ETV Bharat / sports

ಇಂಗ್ಲೆಂಡ್ ತಂಡ ಆ್ಯಶಸ್​​ನಲ್ಲಿ​ ಅಸಮರ್ಥವಾಗಿತ್ತು, ಲ್ಯಾಂಗರ್​ ಮಾತ್ರವಲ್ಲ, ಬೇರೆ ಯಾರಾದ್ರೂ ಯಶಸ್ವಿಯಾಗ್ತಿದ್ರು!: ಮೆಕಲಮ್​

51 ವರ್ಷದ ಮಾಜಿ ಆರಂಭಿಕ ಆಟಗಾರ ಆಸೀಸ್​ ತಂಡ ದಕ್ಷಿಣ ಆಫ್ರಿಕಾದಲ್ಲಿ ಸ್ಯಾಂಡ್‌ಪೇಪರ್-ಗೇಟ್ ಹಗರಣಕ್ಕೆ ಸಿಲುಕಿದ್ದ ನಂತರ ಕೋಚ್​ ಹುದ್ದೆಗೇರಿದ್ದರು. ಲ್ಯಾಂಗರ್ ಸಂಕಷ್ಟದ ಸಂದರ್ಭದಲ್ಲಿ ಆಸ್ಟ್ರೇಲಿಯಾ ತಂಡದ ಕೋಚ್​ ಆಗಿ​ ರಾಷ್ಟ್ರದ ವಿಶ್ವಾಸವನ್ನು ಮರಳಿ ಪಡೆಯುವಲ್ಲಿ ಉತ್ತಮ ಕೆಲಸ ಮಾಡಿದ್ದಾರೆ ಎಂದಿರುವ ಮೆಕಲಮ್, ಅವರ ಅವಧಿಯಲ್ಲಿ ತಂಡದ ಪ್ರದರ್ಶನ ಮಾತ್ರ ಹೇಳಿಕೊಳ್ಳುವಷ್ಟು ಪ್ರಭಾವಶಾಲಿಯಾಗಿಲ್ಲ ಎಂದು ತಿಳಿಸಿದ್ದಾರೆ.

Brendon McCullum on Ashes
ಕಿವೀಸ್​ ಮಾಜಿ ನಾಯಕ ಬ್ರೆಂಡನ್​ ಮೆಕಲಮ್
author img

By

Published : Feb 8, 2022, 4:18 PM IST

ಆಕ್ಲೆಂಡ್​: ಆಸ್ಟ್ರೇಲಿಯಾ ವಿರುದ್ಧ ಆ್ಯಶಸ್​ ಸರಣಿಯಲ್ಲಿ ಪಾಲ್ಗೊಂಡಿದ್ದ ಇಂಗ್ಲೆಂಡ್​ ತಂಡವನ್ನು ಅಸಮರ್ಥ ತಂಡ ಎಂದು ಕರೆದಿರುವ ಕಿವೀಸ್​ ಮಾಜಿ ನಾಯಕ ಬ್ರೆಂಡನ್​ ಮೆಕಲಮ್​, ಈ ಸರಣಿಯಲ್ಲಿ ಕೋಚ್​ ಆಗಿ ಜಸ್ಟಿನ್ ಲ್ಯಾಂಗರ್​ ಮಾತ್ರವಲ್ಲ, ಬೇರೆ ಯಾರೇ ಅವರ ಜಾಗದಲ್ಲಿದ್ದರೂ ರೂಟ್​ ತಂಡದ ವಿರುದ್ಧ ಅದೇ ಫಲಿತಾಂಶವನ್ನು ಪಡೆಯುತ್ತಿದ್ದರು ಎಂದು ಅಭಿಪ್ರಾಯಪಟ್ಟಿದ್ದಾರೆ.

