ಪುಣೆ (ಮಹಾರಾಷ್ಟ್ರ): ಬೆನ್ ಸ್ಟೋಕ್ಸ್ ಶತಕ, ಡೇವಿಡ್ ಮಲನ್, ಕ್ರಿಸ್ ವೋಕ್ಸ್ ಅರ್ಧಶತಕದ ಬ್ಯಾಟಿಂಗ್ ನೆರವಿನಿಂದ ಇಂಗ್ಲೆಂಡ್ ತಂಡ ನೆದರ್ಲ್ಯಾಂಡ್ಸ್ ವಿರುದ್ಧ ನಿಗದಿ ಓವರ್ ಅಂತ್ಯಕ್ಕೆ 9 ವಿಕೆಟ್ ಗಳನ್ನು ಕಳೆದುಕೊಂಡು 339 ರನ್ ಕಲೆಹಾಕಿದೆ. ವಿಶ್ವಕಪ್ನಲ್ಲಿ ತನ್ನ ಎರಡನೇ ಗೆಲುವನ್ನು ದಾಖಲಿಸಲು ಇಂಗ್ಲೆಂಡ್ 340 ರನ್ಗಳ ಗುರಿಯನ್ನು ರಕ್ಷಿಸಿಕೊಳ್ಳಬೇಕಿದೆ. ಕ್ರಿಕೆಟ್ ಶಿಶುಗಳ ವಿರುದ್ಧ ಕ್ರಿಕೆಟ್ ಜನಕರ ನಾಡಿನ ತಂಡ ಗೆದ್ದಲ್ಲಿ ಅಂಕಪಟ್ಟಿಯಲ್ಲಿ 10 ರಿಂದ 9ಕ್ಕೆ ಏರಿಕೆ ಕಾರಣಲಿದೆ.
ವಿಶ್ವಕಪ್ನಲ್ಲಿ ಬಾಂಗ್ಲಾದೇಶದ ವಿರುದ್ಧ ಮಾತ್ರ ಗೆದ್ದು 6 ಪಂದ್ಯಗಳನ್ನು ಕಳೆದುಕೊಂಡಿದೆ. ಬಲಿಷ್ಠ ತಂಡಗಳ ಮುಂದೆ ಮಂಡಿಯೂರಿರುವ ಆಂಗ್ಲರಿಗೆ ಕ್ರಿಕೆಟ್ ಶಿಶುಗಳಾದ ತಮ್ಮ ಪ್ರಾಬಲ್ಯವನ್ನು ಪ್ರದರ್ಶಿಸಿದ್ದಾರೆ. ಸತತ ಸೋಲು ಕಂಡಿರುವ ಇಂಗ್ಲೆಂಡ್ ತಂಡ ಇಂದು ಪುಣೆ ಮೈದಾನದಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ ಆಡುತ್ತಿದೆ. ನವೆಂಬರ್ 11 ರಂದು ಪಾಕಿಸ್ತಾನದ ವಿರುದ್ಧ ಕೋಲ್ಕತ್ತಾದಲ್ಲಿ ಆಡಲಿದೆ. ಈ ಎರಡೂ ಪಂದ್ಯಗಳಲ್ಲಿ ಬಟ್ಲರ್ ಪಡೆ ಗೆದ್ದಲ್ಲಿ 2025ರ ಚಾಂಪಿಯನ್ಸ್ ಟ್ರೋಫಿಗೆ ಪ್ರವೇಶ ಪಡೆಯುವ ಅವಕಾಶ ಸಿಕ್ಕರೂ ಸಿಗಬಹುದು.
