಿ.ದಿಲೀಪ್ ಜೊತೆಗೆ ಇಶಾನ್ ಕಿಶನ್ ಮಾತನಾಡಿರುವ ವಿಡಿಯೋವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತನ್ನ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದೆ. ಲಂಕಾದ ವಿರುದ್ಧ ಪಂದ್ಯದಲ್ಲಿ ಗಮನ ಸೆಳೆದ ಕ್ಯಾಚ್​ ಬಗ್ಗೆ ಫೀಲ್ಡಿಂಗ್ ಕೋಚ್ ಟಿ ದಿಲೀಪ್ ಅವರೊಂದಿಗೆ ಇಶಾನ್ ಕಿಶನ್​ ಆಡಿದ ಮಾತುಗಳನ್ನು ಅವರ ಬಾಯಿಂದಲೇ ಕೇಳಿ ಎಂದು ಬಿಸಿಸಿಐ ಟ್ವೀಟ್​ ಮಾಡಿದೆ.

ಈ ವಿಡಿಯೋದಲ್ಲಿ ವಿಕೆಟ್‌ ಕೀಪರ್ ಇಶಾನ್ ಕಿಶನ್ ಬಾಂಗ್ಲಾದೇಶದ ಸರಣಿಯಲ್ಲಿನ ತಮ್ಮ ಅನುಭವದ ಆಧಾರದ ಮೇಲೆ ಮಾಡಿದ ಶ್ರೀಲಂಕಾ ಸರಣಿಗೆ ಮಾಡಿಕೊಂಡ ಸಿದ್ಧತೆಗಳ ಬಗ್ಗೆ ಹೇಳಿಕೊಂಡಿದ್ದಾರೆ. ಬಾಂಗ್ಲಾದೇಶದಲ್ಲಿ ನಡೆದ ಸರಣಿಯಲ್ಲಿ ಹಲವು ಕ್ಯಾಚ್‌ಗಳನ್ನು ಮಿಸ್ ಮಾಡಿಕೊಂಡಿದ್ದೆ. ಇದನ್ನೇ ಗಮನದಲ್ಲಿರಿಸಿಕೊಂಡು ಅಭ್ಯಾಸದ ಅವಧಿಯಲ್ಲಿ ಹೆಚ್ಚು ಶ್ರಮಿ ವಹಿಸಲಾಯಿತು. ಇದರ ಪರಿಣಾಮ ಸುಲಭದ ಕ್ಯಾಚ್ ಹಿಡಿಯುವಲ್ಲಿ ಯಶ ಸಿಕ್ಕಿತ್ತು ಎಂದು ಇಶಾನ್ ಕಿಶನ್ ಹೇಳಿದ್ದಾರೆ.

ಶ್ರೀಲಂಕಾ ವಿರುದ್ಧ ಮೊದಲ ಪಂದ್ಯದ ಗೆಲುವಿನೊಂದಿಗೆ ಟೀಂ ಇಂಡಿಯಾ ಹೊಸ ವರ್ಷವನ್ನು ಪ್ರಾರಂಭಿಸಿದೆ. ಶಿವಂ ಮಾವಿ, ಹರ್ಷಲ್ ಪಟೇಲ್ ಮತ್ತು ಉಮ್ರಾನ್ ಮಲಿಕ್ ಅವರ ಉತ್ತಮ ಬೌಲಿಂಗ್‌ ನೆರವಿನಿಂದ 20 ಓವರ್‌ಗಳಲ್ಲಿ 160 ರನ್​ಗಳಿಗೆ ಲಂಕಾ ಆಟಗಾರರನ್ನು ಆಲೌಟ್ ಮಾಡಿ ಜಯವನ್ನು ದಾಖಲಿಸಿತ್ತು.

ಇದನ್ನೂ ಓದಿ: ಭಾರತಕ್ಕೆ ಎರಡು ರನ್​ಗಳ ರೋಚಕ ಗೆಲುವು: ಚೊಚ್ಚಲ ಪಂದ್ಯದಲ್ಲಿ 4 ವಿಕೆಟ್​ ಪಡೆದ ಮಾವಿ

Last Updated : Jan 4, 2023, 5:56 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.