ETV Bharat / sports

ಗಬ್ಬಾದಲ್ಲಿ ಇಂಗ್ಲೆಂಡ್​ಗೆ ಹಬ್ಬ: ಕಿವೀಸ್​ ವಿರುದ್ಧ 20 ರನ್​ ಗೆಲುವು.. 3 ತಂಡಗಳ ಮಧ್ಯೆ ಸೆಮೀಸ್​​ ಜಿದ್ದಾಜಿದ್ದಿ - ಗಬ್ಬಾದಲ್ಲಿ ಇಂಗ್ಲೆಂಡ್​ಗೆ ಹಬ್ಬ

ವಿಶ್ವಕಪ್​ನ ಎ ಗ್ರೂಪ್​ನಲ್ಲಿ ಸೆಮೀಸ್​ ಜಿದ್ದಾಜಿದ್ದಿ ಜೋರಾಗಿದೆ. ನ್ಯೂಜಿಲ್ಯಾಂಡ್​ ವಿರುದ್ಧ ಇಂಗ್ಲೆಂಡ್ ಇಂದಿನ ಪಂದ್ಯದಲ್ಲಿ​ ಗೆಲುವು ಸಾಧಿಸಿದ್ದು, ಆಸ್ಟ್ರೇಲಿಯಾ ಸೇರಿದಂತೆ ಮೂರೂ ತಂಡಗಳು ತಲಾ 5 ಅಂಕ ಗಳಿಸಿವೆ. ಬಾಕಿ ಇರುವ 1 ಪಂದ್ಯ ತಂಡಗಳ ಸೆಮೀಸ್​ ಹಣೆಬರಹ ಬರೆಯಲಿದೆ.

england-vs-new-zealand-match-report
ಗಬ್ಬಾದಲ್ಲಿ ಇಂಗ್ಲೆಂಡ್​ಗೆ ಹಬ್ಬ
author img

By

Published : Nov 1, 2022, 7:38 PM IST

ಬ್ರಿಸ್ಬೇನ್​(ಆಸ್ಟ್ರೇಲಿಯಾ): ಟಿ 20 ವಿಶ್ವಕಪ್​ನ ಮೊದಲ ಗ್ರೂಪ್​ನಲ್ಲಿ ಸೆಮಿಫೈನಲ್​ ಹಣಾಹಣಿ ಜೋರಾಗಿದೆ. ಆಡಿದ ನಾಲ್ಕು ಪಂದ್ಯದಲ್ಲಿ ಸೋಲಿಲ್ಲದೇ ಮುನ್ನುಗ್ಗುತ್ತಿದ್ದ ನ್ಯೂಜಿಲ್ಯಾಂಡ್​ಗೆ ಇಂಗ್ಲೆಂಡ್​ ಬ್ರೇಕ್​ ಹಾಕಿ ತಡೆದಿದೆ. ಬ್ರಿಸ್ಬೇನ್​ನ ಗಬ್ಬಾ ಮೈದಾನದಲ್ಲಿ ಇಂದು ನಡೆದ ಪಂದ್ಯದಲ್ಲಿ ಕಿವೀಸ್​ ವಿರುದ್ಧ ಇಂಗ್ಲೆಂಡ್​ನ ಜೋಸ್​ ಬಟ್ಲರ್​ ಪಡೆ 20 ರನ್​ಗಳ ಗೆಲುವು ಸಾಧಿಸಿದೆ.

ಮೊದಲು ಬ್ಯಾಟ್​ ಮಾಡಿದ ಇಂಗ್ಲೆಂಡ್​ ನಾಯಕ ಜೋಸ್​ ಬಟ್ಲರ್​ ಮತ್ತು ಅಲೆಕ್ಸ್​ ಹೇಲ್ಸ್​ರ ಅರ್ಧಶತಕದ ಬಲದಿಂದ 6 ವಿಕೆಟ್​ಗೆ 179 ರನ್​ ಗಳಿಸಿತು. ಸವಾಲಿನ ಗುರಿ ಚೇಸ್​ ಮಾಡಿದ ನ್ಯೂಜಿಲ್ಯಾಂಡ್​ ಕಳೆದ ಪಂದ್ಯದ ಶತಕವೀರ ಗ್ಲೆನ್​ ಫಿಲಿಪ್ಸ್​ರ ಅರ್ಧಶತಕ, ನಾಯಕ ಕೇನ್​ ವಿಲಿಯಮ್ಸನ್​ರ ಹೋರಾಟದ ಹೊರತಾಗಿಯೂ 6 ವಿಕೆಟ್​ಗೆ 159 ರನ್​ ಗಳಿಸಿ 20 ರನ್​ಗಳಿಂದ ಸೋಲು ಕಂಡಿತು.

