ETV Bharat / sports

ತೀವ್ರ ಕುತೂಹಲ ಮೂಡಿಸಿದ ಲಾರ್ಡ್ಸ್​ ಟೆಸ್ಟ್: ಸಂಕಷ್ಟದಲ್ಲಿರುವ ಭಾರತಕ್ಕೆ ರಿಷಭ್ ಆಕ್ಸಿಜನ್? - ಭಾರತ-ಇಂಗ್ಲೆಂಡ್ ಟೆಸ್ಟ್​

ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್​ ಪಂದ್ಯದಲ್ಲಿ ಟೀಂ ಇಂಡಿಯಾ ಸಂಕಷ್ಟಕ್ಕೊಳಗಾಗಿದ್ದು, ಎರಡನೇ ಇನ್ನಿಂಗ್ಸ್​ನಲ್ಲಿ 6 ವಿಕೆಟ್ ​​ನಷ್ಟಕ್ಕೆ 181ರನ್​ಗಳಿಸಿದೆ.

Rishabh Pant
Rishabh Pant
author img

By

Published : Aug 16, 2021, 8:07 AM IST

ಲಾರ್ಡ್ಸ್​(ಲಂಡನ್​): ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದಲ್ಲಿ ಆತಿಥೇಯ ಇಂಗ್ಲೆಂಡ್​ ಹಾಗೂ ಪ್ರವಾಸಿ ಭಾರತದ ನಡುವೆ ಎರಡನೇ ಟೆಸ್ಟ್​ ಪಂದ್ಯ ನಡೆಯುತ್ತಿದ್ದು, ಎರಡನೇ ಇನ್ನಿಂಗ್ಸ್​ನಲ್ಲಿ ದಿಢೀರ್ ಬ್ಯಾಟಿಂಗ್​ ವೈಫಲ್ಯಕ್ಕೊಳಗಾಗಿರುವ ಟೀಂ ಇಂಡಿಯಾ ಪಂದ್ಯ ಉಳಿಸಿಕೊಳ್ಳಲು ಹೋರಾಟ ನಡೆಸುತ್ತಿದೆ.

England vs India
ಭಾರತಕ್ಕೆ ಪುಜಾರಾ-ರಹಾನೆ ಆಸರೆ

ನಾಲ್ಕನೇ ದಿನವಾದ ನಿನ್ನೆ ಟೀಂ ಇಂಡಿಯಾ ಎರಡನೇ ಇನ್ನಿಂಗ್ಸ್​​ನಲ್ಲಿ 6 ವಿಕೆಟ್ ಕಳೆದುಕೊಂಡು 181 ರನ್​ಗಳಿಕೆ ಮಾಡಿದೆ. ಈ ಮೂಲಕ 154 ರನ್​ಗಳ ಮುನ್ನಡೆ ಪಡೆದುಕೊಂಡಿತು. ಸದ್ಯ ಮೈದಾನದಲ್ಲಿ ವಿಕೆಟ್​ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ (14) ಹಾಗೂ ಇಶಾಂತ್​ ಶರ್ಮಾ (4) ಇದ್ದಾರೆ.

ಇಂದು ಕೊನೆಯ (ಐದನೇ) ದಿನವಾಗಿರುವ ಕಾರಣ ಭಾರತಕ್ಕೆ ಕನಿಷ್ಠ ಎರಡು ಸೆಷನ್​​ ಬ್ಯಾಟಿಂಗ್ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಒಂದು ವೇಳೆ ಟೀಂ ಇಂಡಿಯಾ 250 ರನ್​ಗಳ ಗುರಿ ಮುಟ್ಟಿದ್ರೆ, ಎದುರಾಳಿಯನ್ನು ಕಟ್ಟಿಹಾಕುವ ಯೋಜನೆ ರೂಪಿಸಿಕೊಳ್ಳಬಹುದು.

ನಾಲ್ಕನೇ ದಿನ 27 ರನ್​ಗಳ ಹಿನ್ನಡೆಯೊಂದಿಗೆ ಬ್ಯಾಟಿಂಗ್ ಆರಂಭಿಸಿದ ಭಾರತ ತಂಡ 55 ರನ್​ಗಳಾಗುವಷ್ಟರಲ್ಲಿ ರೋಹಿತ್ (21), ಕೆ.ಎಲ್ ರಾಹುಲ್ ​(5) ಮತ್ತು ನಾಯಕ ವಿರಾಟ್​ ಕೊಹ್ಲಿ (20) ವಿಕೆಟ್ ಕಳೆದುಕೊಂಡು ಆಘಾತಕ್ಕೆ ಒಳಗಾಗಿತ್ತು. ಈ ವೇಳೆ 58 ಓವರ್​ಗಳ ಬ್ಯಾಟಿಂಗ್ ಮಾಡಿದ್ದ ಚೇತೇಶ್ವರ ಪೂಜಾರಾ (45) ಹಾಗೂ ಉಪನಾಯಕ ರಹಾನೆ (61) ರನ್​ಗಳ ಜವಾಬ್ದಾರಿಯುತ ಆಟವಾಡಿ ತಂಡಕ್ಕೆ ಸ್ವಲ್ಪ ಮಟ್ಟದಲ್ಲಿ ನೆರವಾದರು. ಆದರೆ ಇವರ ವಿಕೆಟ್​ ಬಿದ್ದ ಬಳಿಕ ಜಡೇಜಾ (3 ರನ್​) ಕೂಡ ನಿರಾಸೆ ಮೂಡಿಸಿದರು.

England vs India
ವಿಕೆಟ್ ಪಡೆದ ಸಂಭ್ರಮದಲ್ಲಿ ಮಾರ್ಕ್​ ವುಡ್​

ಇಂಗ್ಲೆಂಡ್​ ತಂಡದ ಪರ ಮಾರ್ಕ್​ ವುಡ್​ 3 ವಿಕೆಟ್​, ಮೊಯಿನ್ ಅಲಿ 2 ಹಾಗೂ ಸ್ಯಾಮ್​ ಕರ್ರನ್ 1 ವಿಕೆಟ್ ಪಡೆದುಕೊಂಡು ಮಿಂಚಿದ್ದಾರೆ.

ಸಂಕ್ಷಿಪ್ತ ಸ್ಕೋರ್ ಇಂತಿದೆ:

ಭಾರತ ಮೊದಲ ಇನ್ನಿಂಗ್ಸ್ 126.1 ಓವರ್ 364/10

ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ 128 ಓವರ್ 391/10

ಭಾರತ ಎರಡನೇ ಇನ್ನಿಂಗ್ಸ್ 82 ಓವರ್ 181/6

(ಅಜಿಂಕ್ಯ ರಹಾನೆ 61, ಚೇತೇಶ್ವರ್ ಪೂಜಾರ 45)

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.