ಅಹಮದಾಬಾದ್: ಒಂದೊಮ್ಮೆ ಭಾರತವನ್ನ ಸೋಲಿಸಿ ಸರಣಿ ಸಮಬಲ ಮಾಡಿಕೊಂಡರೆ ಇದು "ನಂಬಲಸಾಧ್ಯವಾದ ಚಳಿಗಾಲ’’ವಾಗಲಿದೆ ಎಂದು ಇಂಗ್ಲೆಂಡ್ ಬ್ಯಾಟ್ಸ್ಮನ್ ಜಾಕ್ ಕ್ರಾಲೆ ಹೇಳಿದ್ದಾರೆ.
ಜನವರಿಯಲ್ಲಿ ಶ್ರೀಲಂಕಾದಲ್ಲಿ ನಡೆದ ಪಂದ್ಯಗಳಲ್ಲಿ ಆಂಗ್ಲರ ಪಡೆ ಎರಡು ಟೆಸ್ಟ್ಗಳಲ್ಲಿ ಗೆಲುವು ಸಾಧಿಸಿ ವಿಕ್ರಮ ಮೆರೆದಿತ್ತು. ಇನ್ನು ಚೆನ್ನೈನಲ್ಲಿ ನಡೆದ ಮೊದಲ ಪಂದ್ಯವನ್ನ 227 ರನ್ಗಳಿಂದ ಜಯಿಸಿ ಭಾರತವನ್ನ ಇಕ್ಕಟ್ಟಿಗೆ ಸಿಲುಕಿಸಿತ್ತು.
ಚೆನ್ನೈನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಪಾರಮ್ಯ ಮೆರದಿದ್ದ ಇಂಗ್ಲೆಂಡ್ ತಂಡ ಉಳಿದ ಎರಡೂ ಪಂದ್ಯಗಳಲ್ಲಿ ಸೋತು ನಿರಾಸೆ ಅನುಭವಿಸಿತ್ತು. ಹಾಗಾಗಿ ನಾಳಿನಿಂದ ಆರಂಭವಾಗುವ ಟೆಸ್ಟ್ ಪಂದ್ಯ ಇಂಗ್ಲೆಂಡ್ಗೆ ಮಹತ್ವದ ಪಂದ್ಯವಾಗಿದೆ. ಇನ್ನೊಂದೆಡೆ ಇದು ಕೊಹ್ಲಿ ಪಡೆಗೆ ಮಾಡು ಇಲ್ಲವೇ ಮಡಿ ಪಂದ್ಯ. ಏಕೆಂದರೆ ಈ ಪಂದ್ಯವನ್ನ ಡ್ರಾ ಆಗುವಂತೆ ನೋಡಿಕೊಳ್ಳುವ ಅಥವಾ ಗೆಲುವು ಸಾಧಿಸುವ ಅಗತ್ಯತೆ ಇದೆ.
ಓದಿ : ಅಂತಿಮ ಟೆಸ್ಟ್ ಮಾತ್ರವಲ್ಲ, ಏಕದಿನ ಸರಣಿಯಿಂದಲೂ ವೇಗಿ ಬುಮ್ರಾ ಹೊರಕ್ಕೆ?
ಈ ಹಿನ್ನೆಲೆಯಲ್ಲಿ ಮಾತನಾಡಿರುವ ಕ್ರಾಲೆ, ಈ ಹಿಂದಿನ ಎರಡೂ ಪಂದ್ಯಗಳ ಸೋಲಿನಿಂದ ನಾವು ಪಾಠ ಕಲಿತಿದ್ದೇವೆ ಎಂದಿದ್ದಾರೆ. ಕೆಂಪು ಚೆಂಡಿನ ವಿರುದ್ಧ ಟರ್ನರ್‌ನಲ್ಲಿ ಬ್ಯಾಟಿಂಗ್ ಮಾಡುವುದು ತುಂಬಾ ಸುಲಭ. ಆದರೆ ಇಂಗ್ಲೆಂಡ್ ಎಚ್ಚರಿಕೆಯಿಂದ ನೋಡಿಕೊಂಡು ಆಟವಾಡಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. "ಪಿಚ್ ಕೇವಲ ಟ್ರಿಕಿ ಆಗಿರುತ್ತದೆ ಮತ್ತು ಅದೇ ರೀತಿಯಲ್ಲಿ ವರ್ತನೆ ಮಾಡುತ್ತೆ ಹಾಗಾಗಿ ನಾವು ತೀರಾ ಜಾಗ್ರತೆಯಿಂದ ಕಾರ್ಯ ಪ್ರವೃತ್ತರಾಗಬೇಕು ಎಂದು ಹೇಳಿದ್ದಾರೆ.