ಅಹಮದಾಬಾದ್: ಲೆಗ್ ಸ್ಪಿನ್ನರ್ ವರುಣ್ ಚಕ್ರವರ್ತಿ ಫಿಟ್‌ನೆಸ್ ಪರೀಕ್ಷೆಯಲ್ಲಿ ಮತ್ತೊಮ್ಮೆ ವಿಫಲವಾದ ಕಾರಣ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ-20 ಸರಣಿಯಿಂದ ಹೊರಗುಳಿದಿದ್ದಾರೆ.
ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಫಿಟ್‌ನೆಸ್ ಪರೀಕ್ಷೆ ಪೂರ್ಣಗೊಳಿಸುವಲ್ಲಿ ಚಕ್ರವರ್ತಿ ಪದೇ ಪದೇ ವಿಫಲರಾಗಿದ್ದು, ಹಾಗೆಯೇ ನಟರಾಜನ್ ಭುಜದ ಗಾಯದ ಸಮಸ್ಯೆಯಿಂದ ಬಳಲುತ್ತಿರುವುದರಿಂದ ಅವರು ಕೂಡ ತಂಡದಲ್ಲಿ ಸ್ಥಾನ ಪಡೆಯುವುದು ಅನುಮಾನವಾಗಿದೆ.
"2 ಕಿಲೋಮೀಟರ್ ಓಟಕ್ಕೆ ಕನಿಷ್ಠ ಎರಡು ಬಾರಿಯಾದರೂ ನಿಗದಿಪಡಿಸಿದ ಯೋಯೋ ಪರೀಕ್ಷಾ ಚಿಹ್ನೆಯನ್ನು ತಲುಪಲು ಅವರು ವಿಫಲರಾಗಿದ್ದಾರೆ." ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಓದಿ : ಭಾರತ -ಇಂಗ್ಲೆಂಡ್ ಟಿ-20 ಸರಣಿ: ಹಾರ್ದಿಕ್ ಫಿಟ್.. ಟಿ. ನಟರಾಜನ್ ಔಟ್
ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟಿ-20 ಸರಣಿ ಶುಕ್ರವಾರದಿಂದ ಪ್ರಾರಂಭವಾಗಲಿದೆ.