ಲಂಡನ್: 2019 ರ ಐಸಿಸಿ ಪುರುಷರ ಏಕದಿನ ವಿಶ್ವಕಪ್ ವಿಜೇತ ನಾಯಕ ಇಯಾನ್ ಮೊರ್ಗನ್ ಎಲ್ಲ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ. ಕಳೆದ ವರ್ಷ ಇಂಗ್ಲೆಂಡ್ ನಾಯಕತ್ವ ತ್ಯಜಿಸಿ ಕ್ರಿಕೆಟ್‌ನಿಂದ ದೂರವುಳಿದಿದ್ದ ಕ್ರಿಕೆಟಿಗ ಈಗ ಅಧಿಕೃತವಾಗಿ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್ ತಂಡ ತೊರೆದು ಸ್ಥಳೀಯ ಲೀಗ್ಗಳಲ್ಲಿ ತೊಡಗಿಸಿಕೊಂಡಿದ್ದ ಮೊರ್ಗನ್, ಇತ್ತೀಚೆಗೆ ಮುಕ್ತಾಯಗೊಂಡ SA20 ಲೀಗ್‌ನಲ್ಲಿ ಆಡಿದ್ದರು. 6 ಇನಿಂಗ್ಸ್ಗಳಲ್ಲಿ ಗರಿಷ್ಠ 64 ರನ್ಗಳೊಂದಿಗೆ 145.45 ಸ್ಟ್ರೈಕ್ ರೇಟ್‌ನಲ್ಲಿ 128 ರನ್‌ಗಳನ್ನು ಗಳಿಸಿದ್ದರು. ಐರ್ಲೆಂಡ್ ತಂಡದೊಂದಿಗೆ ಕ್ರಿಕೆಟ್ ವೃತ್ತಿ ಆರಂಭಿಸಿದ್ದ ಮೊರ್ಗಾನ್ ಬಳಿಕ ಇಂಗ್ಲೆಂಡ್ ತಂಡದ ನಾಯಕರಾಗಿ ಬೆಳೆದಿದ್ದರು.ತಮ್ಮ 16 ವರ್ಷಗಳ ಸುದೀರ್ಘ ವೃತ್ತಿಜೀವನದ ನಂತರ ಕಳೆದ ವರ್ಷ ಜುಲೈನಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿಕೊಂಡಿದ್ದರು.
- — Eoin Morgan (@Eoin16) February 13, 2023 " class="align-text-top noRightClick twitterSection" data="
— Eoin Morgan (@Eoin16) February 13, 2023
">— Eoin Morgan (@Eoin16) February 13, 2023
ಟ್ವೀಟ್ ಮಾಡಿ ನಿವೃತ್ತಿ ವಿಷಯ ಹಂಚಿಕೊಂಡಿರುವ ಮೊರ್ಗನ್, "ನಾನು ಎಲ್ಲ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸುತ್ತಿದ್ದೇನೆ. ಸಮಾಲೋಚನೆಯ ಬಳಿಕ ಆಟದಿಂದ ಹಿಂದೆ ಸರಿಯಲು ಇದು ಸರಿಯಾದ ಸಮಯ ಎಂದು ಭಾವಿಸಿದ್ದೇನೆ. 2005 ರಲ್ಲಿ ಇಂಗ್ಲೆಂಡ್‌ನ ಮಿಡ್ಲ್‌ಸೆಕ್ಸ್ ತಂಡ ಸೇರಿಕೊಂಡು ಕ್ರಿಕೆಟ್ ವೃತ್ತಿ ಜೀವನ ಆರಂಭಿಸಿದಾಗಿನಿಂದ ಹಿಡಿದು ಕೊನೆಯದಾಗಿ ಆಡಿದ SA20 ನಲ್ಲಿ ಪರ್ಲ್ ರಾಯಲ್ಸ್ ತಂಡದೊಂದಿಗಿನ ಉತ್ತಮ ಬಾಂಧವ್ಯ ಹೊಂದಿದ್ದೇನೆ. ಪ್ರತಿಯೊಬ್ಬ ಕ್ರೀಡಾಪಟುವಿನ ವೃತ್ತಿಜೀವನದಲ್ಲಿ ಏರಿಳಿತಗಳು ಸಹಜ. ಯಾವುದೇ ಸಮಯದಲ್ಲೂ ನನ್ನ ಕುಟುಂಬ ನನ್ನೊಂದಿಗೆ ಇತ್ತು. ಬೇಷರತ್ತಾಗಿ ಬೆಂಬಲ ನೀಡಿದ ಆಪ್ತ ಸ್ನೇಹಿತರಿಗೆ ನಾನು ಧನ್ಯವಾದ ಸಲ್ಲಿಸುವೆ ಎಂದು ಹೇಳಿದ್ದಾರೆ.
