ETV Bharat / sports

ವಿರಾಟ್ ಕೊಹ್ಲಿ​ ವಿಶ್ವ ಕ್ರಿಕೆಟ್​ನ ಅಚ್ಚರಿಯ ಆಟಗಾರ: ಪಾಕಿಸ್ತಾನದ ಮಾಜಿ ಕ್ರಿಕೆಟಿಗನ ಬಣ್ಣನೆ

ವಿರಾಟ್​ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ 45ನೇ ಶತಕ ಬಾರಿಸಿ ಸಚಿನ್ ತೆಂಡೂಲ್ಕರ್​ ಅವರ ಸಾರ್ವಕಾಲಿಕ ದಾಖಲೆಯತ್ತ ದಾಪುಗಾಲಿಟ್ಟಿದ್ದಾರೆ. ಇನ್ನು 4 ಶತಕ ಬಾರಿಸಿದಲ್ಲಿ ವಿಶ್ವದಾಖಲೆ ನಿರ್ಮಾಣವಾಗಲಿದೆ. ಈ ಮಧ್ಯೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಕಮ್ರಾನ್​ ಅಕ್ಮಲ್​, ಕೊಹ್ಲಿಯ ಆಟಕ್ಕೆ ಬೆರಗಾಗಿದ್ದಾರೆ.

ex-pakistan-cricketer-praise-virat-kohli-batting
ಪಾಕ್​ ಮಾಜಿ ಕ್ರಿಕೆಟಿಗನಿಂದ ವಿರಾಟ್​ ಗುಣಗಾನ
author img

By

Published : Jan 12, 2023, 11:18 AM IST

ಬ್ಯಾಟಿಂಗ್​ ಕಿಂಗ್ ವಿರಾಟ್ ಕೊಹ್ಲಿ ಅವರ ಆಟಕ್ಕೆ ಮನಸೋಲದವರಿಲ್ಲ. ಹಿಂದೊಮ್ಮೆ ಫಾರ್ಮ್​ ಕೊರತೆಯಿಂದ ಕಳಪೆ ಪ್ರದರ್ಶನ ನೀಡುತ್ತಿದ್ದ ವಿರಾಟ್​ ಮೇಲೆ ಎಲ್ಲರೂ ಮುಗಿಬಿದ್ದಿದ್ದರು. ಈಗ ಮತ್ತೆ ಮೈದಾನದಲ್ಲಿ ಅಬ್ಬರಿಸುತ್ತಿರುವ ವಿರಾಟ್​ ಆಟಕ್ಕೆ ಗುಣಗಾನ ಶುರುವಾಗಿದೆ. 'ಭಾರತೀಯ ಬ್ಯಾಟರ್ ಕೊಹ್ಲಿಯನ್ನು ಯಾವುದೇ ಹಂತದಲ್ಲಿಯೂ ಅಳೆಯಲು ಸಾಧ್ಯವಿಲ್ಲ' ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಕಮ್ರಾನ್​ ಅಕ್ಮಲ್​ ಹೊಗಳಿದ್ದಾರೆ.

