ಬರ್ಮಿಂಗ್ಹ್ಯಾಮ್(ಇಂಗ್ಲೆಂಡ್): ಪ್ರವಾಸಿ ಟೀಂ ಇಂಡಿಯಾ ವಿರುದ್ಧದ ಎರಡನೇ ಟಿ-20 ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡ ಬೌಲಿಂಗ್ ಆಯ್ದುಕೊಂಡಿದೆ. ಸರಣಿಯಲ್ಲಿ ಜೀವಂತವಾಗಿರಲು ಬಟ್ಲರ್ ಪಡೆಗೆ ಈ ಪಂದ್ಯ ಮಾಡು ಇಲ್ಲವೇ ಮಡಿಯಾಗಿದೆ. ಇನ್ನೂ ಈ ಪಂದ್ಯದಲ್ಲಿ ಗೆಲುವು ಸಾಧಿಸಿ, ಸರಣಿ ಗೆಲ್ಲುವ ತವಕದಲ್ಲಿ ರೋಹಿತ್ ಬಳಗ ಇದೆ.
ಟೀಂ ಇಂಡಿಯಾ ಆಡುವ 11ರ ಬಳಗ: ರೋಹಿತ್ ಶರ್ಮಾ(ಕ್ಯಾಪ್ಟನ್), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್(ವಿ.ಕೀ), ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ರವೀಂದ್ರ ಜಡೇಜಾ, ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬುಮ್ರಾ, ಯಜುವೇಂದ್ರ ಚಹಲ್
ಇಂಗ್ಲೆಂಡ್ ಆಡುವ 11ರ ಬಳಗ: ಜಾಸನ್ ರಾಯ್, ಜೋಶ್ ಬಟ್ಲರ್(ಕ್ಯಾಪ್ಟನ್, ವಿ,ಕೀ), ಡೇವಿಡ್ ಮಲನ್, ಲಿವಿಗ್ಸ್ಟೋನ್,ಹ್ಯಾರಿ ಬ್ರಾಕ್,ಮೊಯಿನ್ ಅಲಿ, ಸ್ಯಾಮ್ ಕರ್ರನ್, ಡೇವಿಡ್ ವಿಲ್ಲೆ, ಕ್ರಿಸ್ ಜೋರ್ಡನ್, ರಿಚರ್ಡ್ ಗ್ಲೆಸನ್, ಮ್ಯಾಥ್ಯೂ ಪ್ರಾಕ್ಸನ್
-
England have won the toss and elect to bowl first in the 2nd T20I
— BCCI (@BCCI) July 9, 2022 " class="align-text-top noRightClick twitterSection" data="
A look at our Playing XI for the game 👇👇
Live - https://t.co/o5RnRVGuWv #ENGvIND pic.twitter.com/SkEUSwtzVW
">England have won the toss and elect to bowl first in the 2nd T20I
— BCCI (@BCCI) July 9, 2022
A look at our Playing XI for the game 👇👇
Live - https://t.co/o5RnRVGuWv #ENGvIND pic.twitter.com/SkEUSwtzVWEngland have won the toss and elect to bowl first in the 2nd T20I
— BCCI (@BCCI) July 9, 2022
A look at our Playing XI for the game 👇👇
Live - https://t.co/o5RnRVGuWv #ENGvIND pic.twitter.com/SkEUSwtzVW
ಮೊದಲ ಟಿ-20 ಪಂದ್ಯದಿಂದ ವಿಶ್ರಾಂತಿ ಪಡೆದುಕೊಂಡಿದ್ದ ವಿರಾಟ್ ಕೊಹ್ಲಿ, ಜಡೇಜಾ, ಬುಮ್ರಾ ಹಾಗೂ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ತಂಡಕ್ಕೆ ಕಮ್ ಬ್ಯಾಕ್ ಮಾಡಿದ್ದಾರೆ. ಹೀಗಾಗಿ, ಮೊದಲ ತಂಡದಲ್ಲಿ ಮಿಂಚಿದ್ದ ದೀಪಕ್ ಹೂಡಾ ಆಡುವ 11ರ ಬಳಗದಲ್ಲಿ ಚಾನ್ಸ್ ನೀಡಿಲ್ಲ. ಇನ್ನೂ ಇಶಾನ್ ಕಿಶನ್ ಸ್ಥಾನಕ್ಕೆ ವಿರಾಟ್ ಆಯ್ಕೆಯಾಗಿದ್ದಾರೆ.
ಇಂಗ್ಲೆಂಡ್ ತಂಡದಲ್ಲೂ ಎರಡು ಬದಲಾವಣೆ ಮಾಡಲಾಗಿದ್ದು, ಟೊಪ್ಲೆ ಹಾಗೂ ಮಿಲ್ಸೆ ಸ್ಥಾನಕ್ಕೆ ವಿಲ್ಸೆ ಹಾಗೂ ಗ್ಲೆಸನ್ ಅವಕಾಶ ಪಡೆದುಕೊಂಡಿದ್ದಾರೆ. ಇಂದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಜೊತೆಗೆ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಆರಂಭಿಕರಾಗಿ ಕಣಕ್ಕಿಳಿದಿದ್ದಾರೆ.
ಮೊದಲ ಟಿ-20 ಪಂದ್ಯದಲ್ಲಿ ಹಿರಿಯ ಪ್ಲೇಯರ್ಸ್ ಅನುಪಸ್ಥಿತಿಯಲ್ಲಿ ಕಣಕ್ಕಿಳಿದಿದ್ದ ರೋಹಿತ್ ಬಳಗ ಅದ್ಭುತ ಪ್ರದರ್ಶನ ನೀಡಿತ್ತು. ಹೀಗಾಗಿ, 50 ರನ್ಗಳ ಗೆಲುವು ದಾಖಲು ಮಾಡಿ ಸರಣಿಯಲ್ಲಿ 1-0 ಅಂತರದ ಮುನ್ನಡೆ ಪಡೆದುಕೊಂಡಿದೆ.