ETV Bharat / sports

ಎಡಗೈ ಬ್ಯಾಟ್ಸಮನ್​​ ಗಳ ವಿರುದ್ಧ ವಿಶಿಷ್ಟ ದಾಖಲೆ ಬರೆದ ಆರ್​.ಅಶ್ವಿನ್​: ಆ ರೆಕಾರ್ಡ್​ ಏನು? - ಎಡಗೈ ಬ್ಯಾಟ್ಸಮನ್​​ ಗಳ ವಿರುದ್ಧ ವಿಶಿಷ್ಟ ದಾಖಲೆ ಬರೆದ ಆರ್​.ಅಶ್ವಿನ್​

ಅಶ್ವಿನ್ ಇಂಗ್ಲೆಂಡ್ ನ ಸಿಬ್ಲೆ, ಲಾರೆನ್ಸ್, ಬೆನ್ ಸ್ಟೋಕ್ಸ್, ಒಲ್ಲಿ ಸ್ಟೋನ್ ಮತ್ತು ಬ್ರಾಡ್ ರ ವಿಕೆಟ್​ ಪಡೆದು ಮಿಂಚಿದ್ದರು. ಈ ಪೈಕಿ ಬೆನ್ ಸ್ಟೋಕ್ಸ್ ಮತ್ತು ಸ್ಟುವರ್ಟ್ ಬ್ರಾಡ್ ಎಡಗೈ ಬ್ಯಾಟ್ಸ್ ಮನ್ ಗಳಾಗಿದ್ದಾರೆ. ಸ್ಟುವರ್ಟ್ ಬ್ರಾಡ್ ವಿಕೆಟ್​​ ಪಡೆಯುವ ಮೂಲಕ ಅಶ್ವಿನ್, ಈವರೆಗೆ 200 ಬಾರಿ ಎಡಗೈ ಬ್ಯಾಟ್ಸ್ ಮನ್ ಗಳನ್ನ ಪೆವಿಲಿಯನ್​ಗೆ​​ ಅಟ್ಟಿದ್ದಾರೆ.

R Ashwin
ಆರ್​.ಅಶ್ವಿನ್
author img

By

Published : Feb 15, 2021, 11:49 AM IST

ಚೆನ್ನೈ: ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಬ್ಯಾಟ್ಸಮನ್​​ಗಳಿಗೆ ಮಾರಕವಾಗಿದ್ದ ಭಾರತ ತಂಡದ ಸ್ಪಿನ್​ ಬೌಲರ್​ ಆರ್ ಅಶ್ವಿನ್ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅಪರೂಪದ ದಾಖಲೆಯೊಂದನ್ನ ಬರೆದಿದ್ದಾರೆ.

ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಅಶ್ವಿನ್ ಐದು ವಿಕೆಟ್ ಪಡೆದು ಮಿಂಚಿದರು. ಈ ಮೂಲಕ ಅವರು ಟೆಸ್ಟ್ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ಬಾರಿ ಎಡಗೈ ಬ್ಯಾಟ್ಸಮನ್​​ ಗಳನ್ನು ಔಟ್ ಮಾಡಿದ ಸಾಧನೆ ಮಾಡಿದ್ದಾರೆ. ಅಶ್ವಿನ್ ಈ ಪಂದ್ಯದಲ್ಲಿ ತಮ್ಮ ಟೆಸ್ಟ್ ಕ್ರಿಕೆಟ್ ವೃತ್ತಿ ಜೀವನದಲ್ಲಿ 200 ಬಾರಿ ಎಡಗೈ ಬ್ಯಾಟ್ಸಮನ್​​ ಗಳನ್ನು ಔಟ್ ಮಾಡಿದ ಮೊದಲ ಬೌಲರ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

ಅಶ್ವಿನ್ ಇಂಗ್ಲೆಂಡ್ ನ ಸಿಬ್ಲೆ, ಲಾರೆನ್ಸ್, ಬೆನ್ ಸ್ಟೋಕ್ಸ್, ಒಲ್ಲಿ ಸ್ಟೋನ್ ಮತ್ತು ಬ್ರಾಡ್ ರ ವಿಕೆಟ್​ ಪಡೆದು ಮಿಂಚಿದ್ದರು. ಈ ಪೈಕಿ ಬೆನ್ ಸ್ಟೋಕ್ಸ್ ಮತ್ತು ಸ್ಟುವರ್ಟ್ ಬ್ರಾಡ್ ಎಡಗೈ ಬ್ಯಾಟ್ಸ್ ಮನ್ ಗಳಾಗಿದ್ದಾರೆ. ಸ್ಟುವರ್ಟ್ ಬ್ರಾಡ್ ವಿಕೆಟ್​​ ಪಡೆಯುವ ಮೂಲಕ ಅಶ್ವಿನ್, 200 ಬಾರಿ ಎಡಗೈ ಬ್ಯಾಟ್ಸ್ ಮನ್ ಗಳನ್ನ ಪೆವಿಲಿಯನ್​ಗೆ​​ ಅಟ್ಟಿದ್ದಾರೆ​.

ಓದಿ : ತವರು ನೆಲದಲ್ಲಿ ಮತ್ತೊಂದು ದಾಖಲೆ ಬರೆದ ಅಶ್ವಿನ್​​​

ಅಶ್ವಿನ್ ಬೌಲಿಂಗ್ ನಲ್ಲಿ ಅತೀ ಹೆಚ್ಚು ಬಾರಿ ಔಟಾದ ಬ್ಯಾಟ್ಸ್ ಮನ್ ಎಂದರೆ ಅದು ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್ ಮನ್ ಡೇವಿಡ್​​ ವಾರ್ನರ್. ಇವರು ಒಟ್ಟು 10 ಬಾರಿ ಅಶ್ವಿನ್ ಬೌಲಿಂಗ್ ನಲ್ಲಿ ಔಟ್ ಆಗಿದ್ದಾರೆ. ಉಳಿದಂತೆ ಇಗ್ಲೆಂಡ್ ನ ಅಲೆಸ್ಟರ್ ಕುಕ್ ಮತ್ತು ಬೆನ್ ಸ್ಟೋಕ್ಸ್ ತಲಾ 9 ಬಾರಿ ಅಶ್ವಿನ್ ಗೆ ವಿಕೆಟ್ ಒಪ್ಪಿಸಿದ್ದಾರೆ.

ಆಸಿಸ್ ನ ಮಾಜಿ ಬ್ಯಾಟ್ಸ್ ಮನ್ ಎಡ್ ಕೋವನ್ ಮತ್ತು ಇಂಗ್ಲೆಂಡ್ ಜೇಮ್ಸ್ ಆ್ಯಂಡರ್ಸನ್ ತಲಾ 7 ಬಾರಿ ಅಶ್ವಿನ್ ಗೆ ವಿಕೆಟ್ ಒಪ್ಪಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.