ಯೂಟ್ಯೂಬ್​ ವಿಡಿಯೋದಲ್ಲಿ ಮಾತನಾಡಿರುವ ಅಕ್ಮಲ್​, 'ಈಗಿನ ಕ್ರಿಕೆಟ್​ನಲ್ಲಿ 45 ಶತಕ ಬಾರಿಸುವುದು ಅತಿ ಕಠಿಣ. ಅಂಥದ್ದರಲ್ಲಿ ವಿರಾಟ್​ ಕೊಹ್ಲಿ ಏಕದಿನವೊಂದರಲ್ಲೇ 45 ಶತಕ ಬಾರಿಸಿದ್ದಾರೆ. ಒಟ್ಟಾರೆ, ವೃತ್ತಿ ಬದುಕಿನಲ್ಲಿ 73 ಶತಕದ ಶಿಖರ ನಿರ್ಮಿಸಿದ್ದಾರೆ. ಆತನ ಆಟವನ್ನು ಇಂತಿಷ್ಟೇ ಎಂದು ಅಳೆಯಲಾಗದು. ಇಷ್ಟು ಶತಕ ಬಾರಿಸಿದ್ದನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ' ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ವಿರಾಟ್​ ಕೊಹ್ಲಿ ಈಗಿನ ಕ್ರಿಕೆಟ್​ನ ಅಧಿಪತಿ ಏಕೆ ಎಂಬುದನ್ನು ಆತ ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಆತ ನಿಜಕ್ಕೂ ವಿಶ್ವಕ್ರಿಕೆಟ್​ನ ಅಚ್ಚರಿಯೇ ಸರಿ. ಶತಕಗಳನ್ನು ಬಾರಿಸಿ ದಾಖಲೆಗಳನ್ನು ಪುಡಿಗಟ್ಟುತ್ತಿರುವ ವಿರಾಟ್​ ಆಟ ನಿಜಕ್ಕೂ ಅಚ್ಚರಿ ಮತ್ತು ಅದ್ಭುತ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಕೊಹ್ಲಿ ಭಾರತಕ್ಕೆ ಮಾತ್ರವಲ್ಲ, ವಿಶ್ವ ಕ್ರಿಕೆಟ್​ನ ಸ್ಪೆಷಲ್​ ಪ್ಲೇಯರ್​ ಎಂದು ಬಣ್ಣಿಸಿರುವ ಅಕ್ಮಲ್​, ಮೂರು ವರ್ಷಗಳಿಂದ ಫಾರ್ಮ್​ಗಾಗಿ ಪರದಾಡುತ್ತಿದ್ದ ವಿರಾಟ್​ ಬ್ಯಾಟ್​ ಈಗ ಮತ್ತೆ ಮಾತನಾಡಲು ಶುರು ಮಾಡಿದೆ. ಬ್ಯಾಕ್​ ಟು ಬ್ಯಾಕ್​ ಸೆಂಚುರಿ ಬಾರಿಸಿದ್ದು, ಆತನಲ್ಲಿ ಕ್ರಿಕೆಟ್​ ಹಸಿವು ಇಂಗಿಲ್ಲ ಎಂಬುದನ್ನು ತೋರಿಸುತ್ತದೆ. ಲಯವನ್ನು ಮರು ಸಂಪಾದಿಸಿರುವ ವಿರಾಟ್​ ಭಾರತ ಕ್ರಿಕೆಟ್​ನ ನಿಜವಾದ ಫೈಟರ್​. ಏಷ್ಯಾಕಪ್‌ ಮತ್ತು ವಿಶ್ವಕಪ್ ಪ್ರದರ್ಶನ ಅವರನ್ನು ಬದಲಾಯಿಸಿತು. ಭಾರತಕ್ಕೆ ಆತ ಎಷ್ಟು ಮುಖ್ಯ ಎಂಬುದು ಈಗ ಗೊತ್ತಾಗಿದೆ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಕಳೆದ ಮೂರು ವರ್ಷಗಳಿಂದ ಲಯದ ಸಮಸ್ಯೆಯಿಂದಾಗಿ ಭಾರಿ ಟೀಕೆಗೆ ಗುರಿಯಾಗಿದ್ದ ವಿರಾಟ್​ ಕೊಹ್ಲಿ, ಈಗ ಭರ್ಜರಿಯಾಗಿ ಬ್ಯಾಟ್​ ಬೀಸುತ್ತಿದ್ದಾರೆ. ಟಿ20ಯಲ್ಲಿ 1, ಏಕದಿನದಲ್ಲಿ ಸತತ 2 ಶತಕಗಳೊಂದಿಗೆ 45 ಬಾರಿಸಿ ವಿಶ್ವ ಕ್ರಿಕೆಟ್​ನಲ್ಲಿ ಸಚಿನ್​ ಬಳಿಕ ಎರಡನೇ ಅತ್ಯಧಿಕ ಶತಕ ಬಾರಿಸಿದ ಆಟಗಾರ ಎಂಬ ದಾಖಲೆ ನಿರ್ಮಿಸಿದ್ದಾರೆ. ಶ್ರೀಲಂಕಾ ವಿರುದ್ಧ ಗುವಾಹಟಿಯಲ್ಲಿ ನಡೆದ ಈಚೆಗೆ ನಡೆದ ಮೊದಲ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿಯ ಬ್ಯಾಟ್​ ಅಬ್ಬರಿಸುವ ಮೂಲಕ 73 ನೇ ಅಂತಾರಾಷ್ಟ್ರೀಯ ಶತಕ ಬಾರಿಸಿದ್ದರು.

ಈ ಪಂದ್ಯದಲ್ಲಿ 52 ಮತ್ತು 81 ರನ್‌ ಗಳಿಸಿದ್ದಾಗ ಸಿಕ್ಕ ಜೀವದಾನವನ್ನು ಬಳಸಿಕೊಂಡ ಕೊಹ್ಲಿ 87 ಎಸೆತಗಳಲ್ಲಿ 113 ರನ್ ಗಳಿಸಿ ಭಾರತ ಬೃಹತ್​ ಮೊತ್ತ ಗಳಿಸಲು ನೆರವಾದರು. ಅಲ್ಲದೇ, ಇದು ಏಕದಿನ ಕ್ರಿಕೆಟ್‌ನಲ್ಲಿ ಕೊಹ್ಲಿ ಅವರ 45 ನೇ ಶತಕವಾಗಿದೆ. ಸಚಿನ್ ತೆಂಡೂಲ್ಕರ್ ಇದೇ ಮಾದರಿಯಲ್ಲಿ 49 ಶತಕಗಳನ್ನು ಬಾರಿಸಿದ್ದಾರೆ. ಇದನ್ನು ಸರಿಗಟ್ಟಲು ಕೊಹ್ಲಿಗೆ ಕೇವಲ ನಾಲ್ಕು ಶತಕ ಮಾತ್ರ ಬೇಕಿದೆ.

ಇದನ್ನೂ ಓದಿ: 2023ರ ಐಪಿಎಲ್​ ಮಿಸ್​ ಮಾಡಿಕೊಳ್ಳಲಿದ್ದಾರೆ ಡೆಲ್ಲಿ ಕ್ಯಾಪಿಟಲ್ಸ್​ ನಾಯಕ ಪಂತ್​: ಗಂಗೂಲಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.