ಅಹಮದಾಬಾದ್: ಭಾರತ-ಇಂಗ್ಲೆಂಡ್ ನಡುವೆ ನಡೆಯುತ್ತಿರುವ 4 ಪಂದ್ಯಗಳ ಟೆಸ್ಟ್ ಸರಣಿಯ ಕೊನೆಯ ಟೆಸ್ಟ್ ಪಂದ್ಯದಿಂದ ಟೀಮ್ ಇಂಡಿಯಾದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡಲಾಗಿದ್ದು, ಅವರ ಸ್ಥಾನಕ್ಕೆ ಉಮೇಶ್ ಯಾದವ್ ಅಥವಾ ಮೊಹಮ್ಮದ್ ಸಿರಾಜ್ ಆಯ್ಕೆಯಾಗುವ ಸಾಧ್ಯತೆ ಇದೆ.
ಯಾದವ್, ಡಿಸೆಂಬರ್‌ನಲ್ಲಿ ಮೆಲ್ಬೋರ್ನ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ವೇಳೆ ಗಾಯಗೊಂಡ ಪರಿಣಾಮ ಸರಣಿಯಿಂದ ಹೊರಗುಳಿದಿದ್ದರು. ಈಗ ಗಾಯದಿಂದ ಸಂಪೂರ್ಣ ಚೇತರಿಕೆ ಕಂಡಿರುವ ಉಮೇಶ್ ಯಾದವ್ ತಂಡದಲ್ಲಿ ಸ್ಥಾನ ಪಡೆಯಲಿದ್ದಾರೆ ಎಂದು ಭಾರತದ ಉಪನಾಯಕ ಅಜಿಂಕ್ಯ ರಹಾನೆ ಹೇಳಿದ್ದಾರೆ.
"ಉಮೇಶ್ ಸಂಪೂರ್ಣವಾಗಿ ಚೆತರಿಸಿಕೊಂಡಿದ್ದಾರೆ. ಅವರು ಫಿಟ್ ಆಗಿದ್ದಾರೆ, ನೆಟ್ ನಲ್ಲಿ ಉತ್ತಮವಾಗಿ ಬೌಲಿಂಗ್ ಮಾಡುತ್ತಿದ್ದಾರೆ ಅವರು ತಂಡಕ್ಕೆ ಮರಳುತ್ತಿರುವುದು ನಿಜವಾಗಿಯೂ ಸಂತೋಷವಾಗಿದೆ" ಎಂದು ರಹಾನೆ ಹೇಳಿದ್ದಾರೆ.
ಓದಿ : ರೋಡ್ ಸೇಫ್ಟಿ ವಿಶ್ವ ಸರಣಿ ಕ್ರಿಕೆಟ್ ಟೂರ್ನಿ: ಮಾರ್ಚ್ 5 ರಿಂದ ಕಣದಲ್ಲಿ ಕ್ರಿಕೆಟ್ ಲೆಜೆಂಡ್ಸ್
ರಿವರ್ಸ್ ಸ್ವಿಂಗ್ ಸ್ಪೇಲಿಷ್ಟ್ ಆಗಿರುವ ಉಮೇಶ್ ಯಾದವ್ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಹೆಚ್ಚಿದೆ. ಹಾಗೆಯೇ ಸಿರಾಜ್ ಆಸ್ಟ್ರೇಲಿಯಾ ಪ್ರವಾಸದಲ್ಲಿ ಬುಮ್ರಾ ವಿಶ್ರಾಂತಿ ಪಡೆದಾಗ ತಮಗೆ ಸಿಕ್ಕ ಅವಕಾಶವನ್ನ ಸಫಲ ಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಅವರು ಕೂಡಾ ತಂಡದಲ್ಲಿ ಸ್ಥಾನ ಪಡೆಯಬಹುದು.
ಅಹಮದಾಬಾದ್ನ ಪಿಚ್ ಸ್ಪಿನ್ನರ್ಗಳಿಗೆ ಹೆಚ್ಚು ನೆರವಾಗುವ ಕಾರಣ, ರಿವರ್ಸ್ ಸ್ವಿಂಗ್ ಸ್ಪೆಷಲಿಸ್ಟ್ ಉಮೇಶ್ ಯಾದವ್ಗೆ ಆಡುವ ಇಲೆವೆನ್ನಲ್ಲಿ ಸ್ಥಾನ ಸಿಗುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ. ಉಮೇಶ್ ಯಾದವ್ ಭಾರತ ನೆಲದಲ್ಲಿ ಉತ್ತಮ ಅನುಭವ ಹೊಂದಿದ್ದು, ತಂಡದಲ್ಲಿ ಸ್ಥಾನ ಪಡೆದರೆ ಪ್ರಭಾವಶಾಲಿಯಾಗಲಿದ್ದಾರೆ.