ಬೆಂಗಳೂರು: ಐಸಿಸಿ ಏಕದಿನ ವಿಶ್ವಕಪ್ ಭಾಗವಾಗಿ ಇಂದು ಇಂಗ್ಲೆಂಡ್ ಮತ್ತು ಶ್ರೀಲಂಕಾ ತಂಡಗಳು ಮುಖಾಮುಖಿಯಾಗಿವೆ. ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಜೋಶ್ ಬಟ್ಲರ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಲಂಕಾ ಆಟಗಾರರಿಗೆ ಬೌಲಿಂಗ್ ಮಾಡುವಂತೆ ಆಹ್ವಾನ ನೀಡಿದ್ದಾರೆ. ಉಭಯ ತಂಡಗಳು ತಲಾ ಮೂರು ಪಂದ್ಯಗಳಲ್ಲಿ ಸೋಲು ಅನುಭವಿಸಿರುವುದರಿಂದ ಇಂದಿನ ಕಾದಾಟ ಉಭಯ ತಂಡಗಳಿಗೂ ಬಹಳ ಮಹತ್ವದ್ದಾಗಿದೆ. ಎರಡೂ ತಂಡಗಳು ಗೆಲುವಿನ ನಿರೀಕ್ಷೆಯಲ್ಲಿವೆ.
-
Toss news from Bengaluru 📰
— ICC Cricket World Cup (@cricketworldcup) October 26, 2023 " class="align-text-top noRightClick twitterSection" data="
Jos Buttler wins the toss and opts to bat first 🏏
Some big changes in the playing XIs 👀#CWC23 | #ENGvSL 📝: https://t.co/wPZKaIpVB0 pic.twitter.com/eHflKHTXbc
">Toss news from Bengaluru 📰
— ICC Cricket World Cup (@cricketworldcup) October 26, 2023
Jos Buttler wins the toss and opts to bat first 🏏
Some big changes in the playing XIs 👀#CWC23 | #ENGvSL 📝: https://t.co/wPZKaIpVB0 pic.twitter.com/eHflKHTXbcToss news from Bengaluru 📰
— ICC Cricket World Cup (@cricketworldcup) October 26, 2023
Jos Buttler wins the toss and opts to bat first 🏏
Some big changes in the playing XIs 👀#CWC23 | #ENGvSL 📝: https://t.co/wPZKaIpVB0 pic.twitter.com/eHflKHTXbc
ಈವರೆಗೆ ಆಡಿರುವ ತಲಾ ನಾಲ್ಕು ಪಂದ್ಯಗಳ ಪೈಕಿ ಒಂದೊಂದು ಗೆಲುವು ಪಡೆದಿರುವ ಇಂಗ್ಲೆಂಡ್ ಮತ್ತು ಶ್ರೀಲಂಕಾ ತಂಡಗಳು ಸೆಮಿಫೈನಲ್ ಅಂಗಳದಲ್ಲಿ ಉಳಿಯಬೇಕಿದ್ದರೆ ಬಹುತೇಕ ಬಾಕಿ ಉಳಿದಿರುವ ಎಲ್ಲ ಪಂದ್ಯಗಳನ್ನು ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿವೆ. ಯಾವುದಾದರೊಂದು ತಂಡ ಇಂದಿನ ಪಂದ್ಯವನ್ನು ಗೆದ್ದು ಸೆಮಿಫೈನಲ್ನಲ್ಲಿ ತನ್ನ ಸ್ಥಾನ ಭದ್ರಪಡಿಸಿಕೊಳ್ಳಲಿದೆ. ಆದರೆ, ಯಾವ ತಂಡಕ್ಕೆ ಆ ಭಾಗ್ಯ ಸಿಗಲಿದೆ ಅನ್ನೋದನ್ನು ಕಾದು ನೋಡಬೇಕಿದೆ. ಈ ಹಿಂದಿನ ಪಾಕಿಸ್ತಾನದ ವಿರುದ್ಧ ಶ್ರೀಲಂಕಾ 345 ರನ್ ಸಿಡಿಸಿದರೂ ಪಂದ್ಯವನ್ನು ಉಳಿಸಿಕೊಳ್ಳದಿರುವುದು ದುರಂತವಾದರೆ, ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡ ಅಫ್ಘಾನಿಸ್ತಾನದ ವಿರುದ್ಧ ಆಘಾತಕಾರಿ ಸೋಲು ಕಂಡಿದ್ದು ಅಷ್ಟೇ ಅಚ್ಚರಿ.
