ETV Bharat / sports

2ನೇ ಇನ್ನಿಂಗ್ಸ್​​ನಲ್ಲಿ ವಿಕೆಟ್​ನಷ್ಟವಿಲ್ಲದೇ 43ರನ್​ಗಳಿಸಿದ ಭಾರತ, 56ರನ್​ಗಳ ಹಿನ್ನಡೆ! - ಟೀಂ ಇಂಡಿಯಾ

4ನೇ ಟೆಸ್ಟ್​ ಪಂದ್ಯದ ಎರಡನೇ ದಿನದಾಟದ ಅಂತ್ಯಕ್ಕೆ ಟೀಂ ಇಂಡಿಯಾ ಎರಡನೇ ಇನ್ನಿಂಗ್ಸ್​​ನಲ್ಲಿ ಯಾವುದೇ ವಿಕೆಟ್​ನಷ್ಟವಿಲ್ಲದೇ 43ರನ್​ಗಳಿಕೆ ಮಾಡಿದೆ.

England vs India
England vs India
author img

By

Published : Sep 3, 2021, 11:54 PM IST

ಓವರ್​​(ಇಂಗ್ಲೆಂಡ್​): ಆತಿಥೇಯ ಇಂಗ್ಲೆಂಡ್​ ವಿರುದ್ಧದ ನಾಲ್ಕನೇ ಟೆಸ್ಟ್​​ ಪಂದ್ಯದ ಎರಡನೇ ದಿನದ ಅಂತ್ಯಕ್ಕೆ ಟೀಂ ಇಂಡಿಯಾ ಯಾವುದೇ ವಿಕೆಟ್​ನಷ್ಟವಿಲ್ಲದೇ 43ರನ್​ಗಳಿಕೆ ಮಾಡಿದ್ದು, ನಾಳೆಗೆ ಬ್ಯಾಟಿಂಗ್​ ಕಾಯ್ದಿರಿಸಿಕೊಂಡಿದೆ. ಈ ಪಂದ್ಯದಲ್ಲಿ ಗೆಲುವು ಸಾಧಿಸಬೇಕಾದರೆ ಬ್ಯಾಟಿಂಗ್​ನಲ್ಲಿ ಕಮ್​ಬ್ಯಾಕ್​ ಮಾಡಬೇಕಾಗಿದೆ.

ಮೊದಲ ಇನ್ನಿಂಗ್ಸ್​​​ನಲ್ಲಿ ಇಂಗ್ಲೆಂಡ್​ ತಂಡ 290ರನ್​ ಗಳಿಕೆ ಮಾಡುವ ಮೂಲಕ 99ರನ್​ಗಳ ಮಹತ್ವದ ಮುನ್ನಡೆ ಸಾಧಿಸಿದ್ದು, ಸದ್ಯ ಭಾರತ 56ರನ್​ಗಳ ಹಿನ್ನಡೆಯಲ್ಲಿದೆ. ಇಂಗ್ಲೆಂಡ್ ಪರ ಮೊದಲ ಇನ್ನಿಂಗ್ಸ್​​ನಲ್ಲಿ ಓಲಿ ಪೊಪ್​​(81), ಕ್ರಿಸ್​ ವೋಕ್ಸ್​​ (50)ರನ್​ಗಳಿಕೆ ಮಾಡಿ ತಂಡ ಮುನ್ನಡೆ ಪಡೆದುಕೊಳ್ಳಲು ಸಹಕಾರಿಯಾದರು.

2ನೇ ದಿನದಾಟದ ಅಂತ್ಯದಲ್ಲಿ ರೋಹಿತ್​ ಶರ್ಮಾ ಅಜೇಯ 20ರನ್​ ಹಾಗೂ ಕೆ.ಎಲ್​ ರಾಹುಲ್​ ಅಜೇಯ 22ರನ್​​ಗಳಿಕೆ ಮಾಡಿದ್ದಾರೆ. ಇನ್ನು ಮೂರು ದಿನಗಳ ಆಟ ಬಾಕಿ ಇರುವ ಕಾರಣ ಟೀಂ ಇಂಡಿಯಾ ನಾಳೆ ಹಾಗೂ ನಾಡಿದ್ದು ಉತ್ತಮ ಬ್ಯಾಟಿಂಗ್​ ಪ್ರದರ್ಶನ ನೀಡುವ ಅವಶ್ಯಕತೆ ಇದೆ.

ಈಗಾಗಲೇ ಐದು ಪಂದ್ಯಗಳ ಟೆಸ್ಟ್​​ ಸರಣಿಯಲ್ಲಿ ಉಭಯ ತಂಡಗಳು ತಲಾ 1-1 ಅಂತರದಲ್ಲಿ ಸರಣಿ ಸಮಬಲ ಮಾಡಿಕೊಂಡಿದ್ದು, ಮುನ್ನಡೆ ಪಡೆದುಕೊಳ್ಳಬೇಕಾದರೆ ಈ ಟೆಸ್ಟ್​ನಲ್ಲಿ ಗೆಲ್ಲಬೇಕಾದ ಅನಿವಾರ್ಯತೆ ನಿರ್ಮಾಣಗೊಂಡಿದೆ. ಹೀಗಾಗಿ ಕೊಹ್ಲಿ ಹಾಗೂ ರೂಟ್ಸ್​ ಪಡೆ ಗೆಲುವಿನ ತಂತ್ರ ರೂಪಿಸಿಕೊಂಡಿವೆ.

ಹಿಟ್​ಮ್ಯಾನ್​ ಮಹತ್ವದ ಮೈಲಿಗಲ್ಲು

ಟೀಂ ಇಂಡಿಯಾ ಆರಂಭಿಕ ಆಟಗಾರ ರೋಹಿತ್​​​ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಮಹತ್ವದ ಮೈಲಿಗಲ್ಲು ಸಾಧಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 15,000 ರನ್​​ ಪೂರ್ಣ ಮಾಡಿದ್ದಾರೆ. ಈ ಸಾಧನೆ ಮಾಡಿರುವ 8ನೇ ಭಾರತೀಯ ಬ್ಯಾಟ್ಸ್‌ಮನ್​ ಆಗಿದ್ದಾರೆ. 396 ಇನ್ನಿಂಗ್ಸ್​​ಗಳಲ್ಲಿ ಇಷ್ಟೊಂದು ರನ್​​ಗಳಿಕೆ ಮಾಡಿರುವ ರೋಹಿತ್​ ಶರ್ಮಾ, ಅತಿವೇಗವಾಗಿ ರನ್​ಗಳಿಕೆ ಮಾಡಿರುವ 5ನೇ ಬ್ಯಾಟ್ಸ್​ಮನ್​ ಕೂಡ ಆಗಿದ್ದಾರೆ. ಟೀಂ ಇಂಡಿಯಾ ಕ್ಯಾಪ್ಟನ್​ ವಿರಾಟ್​ ಕೊಹ್ಲಿ 333 ಇನ್ನಿಂಗ್ಸ್​​ಗಳಲ್ಲಿ 15,000 ರನ್​ ಪೂರೈಕೆ ಮಾಡಿರುವ ದಾಖಲೆ ಹೊಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.