ಆಸ್ಟ್ರೇಲಿಯಾ 5 ಪಂದ್ಯಗಳ ಆ್ಯಶಸ್​ ಸರಣಿಯಲ್ಲಿ 4 - 0ಯಲ್ಲಿ ಇಂಗ್ಲೆಂಡ್ ತಂಡವನ್ನು ಬಗ್ಗುಬಡಿದಿತ್ತು. ಆದರೆ, ಇದರ ಬೆನ್ನಲ್ಲೇ ಆಸ್ಟ್ರೇಲಿಯಾದ ಮುಖ್ಯ ಕೋಚ್ ಲ್ಯಾಂಗರ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದು ಕ್ರಿಕೆಟ್ ಜಗತ್ತನ್ನು ತಲ್ಲಣಗೊಳಿಸಿತ್ತು.

51 ವರ್ಷದ ಮಾಜಿ ಆರಂಭಿಕ ಆಟಗಾರ ಆಸೀಸ್​ ತಂಡ ದಕ್ಷಿಣ ಆಫ್ರಿಕಾದಲ್ಲಿ ಸ್ಯಾಂಡ್‌ಪೇಪರ್ - ಗೇಟ್ ಹಗರಣಕ್ಕೆ ಸಿಲುಕಿದ್ದ ನಂತರ ಕೋಚ್​ ಹುದ್ದೆಗೇರಿದ್ದರು. ಲ್ಯಾಂಗರ್ ಸಂಕಷ್ಟದ ಸಂದರ್ಭದಲ್ಲಿ ಆಸ್ಟ್ರೇಲಿಯಾ ತಂಡದ ಕೋಚ್​ ಆಗಿ​ ರಾಷ್ಟ್ರದ ವಿಶ್ವಾಸ ಮರಳಿ ಪಡೆಯುವಲ್ಲಿ ಉತ್ತಮ ಕೆಲಸ ಮಾಡಿದ್ದಾರೆ ಎಂದಿರುವ ಮೆಕಲಮ್, ಅವರ ಅವಧಿಯಲ್ಲಿ ತಂಡದ ಪ್ರದರ್ಶನ ಮಾತ್ರ ಹೇಳಿಕೊಳ್ಳುವಷ್ಟು ಪ್ರಭಾವಶಾಲಿಯಾಗಿಲ್ಲ ಎಂದು ತಿಳಿಸಿದ್ದಾರೆ.

ಲ್ಯಾಂಗರ್​ ರಾಜೀನಾಮೆ ಆಸ್ಟ್ರೇಲಿಯಾ ಕ್ರಿಕೆಟ್​ ವಲಯದಲ್ಲಿ ತಲ್ಲಣ ಮೂಡಿಸಿತ್ತು. ರಿಕಿ ಪಾಂಟಿಂಗ್​, ಮ್ಯಾಥ್ಯೂ ಹೇಡನ್​, ಆ್ಯಡಂ ಗಿಲ್​ಕ್ರಿಸ್ಟ್​, ಶೇನ್ ವಾರ್ನ್​ ಸೇರಿದಂತೆ ಲ್ಯಾಂಗರ್​ ಅವರ ಸಮಕಾಲೀನರು ಕ್ರಿಕೆಟ್​ ಆಸ್ಟ್ರೇಲಿಯಾ ಮಾಜಿ ಆರಂಭಿಕನನ್ನು ನಡೆಸಿಕೊಂಡ ರೀತಿಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಲ್ಯಾಂಗರ್​ ಅವರ ಕೋಚ್​ ಅವಧಿ ಈ ವರ್ಷದ ಜೂನ್​ಗೆ ಅಂತ್ಯವಾಗುತ್ತಿತ್ತು. ಆದರೆ, ಅವರು ಟಿ-20 ವಿಶ್ವಕಪ್​ ಮತ್ತು ಆ್ಯಶಸ್​ ಯಶಸ್ಸಿನಿಂದ ದೀರ್ಘಾವಧಿಯ ಒಪ್ಪಂದದ ಕಡೆ ಎದುರು ನೋಡುತ್ತಿದ್ದರು, ಆದರೆ, ಸಿಇ ಕೇವಲ 2022ರ ಟಿ-20 ವಿಶ್ವಕಪ್​ವರೆಗೆ ಮುಂದುವರಿಸಲು ಮಾತ್ರ ಬಯಸಿತ್ತು, ಈ ಕಾರಣದಿಂದ ಅವರು ಒಪ್ಪದೇ ರಾಜೀನಾಮೆ ನೀಡಿದ್ದರು.