-
We finish our overs in Pune on 3️⃣3️⃣9️⃣
— England Cricket (@englandcricket) November 8, 2023 " class="align-text-top noRightClick twitterSection" data="
Chris Woakes 51 (45)
Dawid Malan 87 (74)
Ben Stokes 108 (84)
Well batted, lads 💪#EnglandCricket | #CWC23 pic.twitter.com/OAUBYQTemp
">We finish our overs in Pune on 3️⃣3️⃣9️⃣
— England Cricket (@englandcricket) November 8, 2023
Chris Woakes 51 (45)
Dawid Malan 87 (74)
Ben Stokes 108 (84)
Well batted, lads 💪#EnglandCricket | #CWC23 pic.twitter.com/OAUBYQTempWe finish our overs in Pune on 3️⃣3️⃣9️⃣
— England Cricket (@englandcricket) November 8, 2023
Chris Woakes 51 (45)
Dawid Malan 87 (74)
Ben Stokes 108 (84)
Well batted, lads 💪#EnglandCricket | #CWC23 pic.twitter.com/OAUBYQTemp
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ಗೆ ಇಳಿದ ಇಂಗ್ಲೆಂಡ್ಗೆ ಡಚ್ ಬೌಲಿಂಗ್ ವಿಭಾಗ ಕಾಡದೇ ಬಿಡಲಿಲ್ಲ. ಬಿರುಸಿನ ಆರಂಭ ಪಡೆದ ಆಂಗ್ಲರಿಗೆ ಆರ್ಯನ್ ದತ್ತ್ ಮೊದಲ ಶಾಕ್ ನೀಡಿದರು. 15 ರನ್ ಗಳಿಸಿ ಆಡುತ್ತಿದ್ದ ಜಾನಿ ಬೈರ್‌ಸ್ಟೋವ್ ಮತ್ತೆ ಮುಗ್ಗರಿಸಿದರು. ಎರಡನೇ ವಿಕೆಟ್ಗೆ ಡೇವಿಡ್ ಮಲನ್ ಮತ್ತು ಜೋ ರೂಟ್ 85 ರನ್ಗಳ ಪಾಲುದಾರಿಕೆ ಮಾಡಿದರು. ಬೇಸ್ ಬಾಲ್ ನೀತಿಯನ್ನು ಬಿಟ್ಟು, ಸಾಮಾನ್ಯ ಪಂದ್ಯವನ್ನು ಆಡಿದ ಫಲವಾಗಿ ಜೊತೆಯಾಟ ಬಂತು. 7ನೇ ಓವರ್ಗೆ 48 ರನ್ ಗಳಿಸಿದ್ದ ತಂಡ 21ನೇ ಓವರ್ಗೆ ಕೇವಲ 133 ರನ್ ಕಲೆಹಾಕಿತ್ತು. ಅಷ್ಟರ ಮಟ್ಟಿಗೆ ತಾಳ್ಮೆಯಿಂದ ಮಲನ್ ಮತ್ತು ರೂಟ್ ಬ್ಯಾಟ್ ಮಾಡಿದ್ದರು. ಜೋ ರೂಟ್ (28) ವಿಕೆಟ್ ಬೆನ್ನಲ್ಲೇ, ಅರ್ಧಶತಕ ಮಾಡಿದ್ದ ಡೇವಿಡ್ ಮಲನ್ ರನ್ಔಟ್ಗೆ ಬಲಿಯಾದರು. ಇನ್ನಿಂಗ್ಸ್ನಲ್ಲಿ 74 ಬಾಲ್ ಆಡಿದ ಮಲನ್ 10 ಬೌಂಡರಿ ಮತ್ತು 2 ಸಿಕ್ಸ್ನ ಸಹಾಯದಿಂದ 87 ರನ್ ಕಲೆಹಾಕಿದರು.
