ETV Bharat / sports

ಏಕದಿನ ಪಂದ್ಯದಲ್ಲಿ 333ರನ್​ ಗಳಿಸಿದ್ರೂ ಒಂದೇ ಒಂದು ಸಿಕ್ಸರ್​ ಸಿಡಿಸದ ದಕ್ಷಿಣ ಆಫ್ರಿಕಾ! - ಇನ್ನಿಂಗ್ಸ್​​ನಲ್ಲಿ ಒಂದೇ ಒಂದು ಸಿಕ್ಸರ್ ಸಿಡಿಸದ ಆಫ್ರಿಕಾ

ಪ್ರವಾಸಿ ದಕ್ಷಿಣ ಆಫ್ರಿಕಾ ಹಾಗೂ ಆತಿಥೇಯ ಇಂಗ್ಲೆಂಡ್ ಮಧ್ಯೆ ನಡೆದ ಮೊದಲ ಏಕದಿನ ಪಂದ್ಯದಲ್ಲಿ ವಿಶಿಷ್ಟ ದಾಖಲೆ ನಿರ್ಮಾಣಗೊಂಡಿದೆ. ಹರಿಣಗಳ ತಂಡ ಭರ್ಜರಿ ಬ್ಯಾಟಿಂಗ್ ನಡೆಸಿ ಬರೋಬ್ಬರಿ 333ರನ್​​ಗಳಿಕೆ ಮಾಡಿದರೂ ಸಹ ತನ್ನ ಇನ್ನಿಂಗ್ಸ್​​ನಲ್ಲಿ ಒಂದೇ ಒಂದು ಸಿಕ್ಸರ್​ ಸಹ ಸಿಡಿಸಿಲ್ಲ.

England vs South Africa
England vs South Africa
author img

By

Published : Jul 19, 2022, 10:02 PM IST

ಚೆಸ್ಟರ್-ಲೆ-ಸ್ಟ್ರೀಟ್(ಲಂಡನ್​): ಆತಿಥೇಯ ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ಮಧ್ಯೆ ಡರ್ಹಾಮ್​ನ ಚೆಸ್ಟರ್-ಲೆ-ಸ್ಟ್ರೀಟ್ ಮೈದಾನದಲ್ಲಿ ಮೊದಲ ಏಕದಿನ ಪಂದ್ಯ ನಡೆಯುತ್ತಿದೆ. ಈ ಮ್ಯಾಚ್​​ನಲ್ಲಿ ಟಾಸ್​ ಗೆದ್ದ ಹರಿಣಗಳ ಪಡೆ ಬ್ಯಾಟಿಂಗ್​ ಆಯ್ದುಕೊಂಡು ನಿಗದಿತ 50 ಓವರ್​​ಗಳಲ್ಲಿ 5 ವಿಕೆಟ್​​ನಷ್ಟಕ್ಕೆ 333ರನ್​​ಗಳಿಸಿದೆ. ಆದರೆ, ಈ ಪಂದ್ಯದಲ್ಲಿ ವಿಶೇಷವಾದ ದಾಖಲೆವೊಂದು ನಿರ್ಮಾಣಗೊಂಡಿದೆ.

ಇಂಗ್ಲೆಂಡ್​ ವಿರುದ್ಧದ ಏಕದಿನ ಪಂದ್ಯದಲ್ಲಿ ಸ್ಪರ್ಧಾತ್ಮಕ ರನ್​ಗಳಿಕೆ ಮಾಡಿರುವ ದಕ್ಷಿಣ ಆಫ್ರಿಕಾ, ಇನ್ನಿಂಗ್ಸ್​​ನಲ್ಲಿ ಒಂದೇ ಒಂದು ಸಿಕ್ಸರ್ ಸಹ ಸಿಡಿಸಿಲ್ಲ ಎಂಬುದು ಗಮನಾರ್ಹ ಸಂಗತಿ.

England vs South Africa
ಆಕರ್ಷಕ ಶತಕ ಸಿಡಿಸಿ ಮಿಂಚಿದ ಡಸ್ಸೆನ್

ಇಂಗ್ಲೆಂಡ್​ ವಿರುದ್ಧ ನಡೆದ ಪಂದ್ಯದಲ್ಲಿ ಆಫ್ರಿಕಾ ಬ್ಯಾಟರ್​ಗಳು ಅದ್ಭುತ ಪ್ರದರ್ಶನ ನೀಡಿದರು. ಮಲನ್​​ 57ರನ್​​ಗಳಿಕೆ ಮಾಡಿದರೆ, ಡಸ್ಸೆನ್​​ ಭರ್ಜರಿ 133ರನ್​ ಸಿಡಿಸಿದರು. ಇವರಿಗೆ ಸಾಥ್​ ನೀಡಿದ ಮರ್ಕ್ರಾಮ್​ ಕೂಡ ಸ್ಫೋಟಕ 77ರನ್​ಗಳಿಸಿ, ತಂಡದ ಸ್ಕೋರ್​​ 300ರ ಗಡಿ ದಾಟುವಲ್ಲಿ ಯಶಸ್ವಿಯಾದರು.

ಇನ್ನೂ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್​ ಬೀಸಿದ ಮಿಲ್ಲರ್​ 14 ಎಸೆತಗಳಲ್ಲಿ ಅಜೇಯ 24 ರನ್​ಗಳಿಸಿದರು. ಆದರೆ, ಇಂದಿನ ದಕ್ಷಿಣ ಆಫ್ರಿಕಾ ಇನ್ನಿಂಗ್ಸ್​​ನಲ್ಲಿ ಒಂದೇ ಒಂದು ಸಿಕ್ಸರ್​ ಸಿಡಿದಿಲ್ಲ. ಎಲ್ಲ ಬ್ಯಾಟರ್​​ಗಳು ಅದ್ಭುತವಾದ ಪ್ರದರ್ಶನ ನೀಡಿದ್ರೂ ಕೂಡ ಸಿಕ್ಸರ್ ಸಿಡಿಸುವಲ್ಲಿ ಯಶಸ್ವಿಯಾಗಿಲ್ಲ.

ಇದನ್ನೂ ಓದಿರಿ: ವಿದಾಯದ ಪಂದ್ಯಕ್ಕಾಗಿ ಮೈದಾನಕ್ಕಿಳಿದ ಬೆನ್​​ ಸ್ಟೋಕ್ಸ್​​.. ರೋಮಾಂಚಕ ಸ್ವಾಗತ ನೋಡಿ ಭಾವುಕ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.