ಇಂಗ್ಲೆಂಡ್​ಗೆ ಅಲೆಕ್ಸ್​ 'ಜೋಶ್​': ಟಾಸ್​​ ಗೆದ್ದು ಮೊದಲು ಬ್ಯಾಟ್​ ಮಾಡಿದ ಇಂಗ್ಲೆಂಡ್​ಗೆ ಆರಂಭಿಕ ಜೋಡಿಯಾ ಅಲೆಕ್ಸ್​ ಹೇಲ್ಸ್​ ಮತ್ತು ಜೋಸ್​ ಬಟ್ಲರ್​ ಅದ್ಭುತ ಇನಿಂಗ್ಸ್​ ಕಟ್ಟಿದರು. ಐಪಿಎಲ್​ನಲ್ಲಿ ಸಿಡಿದಿದ್ದ ಬಟ್ಲರ್​ ಬಳಿಕದ ಪಂದ್ಯಗಳಲ್ಲಿ ಮಂಕಾಗಿದ್ದರು. ಗಬ್ಬಾ ಮೈದಾನದಲ್ಲಿ ಬ್ಯಾಟ್​​ಗೆ ಬುದ್ಧಿ ಹೇಳಿದ ಇಂಗ್ಲೆಂಡ್​ ನಾಯಕ 2 ಸಿಕ್ಸರ್​, 7 ಬೌಂಡರಿ ಸಮೇತ ಭರ್ಜರಿ 73 ರನ್​ ಬಾರಿಸಿದರು. ಇನ್ನೊಂದು ತುದಿಯಲ್ಲಿ ಅಲೆಕ್ಸ್ ಹೇಲ್ಸ್​ ಕೂಡ 7 ಬೌಂಡರಿ, 1 ಸಿಕ್ಸರ್​ನಿಂದ 52 ರನ್​ ಗಳಿಸಿದರು. ಇಬ್ಬರೂ ಮೊದಲ ವಿಕೆಟ್​ಗೆ 81 ರನ್​ ಸೇರಿಸಿದರು.

ಅಲೆಕ್ಸ್​ ಹೇಲ್ಸ್​ ಔಟಾದ ಬಳಿಕ ಲಿಯಾಮ್​ ಲಿವಿಂಗ್​ಸ್ಟೋನ್​ 20 ರನ್​ ಗಳಿಸಿದರು. ಇದಾದ ಬಳಿಕ ಸತತ ವಿಕೆಟ್​ ಕಳೆದುಕೊಂಡು 6 ವಿಕೆಟ್​ಗೆ 179 ರನ್​ಗಳ ಸವಾಲಿನ ಮೊತ್ತ ಪೇರಿಸಿತು. ಕಿವೀಸ್​ ಪರವಾಗಿ ಲೂಕಿ ಫರ್ಗ್ಯುಸನ್​ 2 ವಿಕೆಟ್​ ಕಿತ್ತರು.

ಮತ್ತೆ ಸಿಡಿದ ಫಿಲಿಪ್ಸ್​ಗೆ ಸಿಗದ ಜಯ: ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಸೊಗಸಾದ ಶತಕ ಸಿಡಿಸಿದ್ದ ಗ್ಲೆನ್​ ಫಿಲಿಪ್ಸ್​ ಈ ಪಂದ್ಯದಲ್ಲೂ ಸಿಡಿದು ಅರ್ಧಶತಕ ಬಾರಿಸಿದರು. 36 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್​ಗಳಿಂದ 62 ರನ್​ ಗಳಿಸಿದರು. ಫಿಲಿಪ್ಸ್​ಗೆ ಉತ್ತಮ ಸಾಥ್​ ನೀಡಿದ ನಾಯಕ ಕೇನ್​ ವಿಲಿಯಮ್ಸನ್​ 40 ರನ್ ಬಾರಿಸಿದರು. ಉಳಿದ ಆಟಗಾರರು ಇಂಗ್ಲೆಂಡ್​ ಬೌಲಿಂಗ್ ದಾಳಿಗೆ ನಲುಗಿ ರನ್​ ಗಳಿಸುವಲ್ಲಿ ಪರದಾಡಿದರು. ಕೊನೆಗೆ 159 ರನ್​ ಗಳಿಸಲು ಮಾತ್ರ ಶಕ್ತವಾಗಿ 20 ರನ್​ಗಳಿಂದ ಸೋಲು ಕಂಡರು. 3 ಪಂದ್ಯಗಳಲ್ಲಿ 2 ಗೆದ್ದು (1 ಫಲಿತಾಂಶ ಬಂದಿಲ್ಲ) ಸೋಲಿಲ್ಲದೇ ಮುನ್ನುಗ್ಗುತ್ತಿದ್ದ ತಂಡ ಗೆಲುವಿನ ಹಳಿಯಿಂದ ಜಾರಿತು.

ಸೆಮೀಸ್​ಗೆ ಬಿಗ್​ ಫೈಟ್​: ಇನ್ನು, ಗ್ರೂಪ್​ ಎ ನಲ್ಲಿ ಸೆಮೀಸ್​ಗೆ ಸೇರಲು ಭಾರಿ ಜಿದ್ದಾಜಿದ್ದಿಯೇ ನಡೆಯುತ್ತಿದೆ. ತಲಾ 4 ಪಂದ್ಯಗಳಾಡಿರುವ ನ್ಯೂಜಿಲ್ಯಾಂಡ್​, ಇಂಗ್ಲೆಂಡ್​, ಹಾಲಿ ಚಾಂಪಿಯನ್​ ಆಸ್ಟ್ರೇಲಿಯಾ 5 ಪಾಯಿಂಟ್​ ಗಳಿಸಿವೆ. ಕೊನೆಯ ಪಂದ್ಯದಲ್ಲಿ ಸೋಲುವ ತಂಡ ಸೆಮೀಸ್​ ರೇಸ್​ನಿಂದ ಹೊರಬಿದ್ದರೆ, ಗೆಲ್ಲುವ ತಂಡ ಬಡ್ತಿ ಪಡೆಯಲಿದೆ.

ಓದಿ: ಟಿ20 ವಿಶ್ವಕಪ್: ಗೆದ್ದು ಬೀಗಿದ ಲಂಕಾ, ಸೆಮಿಫೈನಲ್ ರೇಸ್‌ನಿಂದ ಅಫ್ಘಾನಿಸ್ತಾನ ಔಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.