ಬ್ರಿಸ್ಟೋಲ್: ಇಂಗ್ಲೆಂಡ್ ಮತ್ತು ಶ್ರೀಲಂಕಾ ನಡುವಿನ 3ನೇ ಏಕದಿನ ಪಂದ್ಯ ಮಳೆಗೆ ಆಹುತಿಯಾಗಿದ್ದು, ಪ್ರವಾಸಿ ಲಂಕಾ ತಂಡ 3ನೇ ಪಂದ್ಯದಲ್ಲೂ ಹೀನಾಯ ಸೋಲು ಕಾಣುವುದನ್ನು ಮಳೆರಾಯ ತಪ್ಪಿಸಿದ್ದಾನೆ. ಆದರೂ 3-0 ಯಲ್ಲಿ ಟಿ20 ಮತ್ತು 2-0ಯಲ್ಲಿ ಏಕದಿನ ಸರಣಿಯನ್ನು ತಂಡ ಕಳೆದುಕೊಂಡಿದೆ.
ಭಾರತದ ವಿರುದ್ಧ ಟೆಸ್ಟ್, ಟಿ20 ಮತ್ತು ಏಕದಿನ ಸರಣಿ ಸೋಲು ಕಂಡಿದ್ದ ಇಂಗ್ಲೆಂಡ್, ನಂತರ ತವರಿನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ 1-0ಯಲ್ಲಿ ಟೆಸ್ಟ್ ಸರಣಿ ಕಳೆದುಕೊಂಡಿತ್ತು. ಇದೀಗ ಶ್ರೀಲಂಕಾ ವಿರುದ್ಧ ಏಕದಿನ ಸರಣಿ ಮತ್ತು ಟಿ20 ಸರಣಿಯನ್ನು ಗೆದ್ದು ಮತ್ತೆ ಗೆಲುವಿನ ಲಯಕ್ಕೆ ಮರಳಿದೆ.
ಇಂದು 3ನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಶ್ರೀಲಂಕಾ ತಂಡ 41 ಓವರ್ಗಳಲ್ಲಿ ಕೇವಲ 166 ರನ್ಗಳಿಗೆ ಸರ್ವಪತನಗೊಂಡಿತ್ತು. ದಾಸುನ್ ಶನಾಕ ಅಜೇಯ 48 ರನ್ಗಳಿಸಿ ತಂಡದ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಆದರೆ ನಾಯಕ ಕುಸಾಲ್ ಪೆರೆರಾ ಸೇರಿದಂತೆ ಟಾಪ್ ಆರ್ಡರ್ ಬ್ಯಾಟ್ಸ್ಮನ್ಗಳು ಕಳಪೆ ಬ್ಯಾಟಿಂಗ್ ಪ್ರದರ್ಶನ ತೋರಿದರು.
-
Rain has the final say ☔
— ICC (@ICC) July 4, 2021 " class="align-text-top noRightClick twitterSection" data="
The third ODI has been called off and England take the series 2-0.
The sides will share the points from today's game in the ICC Men’s @cricketworldcup Super League standings (powered by @MRFWorldwide).#ENGvSL | https://t.co/Fp9sjHXb0j pic.twitter.com/RlN8ScAvuv
">Rain has the final say ☔
— ICC (@ICC) July 4, 2021
The third ODI has been called off and England take the series 2-0.
The sides will share the points from today's game in the ICC Men’s @cricketworldcup Super League standings (powered by @MRFWorldwide).#ENGvSL | https://t.co/Fp9sjHXb0j pic.twitter.com/RlN8ScAvuvRain has the final say ☔
— ICC (@ICC) July 4, 2021
The third ODI has been called off and England take the series 2-0.
The sides will share the points from today's game in the ICC Men’s @cricketworldcup Super League standings (powered by @MRFWorldwide).#ENGvSL | https://t.co/Fp9sjHXb0j pic.twitter.com/RlN8ScAvuv
ಇಂಗ್ಲೆಂಡ್ ಪರ ಡೇವಿಡ್ ವಿಲ್ಲೆ 36ಕ್ಕೆ 2, ಟಾಮ್ ಕರ್ರನ್ 35ಕ್ಕೆ4, ಕ್ರಿಸ್ ವೋಕ್ಸ್ 28ಕ್ಕೆ 2 ವಿಕೆಟ್ ಪಡೆದರು.
167 ರನ್ಗಳ ಗುರಿ ಪಡೆದಿದ್ದ ಆಂಗ್ಲರಿಗೆ ಮಳೆರಾಯ ಬ್ಯಾಟಿಂಗ್ ಮಾಡುವ ಅವಕಾಶವನ್ನು ನೀಡಲಿಲ್ಲ. ಕೊನೆಗೆ ಮಳೆ ನಿಲ್ಲದ ಕಾರಣ ಪಂದ್ಯವನ್ನು ರದ್ದುಗೊಳಿಸಲಾಯಿತು. 3 ಪಂದ್ಯಗಳ ಸರಣಿಯನ್ನು 2-0ಯಲ್ಲಿ ಇಂಗ್ಲೆಂಡ್ ವಶಪಡಿಸಿಕೊಂಡಿತು. ಡೇವಿಡ್ ವಿಲ್ಲೆ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.
ಇದನ್ನೂ ಓದಿ: ಧವನ್ ನೇತೃತ್ವದ ಭಾರತ ತಂಡವನ್ನು ದ್ವಿತೀಯ ದರ್ಜೆ ಎಂದ ರಣತುಂಗಾಗೆ ಆಕಾಶ್ ಚೋಪ್ರಾ ತಿರುಗೇಟು