ಕ್ರಿಕೆಟ್ ಮಿಸ್ ಮಾಡಿಕೊಳ್ಳುತ್ತೇನೆ: ವಿದಾಯದ ಬಳಿಕ ನಾನು ಕ್ರಿಕೆಟ್ ಆಡುವುದನ್ನು ಕಳೆದುಕೊಳ್ಳಲಿದ್ದೇನೆ. ಕುಟುಂಬದೊಂದಿಗೆ ಸಮಯ ಕಳೆಯಲು ಇದು ಸಕಾಲವಾಗಿದೆ. ಅಂತಾರಾಷ್ಟ್ರೀಯ ಮತ್ತು ಫ್ರಾಂಚೈಸ್ ಪಂದ್ಯಾವಳಿಗಳಲ್ಲಿ ವೀಕ್ಷಕ ವಿವರಣೆಗಾರನಾಗಿ ಪ್ರಸಾರಕರ ಜೊತೆಯಲ್ಲಿ ಕೆಲಸ ಮಾಡುತ್ತೇನೆ ಎಂದು ಅವರು ಹೇಳಿದ್ದಾರೆ.
ಮೊರ್ಗನ್ ಕ್ರಿಕೆಟ್ ಸಾಧನೆ: 2006 ರಲ್ಲಿ ಕ್ರಿಕೆಟ್ ಜೀವನ ಆರಂಭಿಸಿದ ಮೊರ್ಗನ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 5,042, ಲಿಸ್ಟ್ ಎ ನಲ್ಲಿ 11,654 ಮತ್ತು ಟಿ20 ಗಳಲ್ಲಿ 7,780 ರನ್ ಗಳಿಸಿದ್ದಾರೆ. ಇಂಗ್ಲೆಂಡ್‌ನ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾದ ಮೊರ್ಗನ್ 225 ಏಕದಿನಗಳಲ್ಲಿ 6957 ರನ್ ಗಳಿಸಿದ್ದಾರೆ. ಇದರಲ್ಲಿ 13 ಶತಕಗಳಿವೆ. ಆಂಗ್ಲ ತಂಡದ ಅತ್ಯಂತ ಯಶಸ್ವಿ ನಾಯಕರಾಗಿರುವ ಮೊರ್ಗನ್ ನೇತೃತ್ವದಲ್ಲಿ ತಂಡ 126 ಪಂದ್ಯಗಳಿಂದ 76 ಗೆಲುವುಗಳನ್ನು ಸಾಧಿಸಿದೆ.
ಟಿ-20ಯಲ್ಲಿ 115 ಪಂದ್ಯಗಳಲ್ಲಿ 14 ಅರ್ಧಶತಕಗಳೊಂದಿಗೆ 136.18 ಸ್ಟ್ರೈಕ್ ರೇಟ್‌ನಲ್ಲಿ 2458 ರನ್‌ಗಳನ್ನು ಗಳಿಸಿದ್ದಾರೆ. 2010 ರಲ್ಲಿ ವೆಸ್ಟ್ ಇಂಡೀಸ್‌ನಲ್ಲಿ ನಡೆದ ಟೂರ್ನಿಯಲ್ಲಿ ಇಂಗ್ಲೆಂಡ್‌ನ ಮೊರ್ಗನ್ ನಾಯಕತ್ವದಲ್ಲಿ ವಿಶ್ವಕಪ್ ಎತ್ತಿ ಹಿಡಿದಿತ್ತು. ಭಾರತದಲ್ಲಿ 2016 ರ ನಡೆದ ವಿಶ್ವಕಪ್ನಲ್ಲಿ ಫೈನಲ್ವರೆಗೆ ತಂಡವನ್ನು ಕೊಂಡೊಯ್ದಿದ್ದರು. 72 ಟಿ20 ಪಂದ್ಯಗಳಿಂದ 42 ಗೆಲುವು ಪಡೆದಿದ್ದಾರೆ.
2019 ರ ಏಕದಿನ ವಿಶ್ವಕಪ್ ಜಯ: ಇಂಗ್ಲೆಂಡ್‌ನ ಯಶಸ್ವಿ ಏಕದಿನ ತಂಡದ ನಾಯಕ ಇಯಾನ್ ಮೊರ್ಗನ್ 2019 ರಲ್ಲಿ ನಡೆದ ಏಕದಿನ ವಿಶ್ವಕಪ್ ಜಯಿಸಿದ್ದರು. ವಿಶ್ವಕಪ್ ಗೆದ್ದ ಮೊದಲ ನಾಯಕ ಎಂಬ ದಾಖಲೆಯೂ ಇವರ ಹೆಸರಲ್ಲಿದೆ.
ಓದಿ: ಬಾರ್ಡರ್ ಗವಾಸ್ಕರ್ ಟ್ರೋಫಿ: ಮೂರನೇ ಟೆಸ್ಟ್ ಧರ್ಮಶಾಲಾದಿಂದ ಇಂದೋರ್‌ಗೆ ಸ್ಥಳಾಂತರ