ಮೆಲ್ಬೋರ್ನ್(ಆಸ್ಟ್ರೇಲಿಯಾ): ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಐರ್ಲೆಂಡ್ ಇಂಗ್ಲೆಂಡ್ ಗೆ158 ರನ್ಗಳ ಸ್ಪರ್ಧಾತ್ಮಕ ಗುರಿಯನ್ನು ನೀಡಿದೆ. ಮಾರ್ಕ್ ವುಡ್ ಮತ್ತು ಲಿಯಾಮ್ ಲಿವಿಂಗ್‌ಸ್ಟೋನ್ ದಾಳಿಗೆ ನಲುಗಿದ ಐರ್ಲೆಂಡ್ ನಾಯಕ ಆಂಡ್ರ್ಯೂ ಬಾಲ್ಬಿರ್ನಿ ಅವರ ಅರ್ಧ ಶತಕದ ನೆರವಿನಿಂದ ತನ್ನೆಲ್ಲಾ ವಿಕೆಟ್ ಕಳೆದು ಕೊಂಡು 157ರನ್ ಗಳಿಸಿದೆ.
ಮಳೆಯ ಅಡ್ಡಿಯಿಂದ ಟಾಸ್ ಆದ ನಂತರ ಕೊಂಚ ತಡವಾಗಿಯೆ ಪಂದ್ಯ ಆರಂಭವಾಯಿತು. 1.3 ಓವರ್ಗೆ 11 ರನ್ ಆಗಿದ್ದಾಗ ಮತ್ತೆ ಮಳೆ ಬಂದು 10 ನಿಮಿಷಗಳ ಕಾಲ ಪಂದ್ಯ ನಿಲ್ಲಿಸಲಾಗಿತ್ತು. ಅತೀ ಹೆಚ್ಚು ಬೌಂಡರಿಗಳಿಸಿ ದಾಖಲೆ ಬರೆದಿದ್ದ ಪಾಲ್ ಸ್ಟಿರ್ಲಿಂಗ್(14) ಬೇಗ ವಿಕೆಟ್ ಒಪ್ಪಿಸಿದರು. ನಂತರ ನಾಯಕ ಆಂಡ್ರ್ಯೂ ಬಾಲ್ಬಿರ್ನಿ(62) ಜೊತೆ ಲೋರ್ಕನ್ ಟಕರ್(34) ಐವತ್ತು ರನ್ನ ಜೊತೆಯಾಟ ನೀಡಿದರು.
-
Toss update from Melbourne 🏟
— T20 World Cup (@T20WorldCup) October 26, 2022 " class="align-text-top noRightClick twitterSection" data="
England have won the toss and opted to bowl against Ireland in Match 8 of Super 12.#T20WorldCup | #IREvENG | 📝: https://t.co/WuCy4jxWJS pic.twitter.com/RkrccctGgC
">Toss update from Melbourne 🏟
— T20 World Cup (@T20WorldCup) October 26, 2022
England have won the toss and opted to bowl against Ireland in Match 8 of Super 12.#T20WorldCup | #IREvENG | 📝: https://t.co/WuCy4jxWJS pic.twitter.com/RkrccctGgCToss update from Melbourne 🏟
— T20 World Cup (@T20WorldCup) October 26, 2022
England have won the toss and opted to bowl against Ireland in Match 8 of Super 12.#T20WorldCup | #IREvENG | 📝: https://t.co/WuCy4jxWJS pic.twitter.com/RkrccctGgC
ಕರ್ಟಿಸ್ ಕ್ಯಾಂಫರ್(17 ಮತ್ತು ಗರೆಥ್ ಡೆಲಾನಿ(12) ಕೊಂಚ ಹೊತ್ತು ಆಡಿದ್ದು ಬಿಟ್ಟರೆ ಬಾಕಿ ಎಲ್ಲರೂ ಒಂದಂಕಿ ಗಳಿಸಲು ಪರದಾಡಿದರು. ಇಂಗ್ಲೆಂಡ್ ಪರ ಲಿಯಾಮ್ ಲಿವಿಂಗ್‌ಸ್ಟೋನ್ ಮತ್ತು ಮಾರ್ಕ್ ವುಡ್ ತಲಾ ಮೂರು ವಿಕೆಟ್ ಪಡೆದರೆ, ಸ್ಯಾಮ್ ಕರ್ರಾನ್ ಎರಡು ವಿಕೆಟ್ ಉರುಳಿಸಿದರು.
ತಂಡಗಳು: ಐರ್ಲೆಂಡ್: ಪಾಲ್ ಸ್ಟಿರ್ಲಿಂಗ್, ಆಂಡ್ರ್ಯೂ ಬಾಲ್ಬಿರ್ನಿ (ನಾಯಕ), ಲೋರ್ಕನ್ ಟಕರ್ (ವಿಕೆಟ್ ಕೀಪರ್), ಹ್ಯಾರಿ ಟೆಕ್ಟರ್, ಕರ್ಟಿಸ್ ಕ್ಯಾಂಫರ್, ಜಾರ್ಜ್ ಡಾಕ್ರೆಲ್, ಗರೆಥ್ ಡೆಲಾನಿ, ಮಾರ್ಕ್ ಅಡೇರ್, ಫಿಯಾನ್ ಹ್ಯಾಂಡ್, ಬ್ಯಾರಿ ಮೆಕಾರ್ಥಿ ಮತ್ತು ಜೋಶುವಾ ಲಿಟಲ್.
ಇಂಗ್ಲೆಂಡ್: ಜೋಸ್ ಬಟ್ಲರ್ (ನಾಯಕ/ವಿಕೆಟ್ ಕೀಪರ್), ಅಲೆಕ್ಸ್ ಹೇಲ್ಸ್, ಡೇವಿಡ್ ಮಲನ್, ಬೆನ್ ಸ್ಟೋಕ್ಸ್, ಲಿಯಾಮ್ ಲಿವಿಂಗ್‌ಸ್ಟೋನ್, ಹ್ಯಾರಿ ಬ್ರೂಕ್, ಮೊಯಿನ್ ಅಲಿ, ಸ್ಯಾಮ್ ಕರ್ರಾನ್, ಕ್ರಿಸ್ ವೋಕ್ಸ್, ಆದಿಲ್ ರಶೀದ್ ಮತ್ತು ಮಾರ್ಕ್ ವುಡ್.
ಇದನ್ನೂ ಓದಿ ; ಟಿ20 ವಿಶ್ವಕಪ್ : ಮುಂದಿನ ಪಂದ್ಯದಲ್ಲಿ ಭಾರತದ ಪ್ರಮುಖ ಆಲ್ರೌಂಡರ್ ಆಡುವುದು ಅನುಮಾನ