ಇನ್ನು ಇಂಗ್ಲೆಂಡ್ ಮತ್ತು ಶ್ರೀಲಂಕಾ ಇದುವರೆಗೆ ಒಟ್ಟು 78 ಏಕದಿನ ಪಂದ್ಯಗಳನ್ನು ಆಡಿವೆ. ಈ ಅವಧಿಯಲ್ಲಿ ಇಂಗ್ಲೆಂಡ್ 38 ಮತ್ತು ಶ್ರೀಲಂಕಾ 36 ಪಂದ್ಯಗಳನ್ನು ಗೆದ್ದಿವೆ. ಈ ಎರಡು ತಂಡಗಳ ನಡುವಿನ 3 ಪಂದ್ಯಗಳಲ್ಲಿ ಫಲಿತಾಂಶ ಹೊರಬಿದ್ದಿಲ್ಲ. 1 ಪಂದ್ಯ ಮಾತ್ರ ಡ್ರಾದಲ್ಲಿ ಅಂತ್ಯಗೊಂಡಿದೆ.
ಆಡುವ 11ರ ಬಳಗ: ಜೋಶ್ ಬಟ್ಲರ್ ಇಂಗ್ಲೆಂಡ್ ತಂಡದ ನಾಯಕತ್ವ ವಹಿಸಿಕೊಂಡರೆ, ಕುಸಾಲ್ ಮೆಂಡಿಸ್ ಶ್ರೀಲಂಕಾ ತಂಡದ ಮುಂದಾಳತ್ವ ವಹಿಸಿಕೊಂಡಿದ್ದಾರೆ.
ಇಂಗ್ಲೆಂಡ್ (ಪ್ಲೇಯಿಂಗ್ XI): ಜಾನಿ ಬೈರ್‌ಸ್ಟೋವ್, ಡೇವಿಡ್ ಮಲನ್, ಜೋ ರೂಟ್, ಬೆನ್ ಸ್ಟೋಕ್ಸ್, ಜೋಸ್ ಬಟ್ಲರ್(ನಾಯಕ/ವಿಕೆಟ್ ಕೀಪರ್), ಲಿಯಾಮ್ ಲಿವಿಂಗ್‌ಸ್ಟೋನ್, ಮೊಯಿನ್ ಅಲಿ, ಕ್ರಿಸ್ ವೋಕ್ಸ್, ಡೇವಿಡ್ ವಿಲ್ಲಿ, ಆದಿಲ್ ರಶೀದ್, ಮಾರ್ಕ್ ವುಡ್.
ಶ್ರೀಲಂಕಾ (ಪ್ಲೇಯಿಂಗ್ XI): ಪಾತುಮ್ ನಿಸ್ಸಾಂಕ, ಕುಸಾಲ್ ಪೆರೇರಾ, ಕುಸಲ್ ಮೆಂಡಿಸ್ (ನಾಯಕ/ವಿಕೆಟ್ ಕೀಪರ್), ಸದೀರ ಸಮರವಿಕ್ರಮ, ಚರಿತ್ ಅಸಲಂಕಾ, ಧನಂಜಯ ಡಿ ಸಿಲ್ವಾ, ಏಂಜೆಲೊ ಮ್ಯಾಥ್ಯೂಸ್, ಮಹೇಶ್ ತೀಕ್ಷಣ, ಕಸುನ್ ರಜಿತ, ಲಹಿರು ಕುಮಾರ, ದಿಲ್ಶನ್ ಮಧುಶಂಕ.
ಇದನ್ನೂ ಓದಿ: ಕ್ರಿಕೆಟ್ ವಿಶ್ವ ಸಮರದಲ್ಲಿ ಎರಡು ದಶಕಗಳ ಅಪಮಾನ.. ಸಿಂಹಳೀಯರ ವಿರುದ್ಧ ಸೇಡು ತೀರಿಸಿಕೊಳ್ಳಲಿದೆಯಾ ಇಂಗ್ಲೆಂಡ್?