ಲಾರ್ಡ್ಸ್(ಇಂಗ್ಲೆಂಡ್): ಕ್ರಿಕೆಟ್ ಕಾಶಿ ಲಾರ್ಡ್ಸ್ನಲ್ಲಿ ಭಾರತ - ಇಂಗ್ಲೆಂಡ್ ನಡುವೆ ಎರಡನೇ ಏಕದಿನ ಪಂದ್ಯ ನಡೆಯುತ್ತಿದ್ದು, ಟಾಸ್ ಗೆದ್ದ ಟೀಂ ಇಂಡಿಯಾ ಬೌಲಿಂಗ್ ಆಯ್ದುಕೊಂಡಿದೆ. ಈಗಾಗಲೇ ಟಿ20 ಸರಣಿ ಕೈವಶ ಮಾಡಿಕೊಂಡು ಮೊದಲ ಏಕದಿನ ಪಂದ್ಯದಲ್ಲಿ 10 ವಿಕೆಟ್ಗಳ ಗೆಲುವು ದಾಖಲು ಮಾಡಿರುವ ರೋಹಿತ್ ಬಳಗ, ಇಂದಿನ ಪಂದ್ಯದಲ್ಲಿ ಗೆಲ್ಲುವ ಆತ್ಮವಿಶ್ವಾಸದಲ್ಲಿದೆ. ಇದರ ಜೊತೆಗೆ ಸರಣಿ ಜಯಿಸುವ ಛಲದಲ್ಲಿದೆ. ಇಂದಿನ ಪಂದ್ಯಕ್ಕಾಗಿ ವಿರಾಟ್ ಕೊಹ್ಲಿ ಕಮ್ಬ್ಯಾಕ್ ಮಾಡಿದ್ದಾರೆ.
ಇಂಗ್ಲೆಂಡ್ ಆಡುವ 11ರ ಬಳಗ: ಜೇಸನ್ ರಾಯ್, ಜಾನಿ ಬೈರ್ಸ್ಟೋ. ಜೋ ರೂಟ್, ಬೆನ್ ಸ್ಟೋಕ್ಸ್, ಜೋಸ್ ಬಟ್ಲರ್(ವಿ.ಕಿ,ಕ್ಯಾಪ್ಟನ್), ಲಿವಿಗ್ಸ್ಟೋನ್, ಮೊಯಿನ್ ಅಲಿ, ಓವರ್ಟೊನ್, ಡೇವಿಡ್ ವಿಲ್ಲಿ, ಕೇರ್ಸ್, ಟೊಪ್ಲೆ
ಭಾರತ ಆಡುವ 11ರ ಬಳಗ: ರೋಹಿತ್ ಶರ್ಮಾ(ಕ್ಯಾಪ್ಟನ್), ಶಿಖರ್ ಧವನ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್(ವಿ.ಕೀ), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ,ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಯಜುವೇಂದ್ರ ಚಹಲ್, ಪ್ರಸಿದ್ಧ್ ಕೃಷ್ಣ
-
A look at our Playing XI for the 2nd ODI.
— BCCI (@BCCI) July 14, 2022 " class="align-text-top noRightClick twitterSection" data="
Virat Kohli back in the XI
Live - https://t.co/N4iVtxbfM7 #ENGvIND pic.twitter.com/yeJIf2xTvz
">A look at our Playing XI for the 2nd ODI.
— BCCI (@BCCI) July 14, 2022
Virat Kohli back in the XI
Live - https://t.co/N4iVtxbfM7 #ENGvIND pic.twitter.com/yeJIf2xTvzA look at our Playing XI for the 2nd ODI.
— BCCI (@BCCI) July 14, 2022
Virat Kohli back in the XI
Live - https://t.co/N4iVtxbfM7 #ENGvIND pic.twitter.com/yeJIf2xTvz
ಇಂದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕಣಕ್ಕಿಳಿಯಲಿದ್ದಾರೆ.ಹೀಗಾಗಿ, ಆಡುವ 11ರ ಬಳಗದಿಂದ ಶ್ರೇಯಸ್ ಅಯ್ಯರ್ಗೆ ಕೈಬಿಡಲಾಗಿದೆ. ಉಳಿದಂತೆ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಇನ್ನೂ ಇಂಗ್ಲೆಂಡ್ ಕೂಡ ಮೊದಲ ಪಂದ್ಯದಲ್ಲಿ ಕಣಕ್ಕಿಳಿಸಿದ್ದ ತಂಡದೊಂದಿಗೆ ಎರಡನೇ ಪಂದ್ಯ ಆಡಲಿದೆ. ಕ್ರಿಕೆಟ್ ಕಾಶಿ ಲಾರ್ಡ್ಸ್ನಲ್ಲಿ ನಡೆಯುತ್ತಿರುವ ಈ ಪಂದ್ಯ ಇಂಗ್ಲೆಂಡ್ ಬಳಗಕ್ಕೆ ಹೆಚ್ಚು ಮಹತ್ವ ಪಡೆದುಕೊಂಡಿದೆ. ಈ ಸರಣಿ ಬಟ್ಲರ್ ಪಾಲಿಗೆ ಮಾಡು ಇಲ್ಲವೆ ಮಡಿ ಆಗಿದೆ. ಒಂದು ವೇಳೆ ಇಂದಿನ ಪಂದ್ಯದಲ್ಲಿ ಸೋಲು ಕಂಡರೆ, ಸರಣಿ ಭಾರತದ ಕೈವಶವಾಗಲಿದೆ.