"ಇಂಗ್ಲೆಂಡ್​ ತಂಡ ಅಸಮರ್ಥವಾಗಿತ್ತು. ಆದ್ದರಿಂದ ಅಲ್ಲಿ ಯಾರೇ ತಂಡದ ನೇತೃತ್ವ ವಹಿಸಿದ್ದರೂ ಸಹಾ ಆ್ಯಶಸ್​ ಸರಣಿಯನ್ನು ಗೆಲ್ಲುತ್ತಿದ್ದರು. ಟಿ-20 ವಿಶ್ವಕಪ್​ನಲ್ಲಿ ಅವರೂ ನಿಜವಾಗಿಯೂ ಉತ್ತಮ ಪ್ರದರ್ಶನ ತೋರಿದ್ದರು. ಆದರೆ, ಅದರ ಹೊರೆತಾಗಿ, ಲ್ಯಾಂಗರ್​ ಅವಧಿಯಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್​ ತಂಡದ ಪ್ರದರ್ಶನ ಸಾಧಾರಣವಾಗಿತ್ತು ಎಂದು ತಮ್ಮ SENZ bfreakfast ​ ಕಾರ್ಯಕ್ರಮದಲ್ಲಿ ​ಹೇಳಿಕೊಂಡಿದ್ದಾರೆ.

ಲ್ಯಾಂಗರ್​ ಕೋಚ್​ ಪದ್ದತಿ ಆಟಗಾರರಿಗೆ ಇಷ್ಟವಿರಲಿಲ್ಲ

ಲ್ಯಾಂಗರ್​ ಕೋಚಿಂಗ್ ಪದ್ದತಿಯಿಂದ ಆಟಗಾರರಿಂದ ಗೌರವ ಕಳೆದುಕೊಂಡಿದ್ದರು. ಕಳೆದ ವರ್ಷ ಆಗಸ್ಟ್​ನಲ್ಲೇ ಅವರ ಸ್ಥಾನಕ್ಕೆ ಕುತ್ತು ಬಂದಿತ್ತು. ಆದರೆ ಆಟಗಾರರು ಮತ್ತು ಕ್ರಿಕೆಟ್​ ಮಂಡಳಿಯಿಂದ ಫೀಡ್​ಬ್ಯಾಕ್​ ನೀಡಿದ ಮೇಲೆ ಅವರು ತಮ್ಮ ಪದ್ದತಿಯನ್ನು ಬದಲಾಯಿಸಿಕೊಂಡಿದ್ದರು. ನಂತರ ಅವರು ಯಶಸ್ವಿಯಾಗಿದ್ದರು, ಅದು ಟಿ-20 ವಿಶ್ವಕಪ್​ ಮತ್ತು ಆ್ಯಶಸ್​ ಗೆಲುವಿಗೆ ಕಾರಣವಾಗಿತ್ತು ಮೆಕಲಮ್ ಹೇಳಿದ್ದಾರೆ.

ಇದನ್ನೂ ಓದಿ:ಕ್ರಿಕೆಟ್​ ಬಿಟ್ಟು ನಿಮ್ಮಪ್ಪನ ಜೊತೆ ಆಟೋ ಓಡಿಸ್ಕೊಂಡಿರು ಎಂದಿದ್ರು.. ಧೋನಿ ಮಾತು ನನ್ನಲ್ಲಿ ವಿಶ್ವಾಸ ತರಿಸಿದವು: ಸಿರಾಜ್​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.