- " class="align-text-top noRightClick twitterSection" data="">
ಸ್ಟೋಕ್ಸ್ ಏಕಾಂಗಿ ಆಟ: ಬಟ್ಲರ್ ಸ್ಟೋಕ್ಸ್ ಅವರನ್ನು ನಿವೃತ್ತಿಯನ್ನು ಹಿಂಪಡೆಯುವಂತೆ ಮಾಡಿ ತಂಡಕ್ಕೆ ಏಕೆ ಸೇರಿಸಿಕೊಂಡರು ಎಂಬ ಪ್ರಶ್ನೆಗೆ ಇಂದು ಉತ್ತರ ಸಿಕ್ಕಿರಬಹುದು. ನಾಲ್ಕನೇ ಆಟಗಾರನಾಗಿ ಮೈದಾನಕ್ಕಿಳಿದ ಬೆನ್ ಸ್ಟೋಕ್ಸ್ಗೆ ಯಾವುದೇ ಆಟಗಾರ ಜೊತೆಯಾಟ ನೀಡದಿದ್ದರೂ ಏಕಾಂಗಿಯಾಗಿ ಇನ್ನಿಂಗ್ಸ್ ಕಟ್ಟಿ ಶತಕ ದಾಖಲಿಸಿಕೊಂಡರು. ಹ್ಯಾರಿ ಬ್ರೂಕ್ (11), ಜೋಸ್ ಬಟ್ಲರ್ (5) ಮತ್ತು ಮೊಯಿನ್ ಅಲಿ (4) ವಿಕೆಟ್ ಕಾಯ್ದುಕೊಳ್ಳುವಲ್ಲಿ ವಿಫಲರಾದರು. ಆದರೆ ಆಲ್ರೌಂಡರ್ ಕ್ರಿಸ್ ವೋಕ್ಸ್ 7ನೇ ವಿಕೆಟ್ಗೆ ಸ್ಟೋಕ್ಸ್ ಜೊತೆಗೆ 129 ರನ್ಗಳ ಪಾಲುದಾರಿಕೆ ಹಂಚಿಕೊಂಡರು. ಈ ಜೊತೆಯಾಟದಿಂದ ಇಂಗ್ಲೆಂಡ್ 300ರ ಗಡಿದಾಟಿತು.
-
🚨 1️⃣0️⃣0️⃣
— England Cricket (@englandcricket) November 8, 2023 " class="align-text-top noRightClick twitterSection" data="
A fifth ODI century for Ben Stokes! ✅ #EnglandCricket | #CWC23 pic.twitter.com/9JpWiP3tW1
">🚨 1️⃣0️⃣0️⃣
— England Cricket (@englandcricket) November 8, 2023
A fifth ODI century for Ben Stokes! ✅ #EnglandCricket | #CWC23 pic.twitter.com/9JpWiP3tW1🚨 1️⃣0️⃣0️⃣
— England Cricket (@englandcricket) November 8, 2023
A fifth ODI century for Ben Stokes! ✅ #EnglandCricket | #CWC23 pic.twitter.com/9JpWiP3tW1
ಏಕಾಂಗಿ ಆಗಿ ಆಡಿದ ಸ್ಟೋಕ್ಸ್ 84 ಬಾಲ್ ಎದುರಿಸಿ 6 ಬೌಂಡರಿ ಮತ್ತು 6 ಸಿಕ್ಸ್ನ ಸಹಾಯದಿಂದ 108 ರನ್ ಕಲೆಹಾಕಿದರು. ಇವರ ಜೊತೆಗೆ ಆಡಿದ ಕ್ರಿಸ್ ವೋಕ್ಸ್ (51) ತಮ್ಮ ಅರ್ಧಶತಕವನ್ನು ಪೂರೈಸಿಕೊಂಡರು. ನಂತರ ಕೊನೆಯ ಓವರ್ಗಳಲ್ಲಿ ವೇಗವಾಗಿ ರನ್ ಕದಿಯುವ ಬರದಲ್ಲಿ ತಂಡ ವಿಕೆಟ್ ಕಳೆದುಕೊಂಡಿತು. 50 ಓವರ್ಗೆ ಇಂಗ್ಲೆಂಡ್ 9 ವಿಕೆಟ್ಗಳನ್ನು ಕಳೆದುಕೊಂಡು 339 ರನ್ ಕಲೆಹಾಕಿತು.
ಇದನ್ನೂ ಓದಿ: ಬಿದ್ದೆದ್ದು ಗೆದ್ದು ಬೀಗಿದ ಆಸ್ಟ್ರೇಲಿಯಾ ಸೆಮಿ ಫೈನಲ್‌ಗೆ; ಕೊನೆಯ ಸ್ಥಾನಕ್ಕೆ 3 ತಂಡಗಳ ಪೈಪೋಟಿ