ಲಾರ್ಡ್ಸ್ (ಇಂಗ್ಲೆಂಡ್): 'ಕ್ರಿಕೆಟ್ ಕಾಶಿ' ಖ್ಯಾತಿಯ ಲಂಡನ್‌ನ ಲಾರ್ಡ್ಸ್ ಮೈದಾನದಲ್ಲಿ ನಿನ್ನೆ ನಡೆದ 2ನೇ ಏಕದಿನ ಪಂದ್ಯದಲ್ಲಿ ಭಾರತದ ವಿರುದ್ಧ ಇಂಗ್ಲೆಂಡ್ 100 ರನ್‌ಗಳಿಂದ ಗೆದ್ದು ಬೀಗಿತು. ಇದಕ್ಕೂ ಮುನ್ನ, ಟಾಸ್ ಸೋತು ಬ್ಯಾಟಿಂಗ್‌ಗೆ ಮುಂದಾದ ಇಂಗ್ಲೆಂಡ್ 49 ಓವರ್‌ಗಳಿಗೆ ಎಲ್ಲ ವಿಕೆಟ್ ಕಳೆದುಕೊಂಡು ಭಾರತಕ್ಕೆ 247 ರನ್ಗಳ ಟಾರ್ಗೆಟ್ ನೀಡಿತ್ತು. ಆಂಗ್ಲರು ಹೇಳಿಕೊಳ್ಳುವ ಬ್ಯಾಟಿಂಗ್ ಪ್ರದರ್ಶನ ನೀಡದೇ ಇದ್ದರೂ ಬೌಲಿಂಗ್‌ನಲ್ಲಿ ಭಾರತದ ವಿರುದ್ಧ ಸಂಪೂರ್ಣ ಹತೋಟಿ ಸಾಧಿಸಿದರು.
ಇಂಗ್ಲೆಂಡ್ ಇನ್ನಿಂಗ್ಸ್: ಮೊದಲು ಬ್ಯಾಟ್ ಮಾಡಿದ ಜೋಸ್ ಬಟ್ಲರ್ ತಂಡ ಭಾರತದ ಬೌಲರುಗಳ ದಾಳಿಯನ್ನು ಅರಿತುಕೊಂಡಿತು. ಆರಂಭಿಕರಾಗಿ ಕಣಕ್ಕಿಳಿದ ಜೇಸನ್ ರಾಯ್ ಮತ್ತು ಬೈರ್ಸ್ಟೋ 41ರನ್ಗಳ ಜೊತೆಯಾಟವಾಡಿದರು. 23 ರನ್ಗಳಿಸಿದ್ದ ರಾಯ್, ಹಾರ್ದಿಕ್ ಓವರ್ನಲ್ಲಿ ವಿಕೆಟ್ ಒಪ್ಪಿಸಿದರು. 38 ರನ್ಗಳಿಕೆ ಮಾಡಿದ್ದ ಬೈರ್ಸ್ಟೋ ಕೂಡ ಚಹಲ್ ಓವರ್ನಲ್ಲಿ ಔಟಾದರು. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಜೋ ರೂಟ್ (11), ಸ್ಟೋಕ್ಸ್ (21) ಹಾಗೂ ಬಟ್ಲರ್ (4) ಮತ್ತೊಮ್ಮೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ಹೀಗಾಗಿ ತಂಡ 102 ರನ್ಗಳಿಸುವಷ್ಟರಲ್ಲಿ ಪ್ರಮುಖ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
-
England on 🔝#ENGvIND | 📝 Scorecard: https://t.co/LUUs4go6H0 pic.twitter.com/YOVMhJsqKj
— ICC (@ICC) July 14, 2022 " class="align-text-top noRightClick twitterSection" data="
">England on 🔝#ENGvIND | 📝 Scorecard: https://t.co/LUUs4go6H0 pic.twitter.com/YOVMhJsqKj
— ICC (@ICC) July 14, 2022England on 🔝#ENGvIND | 📝 Scorecard: https://t.co/LUUs4go6H0 pic.twitter.com/YOVMhJsqKj
— ICC (@ICC) July 14, 2022
ಇಂಗ್ಲೆಂಡ್ ಮಧ್ಯಮ ಕ್ರಮಾಂಕದಲ್ಲಿ ವಿಕೆಟ್ ಒಪ್ಪಿಸುತ್ತಾ ಇಕ್ಕಟ್ಟಿಗೆ ಸಿಲುಕಿದಾಗ ಲಿವಿಂಗ್ಸ್ಟೋನ್ (33), ಮೋಯಿನ್ ಅಲಿ (47) ಹಾಗೂ ವಿಲ್ಲೆ (41) ಆಸರೆಯಾದರು. ಹೀಗಾಗಿ ತಂಡ ಸ್ಪರ್ಧಾತ್ಮಕ ರನ್ಗಳಿಕೆ ಮಾಡಿತು. ಕೊನೆಯದಾಗಿ 49 ಓವರ್‌ಗಳಲ್ಲಿ ಸರ್ವ ಪತನದ ಕಂಡು 246 ರನ್ಗಳಿಕೆ ಮಾಡಿತು. ಭಾರತದ ಪರ ಬೌಲಿಂಗ್‌ನಲ್ಲಿ ಮಿಂಚಿದ ಚಾಹಲ್ 4 ವಿಕೆಟ್ ಪಡೆದರೆ, ಬುಮ್ರಾ, ಹಾರ್ದಿಕ್ ಪಾಂಡ್ಯ ತಲಾ 2 ವಿಕೆಟ್ ಹಾಗೂ ಶಮಿ, ಪ್ರಸಿದ್ಧ್ ಕೃಷ್ಣ 1 ವಿಕೆಟ್ ಕಿತ್ತರು.
