ETV Bharat / sports

ಪಾರ್ಟ್ನರ್​​ಶಿಪ್ ಬ್ರೇಕ್​ ಮಾಡುವುದೆಂದರೆ ನನಗೆ ಖುಷಿಯ ವಿಚಾರ: ​ಪ್ರಸಿದ್ಧ್ ಕೃಷ್ಣ - ಭಾರತ ಇಂಗ್ಲೆಂಡ್ ಏಕದಿನ ಸರಣಿ

ಆರಂಭದಲ್ಲಿ ದುಬಾರಿಯಾಗಿ ಪರಿಣಮಿಸಿದ ಪ್ರಸಿದ್ಧ್​ ಕೃಷ್ಣ ತದನಂತರ ಕಮ್​ಬ್ಯಾಕ್​ ಮಾಡಿ ಉತ್ತಮ ಬೌಲಿಂಗ್​ ಪ್ರದರ್ಶನ ನೀಡಿದ್ರು. ಅದರ ಫಲವಾಗಿ ಮೊದಲ ಅಂತಾರಾಷ್ಟ್ರೀಯ ಪಂದ್ಯದಲ್ಲೇ 4 ವಿಕೆಟ್​ ಪಡೆದುಕೊಳ್ಳುವಲ್ಲಿ ಯಶಸ್ವಿಯಾದರು.

ಪ್ರಸಿದ್ಧ್ ಕೃಷ್ಣ
ಪ್ರಸಿದ್ಧ್ ಕೃಷ್ಣ
author img

By

Published : Mar 24, 2021, 9:33 AM IST

ಪುಣೆ: ಭಾರತ ಹಾಗೂ ಪ್ರವಾಸಿ ಇಂಗ್ಲೆಂಡ್ ತಂಡಗಳ ನಡುವಿನ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಪರವಾಗಿ ಕಣಕ್ಕಿಳಿದ ಕನ್ನಡಗಿ ಪ್ರಸಿದ್ಧ್ ಕೃಷ್ಣ ಹೊಸ ದಾಖಲೆ ಬರೆಯುವ ಮೂಲಕ ತಮಗೆ ಸಿಕ್ಕ ಅವಕಾಶ ಸರಿಯಾಗಿಯೇ ಬಳಸಿಕೊಂಡಿದ್ದಾರೆ.

ಮೊದಲ ಪಂದ್ಯದಲ್ಲೇ ಪ್ರಸಿದ್ಧ್​ ಕೃಷ್ಣ 8.1 ಓವರ್​ಗಳಲ್ಲಿ 54ರನ್​ ನೀಡಿ ಪ್ರಮುಖ 4 ವಿಕೆಟ್ ಪಡೆದು ಮಿಂಚಿದರು. ಈ ಮೂಲಕ ಟೀಂ ಇಂಡಿಯಾ ಪರ ಪದಾರ್ಪಣೆ ಪಂದ್ಯದಲ್ಲೇ ಹೆಚ್ಚು ವಿಕೆಟ್​ ಪಡೆದ ಮೊದಲ ಭಾರತೀಯ ಪ್ಲೇಯರ್​ ಎಂಬ ಸಾಧನೆಗೆ ಪಾತ್ರರಾಗಿದ್ದಾರೆ.

ಆರಂಭದಲ್ಲಿ ದುಬಾರಿಯಾಗಿ ಪರಿಣಮಿಸಿದ ಪ್ರಸಿದ್ಧ್​ ಕೃಷ್ಣ ತದನಂತರ ಕಮ್​ಬ್ಯಾಕ್​ ಮಾಡಿ ಉತ್ತಮ ಬೌಲಿಂಗ್​ ಪ್ರದರ್ಶನ ನೀಡಿದ್ರು. ಅದರ ಫಲವಾಗಿ 4 ವಿಕೆಟ್​ ಪಡೆದುಕೊಳ್ಳುವಲ್ಲಿ ಯಶಸ್ವಿಯಾದರು.

ತಮ್ಮ ಸಾಧನೆ ಬಗ್ಗೆ ಮಾತನಾಡಿರುವ ಪ್ರಸಿದ್ಧ್​ ಕೃಷ್ಣ, ಮೂರನೇ ಓವರ್​​ ನಂತರ ಯಾವ ರೀತಿಯಾಗಿ ಬೌಲಿಂಗ್​ ಮಾಡಬೇಕು ಎಂಬುದು ಅರ್ಥಮಾಡಿಕೊಂಡು, ಉತ್ತಮ ಎಸೆತಗಳನ್ನು ಎಸೆದ ಕಾರಣ ವಿಕೆಟ್ ಪಡೆದುಕೊಳ್ಳುವಲ್ಲಿ ಸಾಧ್ಯವಾಯಿತು ಎಂದಿದ್ದಾರೆ. ಇದಕ್ಕಾಗಿ ಐಪಿಎಲ್ ಕೂಡ ಸಹಾಯ ಮಾಡಿದೆ ಎಂದರು.

ಓದಿ : ಪದಾರ್ಪಣೆ ಪಂದ್ಯದಲ್ಲಿ ಕನ್ನಡಿಗನ ಮಿಂಚು: ಭಾರತೀಯ​ ಬೌಲರ್​ಗಳ ಪೈಕಿ ಪ್ರಸಿದ್ಧ್​ ಕೃಷ್ಣ ದಾಖಲೆ!

ನಾನು ಮುಂದಿನ ದಿನಗಳಲ್ಲಿ ಒಳ್ಳೆಯ ಲೈನ್​ ಮತ್ತು ಲೆಂತ್​​​ನಲ್ಲಿ ಪರಿಣಾಮಕಾರಿಯಾಗಿ ಬೌಲಿಂಗ್​ ಮಾಡಲು ಪ್ರಯತ್ನುಸುತ್ತೇನೆ. ನಾನು ಬೌನ್ಸರ್​ ಮೂಲಕ ಬ್ಯಾಟ್ಸಮನ್​ಗಳನ್ನ ಕಟ್ಟಿಹಾಕಲು ಪ್ರಯತ್ನಿಸುತ್ತೇನೆ. ನನಗೆ ಜೋಡಿ ಆಟಗಳನ್ನು ಬ್ರೇಕ್​​ ಮಾಡುವುದು ಎಂದರೆ ತುಂಬಾ ಇಷ್ಟ. ಹಾಗಾಗಿ ನಾನು ಆದಷ್ಟೂ ಜೋಡಿಗಳನ್ನು ಮುರಿಯಲು ಪ್ರಯತ್ನಿಸುತ್ತೇನೆ, ಏಕೆಂದರೆ ಅದು ತಂಡಕ್ಕೆ ಅವಶ್ಯಕವಾಗಿರುತ್ತದೆ ಎಂದು ಪ್ರಸಿದ್ಧ್ ಕೃಷ್ಣ ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.