ETV Bharat / sports

ಬುಮ್ರಾ, ಶಮಿ ದಾಳಿಗೆ ನಲುಗಿದ ಆಂಗ್ಲರು.. ಟೀಂ ಇಂಡಿಯಾ ಗೆಲುವಿಗೆ 111 ರನ್​​ ಟಾರ್ಗೆಟ್​​

author img

By

Published : Jul 12, 2022, 7:52 PM IST

ಟೀಂ ಇಂಡಿಯಾ ಯಾರ್ಕರ್ ಕಿಂಗ್​ ಬುಮ್ರಾ(6 ವಿಕೆಟ್​) ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ಇಂಗ್ಲೆಂಡ್​ ಮೊದಲ ಏಕದಿನ ಪಂದ್ಯದಲ್ಲಿ ಕೇವಲ 110ರನ್​​ಗಳಿಗೆ ಆಲೌಟ್​ ಆಗಿದೆ. ಆಂಗ್ಲರ ತಂಡ ಭಾರತದ ವಿರುದ್ಧ ಏಕದಿನ ಕ್ರಿಕೆಟ್​ನಲ್ಲಿ ಇಷ್ಟೊಂದು ಕಡಿಮೆ ರನ್​ಗಳಿಗೆ ಆಲೌಟ್ ಆಗಿರುವುದು ಇದೇ ಮೊದಲು ಎಂಬುದು ಗಮನಾರ್ಹ.

Jasprit Bumrah
Jasprit Bumrah

ದಿ ಓವೆಲ್​(ಇಂಗ್ಲೆಂಡ್​): ಪ್ರವಾಸಿ ಭಾರತದ ವಿರುದ್ಧ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಕಳಪೆ ಬ್ಯಾಟಿಂಗ್​ ಪ್ರದರ್ಶನ ತೋರಿದೆ. ಭಾರತದ ವೇಗಿಗಳಾದ ಜಸ್ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್​ ಶಮಿ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ್ದು, 25 ಓವರ್​​ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು ಕೇವಲ 110 ರನ್​ಗಳಿಕೆ ಮಾಡಿದೆ. ಈ ಮೂಲಕ ರೋಹಿತ್ ಪಡೆ ಗೆಲುವಿಗೆ 111ರನ್​ಗಳ ಗುರಿ ನೀಡಿದೆ.

ಟಾಸ್​ ಸೋತು ಮೊದಲು ಬ್ಯಾಟಿಂಗ್ ಮಾಡಲು ಕಣಕ್ಕಿಳಿದ ಇಂಗ್ಲೆಂಡ್ ತಂಡಕ್ಕೆ ಬುಮ್ರಾ ಮೊದಲ ಓವರ್​​ನಲ್ಲೇ ಆಘಾತ ನೀಡಿದರು. ತಾವು ಎಸೆದ ಮೊದಲ ಓವರ್​​ನಲ್ಲಿ ಜಾಸನ್ ರಾಯ್​(0) ವಿಕೆಟ್ ಪಡೆದುಕೊಂಡರು. ಇದರ ಬೆನ್ನಲ್ಲೇ ಜೋ ರೂಟ್​​(0) ಕೂಡ ಬುಮ್ರಾಗೆ ಬಲಿಯಾದರು. ಇದರ ಬೆನ್ನಲ್ಲೇ ಮೈದಾನಕ್ಕೆ ಬಂದ ಸ್ಟೋಕ್ಸ್​​​(0) ಕೂಡ ಬುಮ್ರಾ ಓವರ್​ನಲ್ಲಿ ಖಾತೆ ತೆರೆಯುವುದಕ್ಕೂ ಮೊದಲೇ ಪೆವಿಲಿಯನ್​ ಸೇರಿಕೊಂಡರು.

ಟೆಸ್ಟ್​ ಕ್ರಿಕೆಟ್​ನಲ್ಲಿ ಅಬ್ಬರಿಸಿದ್ದ ಬೈರ್​ಸ್ಟೋ(7)ರನ್​​ಗಳಿಕೆ ಮಾಡಿ ಬುಮ್ರಾಗೆ ಬಲಿಯಾದರೆ, ಲಿವಿಗ್​​ಸ್ಟೋನ್​​(0) ಔಟಾದರು. ಹೀಗಾಗಿ, ಇಂಗ್ಲೆಂಡ್ ತಂಡ 26 ರನ್​​ಗಳಿಸುವಷ್ಟರಲ್ಲಿ ಪ್ರಮುಖ 5 ವಿಕೆಟ್ ಕಳೆದುಕೊಂಡಿತು. ಮಧ್ಯಮ ಕ್ರಮಾಂಕದಲ್ಲಿ ಒಂದಾದ ಕ್ಯಾಪ್ಟನ್ ಬಟ್ಲರ್ ಹಾಗೂ ಮೊಯಿನ್ ಅಲಿ ಸ್ವಲ್ಪ ಹೊತ್ತು ಜೊತೆಯಾಟ ಆಡಿದರು. ಆದರೆ, 14ರನ್​​ಗಳಿಕೆ ಮಾಡಿದ್ದಾಗ ಪ್ರಸಿದ್ಧ್ ಕೃಷ್ಣ ಎಸೆದ ಓವರ್​ನಲ್ಲಿ ಮೊಯಿನ್ ವಿಕೆಟ್ ಒಪ್ಪಿಸಿದರು. 30ರನ್​​ಗಳಿಕೆ ಮಾಡಿದ್ದ ಬಟ್ಲರ್ ಕೂಡ ಶಮಿಗೆ ಔಟಾದರು.