ಇದನ್ನೂ ಓದಿ: ಡೋಪಿಂಗ್ನಲ್ಲಿ ಫೇಲ್: ಬಾಂಗ್ಲಾದೇಶ ಬೌಲರ್ಗೆ 10 ತಿಂಗಳು ಅಮಾನತು ಶಿಕ್ಷೆ
ಭಾರತದ ಇನ್ನಿಂಗ್ಸ್: ಇಂಗ್ಲೆಂಡ್ ನೀಡಿದ ಸಾಧಾರಣ ಮೊತ್ತ ಬೆನ್ನತ್ತಿದ್ದ ಭಾರತವೂ ಆರಂಭದಿಂದಲೇ ತೊಂದರೆಗೆ ಸಿಲುಕಿತು. ಇಂಗ್ಲೆಂಡ್ ಬೌಲರ್ಸ್ ದಾಳಿಗೆ ಭಾರತ ತತ್ತರಿಸಿತು. ಐವರು ಬ್ಯಾಟರ್‌ಗಳು ಎರಡಂಕಿ ರನ್ ದಾಟಿದ್ರೆ, ಮೂವರು ಬ್ಯಾಟರ್‌ಗಳು ಖಾತೆಯನ್ನೇ ತೆರೆಯದೇ ಪೆವಿಲಿಯನ್ ಸೇರಿಕೊಂಡರು. 38.5 ಓವರ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡು 146 ರನ್ಗಳಿಸಲು ಮಾತ್ರ ಸಾಧ್ಯವಾಯಿತು. ಈ ಮೂಲಕ ಭಾರತ ತಂಡ ಭಾರತ 100 ರನ್ಗಳ ಹೀನಾಯ ಸೋಲು ಕಂಡಿತು. ಭರ್ಜರಿ ಗೆಲುವಿನಿಂದ ಆಂಗ್ಲರು ಸರಣಿಯಲ್ಲಿ 1-1 ಸಮಬಲ ಸಾಧಿಸಿದರು.
ಭಾರತ ಪರ ನಾಯಕ ರೋಹಿತ್ ಶರ್ಮಾ 0, ಶಿಖರ್ ಧವನ್ 9, ವಿರಾಟ್ ಕೊಹ್ಲಿ 16, ರಿಷಭ್ ಪಂತ್ 0, ಸೂರ್ಯಕುಮಾರ್ ಯಾದವ್ 27, ಹಾರ್ದಿಕ್ ಪಾಂಡ್ಯಾ 29, ರವೀಂದ್ರ ಜಡೇಜಾ 29, ಮೊಹಮ್ಮದ್ ಶೆಮಿ 23, ಚಹಾಲ್ 3, ಪ್ರಸಿದ್ಧ್ ಕೃಷ್ಣ 0 ಮತ್ತು ಜಸ್ಪ್ರಿತ್ ಬುಮ್ರಾ 2 ರನ್ಗಳಿಸಿ ಅಜೇಯರಾಗುಳಿದರು. ಇಂಗ್ಲೆಂಡ್ ಪರ ರೀಸ್ ಟಾಪ್ಲಿ 6 ವಿಕೆಟ್‌ಗಳನ್ನು ಪಡೆದು ಮಿಂಚಿದ್ರೆ, ಡೇವಿಡ್ ವಿಲ್ಲಿ, ಬ್ರೈಡನ್ ಕಾರ್ಸೆ, ಮೋಯಿನ್ ಅಲಿ ಮತ್ತು ಲಿಯಾಮ್ ಲಿವಿಂಗ್ಸ್ಟೋನ್ ತಲಾ ಒಂದೊಂದು ವಿಕೆಟ್ ಪಡೆದು ತಂಡದ ಗೆಲುವಿಗೆ ಕಾರಣರಾದರು.
ಮುಂದಿನ ಪಂದ್ಯ ಭಾನುವಾರ ಮ್ಯಾಂಚೆಸ್ಟರ್ನಲ್ಲಿ ನಡೆಯಲಿದ್ದು, ಸರಣಿ ನಿರ್ಣಯಿಸಲಿದೆ.