ಕ್ರೈಸ್ಟ್ಚರ್ಚ್(ನ್ಯೂಜಿಲ್ಯಾಂಡ್): ನ್ಯೂಜಿಲ್ಯಾಂಡ್ ಕ್ರಿಕೆಟ್ ಬೋರ್ಡ್ ಮತ್ತು ಆಟಗಾರರ ಒಕ್ಕೂಟದ ನಡುವೆ ಐದು ವರ್ಷಗಳಿಗೋಸ್ಕರ ಐತಿಹಾಸಿಕ ಒಪ್ಪಂದ ಏರ್ಪಟ್ಟಿದೆ. ಈ ಒಪ್ಪಂದದ ಪ್ರಕಾರ ಇನ್ಮುಂದೆ ಮಹಿಳಾ ಹಾಗೂ ಪುರುಷ ಕ್ರಿಕೆಟರ್ಸ್ ಸಮಾನವಾದ ವೇತನ ಪಡೆದುಕೊಳ್ಳಲಿದ್ದಾರೆ.
ಅಂತಾರಾಷ್ಟ್ರೀಯ ಮತ್ತು ದೇಶೀಯ ಕ್ರಿಕೆಟ್ನಲ್ಲಿ ನ್ಯೂಜಿಲ್ಯಾಂಡ್ ಪ್ರತಿನಿಧಿಸುವ ಮಹಿಳಾ - ಪುರುಷ ಕ್ರಿಕೆಟರ್ಸ್ ಸಮಾನ ವೇತನ ಪಡೆದುಕೊಳ್ಳಲಿದ್ದು, ಇದರ ಜೊತೆಗೆ ಮಹಿಳಾ ಪ್ಲೇಯರ್ಸ್ ಹೆಚ್ಚಿನ ಪಂದ್ಯಗಳಲ್ಲಿ ಭಾಗಿಯಾಗುವ ಅವಕಾಶ ಪಡೆದುಕೊಳ್ಳಲಿದ್ದಾರೆ ಎಂದು ನ್ಯೂಜಿಲ್ಯಾಂಡ್ ಕ್ರಿಕೆಟ್ ಬೋರ್ಡ್ನ ಮುಖ್ಯ ಕಾರ್ಯನಿರ್ವಾಹಕ ಡೇವಿಡ್ ವೈಟ್ ಹೇಳಿಕೆ ನೀಡಿದ್ದಾರೆ.
-
Landmark day for all levels of cricket in New Zealand 🏏 #CricketNationhttps://t.co/WCSjTAl9Q8
— BLACKCAPS (@BLACKCAPS) July 4, 2022 " class="align-text-top noRightClick twitterSection" data="
">Landmark day for all levels of cricket in New Zealand 🏏 #CricketNationhttps://t.co/WCSjTAl9Q8
— BLACKCAPS (@BLACKCAPS) July 4, 2022Landmark day for all levels of cricket in New Zealand 🏏 #CricketNationhttps://t.co/WCSjTAl9Q8
— BLACKCAPS (@BLACKCAPS) July 4, 2022
ಇಂತಹ ಮಹತ್ವದ ನಿರ್ಧಾರ ಕೈಗೊಳ್ಳುವಲ್ಲಿ ಶ್ರಮಿಸಿರುವ ಆಟಗಾರರು ಮತ್ತು ಪ್ರಮುಖ ಬೋರ್ಡ್ಗಳಿಗೆ ನಾನು ಧನ್ಯವಾದ ಹೇಳುತ್ತೇನೆ ಎಂದು ಡೇವಿಡ್ ವೈಟ್ ತಿಳಿಸಿದ್ದಾರೆ. ರಾಷ್ಟ್ರೀಯ ಮಹಿಳಾ ತಂಡದ ಪ್ಲೇಯರ್ಸ್ ಜೊತೆಗೆ ದೇಶೀಯ ಮಟ್ಟದಲ್ಲಿ ಆಡುವ ಆಟಗಾರರು ಸಮಾನವಾದ ಶುಲ್ಕ ಪಡೆದುಕೊಳ್ಳಲಿದ್ದಾರೆ. ಅಗ್ರ ಶ್ರೇಯಾಂಕದ ಬ್ಯಾಟರ್ಗಳ ವೇತನದಲ್ಲೂ ಏರಿಕೆ ಮಾಡಲಾಗಿದೆ.
ಇದನ್ನೂ ಓದಿರಿ: ಆಸ್ಟ್ರೇಲಿಯಾ ಬಳಿಕ ಇಂಗ್ಲೆಂಡ್‌ನಲ್ಲೂ ಕೆಟ್ಟ ಚಾಳಿ; ಭಾರತೀಯ ಅಭಿಮಾನಿಗಳ ಮೇಲೆ ಜನಾಂಗೀಯ ನಿಂದನೆ
ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಸೋಫಿ ಡಿವೈನ್, ಪುರುಷರಷ್ಟೇ ಒಪ್ಪಂದದೊಂದಿಗೆ ಇದೀಗ ಗುರುತಿಸಿಕೊಳ್ಳುವುದು ಉತ್ತಮ ಬೆಳವಣಿಗೆ ಎಂದಿದ್ದಾರೆ. ಇದೇ ವೇಳೆ ಪುರುಷರ ತಂಡದ ಕ್ಯಾಪ್ಟನ್ ಕೇನ್ ವಿಲಿಯಮ್ಸನ್ ಮಾತನಾಡಿ, ಇದೊಂದು ದೊಡ್ಡ ಹೆಜ್ಜೆಯಾಗಿದೆ ಎಂದಿದ್ದಾರೆ.