ಕೊನೆಯದಾಗಿ ಡೇವಿಡ್​ ವಿಲ್ಲಿ(21) ಓವರ್​ಟೊನ್​(8), ಕೇರ್ಸ್​​(15)ರನ್​​ಗಳಿಕೆ ಮಾಡಿ, ತಂಡದ ಮೊತ್ತ 100ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ತಂಡ ಕೊನೆಯದಾಗಿ 25.2 ಓವರ್​​ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು 110ರನ್​ಗಳಿಕೆ ಮಾಡಿತು.

ಇದನ್ನೂ ಓದಿರಿ: ಬುಮ್ರಾ ದಾಳಿಗೆ ಆಂಗ್ಲ ಪಡೆ ತತ್ತರ​.. 26ರನ್​ಗಳಿಗೆ 5 ವಿಕೆಟ್ ಕಳೆದುಕೊಂಡು ಕಳಪೆ ರೆಕಾರ್ಡ್​

ಭಾರತದ ಪರ ಬೌಲಿಂಗ್​ನಲ್ಲಿ ಮಿಂಚು ಹರಿಸಿದ ಜಸ್ಪ್ರೀತ್ ಬುಮ್ರಾ 6ವಿಕೆಟ್ ಪಡೆದುಕೊಂಡರೆ, ಮೊಹಮ್ಮದ್ ಶಮಿ 3 ಹಾಗೂ ಪ್ರಸಿದ್ಧ್ ಕೃಷ್ಣ 1 ವಿಕೆಟ್ ಪಡೆದರು.

ಇಂಗ್ಲೆಂಡ್​ ನಾಲ್ವರು ಬ್ಯಾಟರ್​​ಗಳು ಶೂನ್ಯಕ್ಕೆ ಔಟ್​​: ಬುಮ್ರಾ ಎಸೆದ ಓವರ್​​ನಲ್ಲಿ ಜೇಸನ್ ರಾಯ್​(0), ರೂಟ್​​(0), ಲಿವಿಗ್​​ಸ್ಟೋನ್​(0) ಶೂನ್ಯಕ್ಕೆ ಔಟಾದರೆ, ಬೈರ್​​ಸ್ಟೋ 7 ರನ್​​ಗಳಿಕೆ ಮಾಡಿ ವಿಕೆಟ್​ ಒಪ್ಪಿಸಿದರು. ಇನ್ನೂ ಶಮಿ ಓವರ್​​ನಲ್ಲಿ ಬೆನ್​​ ಸ್ಟೋಕ್ಸ್​​(0) ವಿಕೆಟ್​ ಒಪ್ಪಿಸಿದರು.

ಏಕದಿನ ಕ್ರಿಕೆಟ್​ನಲ್ಲಿ ಬುಮ್ರಾ ದಾಖಲೆ: ಅಂತಾರಾಷ್ಟ್ರೀಯ ಕ್ರಿಕೆಟ್​​ನಲ್ಲಿ ಜಸ್ಪ್ರಿತ್ ಬುಮ್ರಾ ಹೊಸದೊಂದು ದಾಖಲೆ ಬರೆದಿದ್ದಾರೆ. ತಮ್ಮ ವೃತ್ತಿ ಜೀವನದಲ್ಲಿ ಇದೇ ಮೊದಲ ಸಲ 6 ವಿಕೆಟ್​ ಕಬಳಿಕೆ ಮಾಡಿದ್ದಾರೆ. 7 ಓವರ್​ ಬೌಲಿಂಗ್ ಮಾಡಿದ ಯಾರ್ಕರ್​ ಕಿಂಗ್ ಬುಮ್ರಾ ಕೇವಲ 19ರನ್​ ನೀಡಿ, ಪ್ರಮುಖ 6 ವಿಕೆಟ್ ಕಿತ್ತಿದ್ದಾರೆ. ಇನ್ನೂ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಎರಡನೇ ಸಲ 5 ವಿಕೆಟ್​​ ಕಬಳಿಕೆ ಮಾಡಿರುವ ಸಾಧನೆ ಮಾಡಿದ್ದಾರೆ.

ಭಾರತದ ವಿರುದ್ಧ ಇಂಗ್ಲೆಂಡ್ ಕಳಪೆ ರೆಕಾರ್ಡ್​: ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್​ನಲ್ಲಿ ಇಂಗ್ಲೆಂಡ್ ತಂಡ ಭಾರತದ ವಿರುದ್ಧ ಇಷ್ಟೊಂದು ಕಡಿಮೆ ರನ್​ಗಳಿಕೆ ಮಾಡಿದ್ದು ಇದೇ ಮೊದಲು. ಈ ಮೂಲಕ ಮತ್ತೊಂದು ಕಳಪೆ ರೆಕಾರ್ಡ್​ ಬರೆದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.