ETV Bharat / sports

ಸೂರ್ಯಕುಮಾರ್ ಭರ್ಜರಿ ಬ್ಯಾಟಿಂಗ್​ : ಬೌಲರ್​ಗಳ ಸಂಘಟಿತ ದಾಳಿಗೆ ಸರಣಿ ಜೀವಂತ - Pacers, Yadav help India square T20I series

ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ 4 ನೇ ಟಿ-20 ಪಂದ್ಯದಲ್ಲಿ ಸೂರ್ಯಕುಮಾರ್​ ಭರ್ಜರಿ ಅರ್ಧಶತಕ ಮತ್ತು ಶಾರ್ದುಲ್ ಠಾಕೂರ್ ಬೌಲಿಂಗ್​ ನೆರವಿನಿಂದ 8 ರನ್​ಗಳಿಂದ ನಾಲ್ಕನೇ ಪಂದ್ಯ ಗೆದ್ದ ಭಾರತ ತಂಡ ಸರಣಿಯಲ್ಲಿ 2-2ರಲ್ಲಿ ಸಮಬಲ ಸಾಧಿಸಿದೆ.

Yadav
ಸೂರ್ಯಕುಮಾರ್ ಯಾದವ್
author img

By

Published : Mar 19, 2021, 10:29 AM IST

ಅಹಮದಾಬಾದ್ : 4ನೇ ಟಿ-20 ಪಂದ್ಯವನ್ನ 8 ರನ್​ಗಳಿಂದ ಗೆದ್ದ ಭಾರತ ತಂಡ ಸರಣಿಯಲ್ಲಿ 2-2ರಿಂದ ಸಮಬಲ ಸಾಧಿಸಿದೆ. ಈ ಗೆಲುವಿಗೆ ಮುಖ್ಯ ಕಾರಣ ಟೀಮ್​ ಇಂಡಿಯಾದ ಬೌಲರ್​ಗಳ ಸಂಘಟಿತ ದಾಳಿ.

ಟಾಸ್​ ಸೋತ ಭಾರತ ತಂಡ 20 ಓವರ್​​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 185 ರನ್​​ಗಳಿಸಿತು. ಆರಂಭಿಕ ಜೋಡಿ ರೋಹಿತ್(12) ಮತ್ತು ರಾಹುಲ್(14) ಈ ಪಂದ್ಯದಲ್ಲೂ ವಿಫಲರಾದರೆ, ನಾಯಕ ವಿರಾಟ್ ಕೊಹ್ಲಿ ಕೇವಲ 1 ರನ್​ಗಳಿಸಿ ಔಟಾದರು. ಆದರೆ ಅಂತಾರಾಷ್ಟ್ರೀಯ ವೃತ್ತಿ ಜೀವನದಲ್ಲಿ ಇದೇ ಮೊದಲ ಬಾರಿಗೆ ಬ್ಯಾಟಿಂಗ್ ಮಾಡಿದ ಸೂರ್ಯಕುಮಾರ್ ಯಾದವ್​ ಕೇವಲ 31 ಎಸತಗಳಲ್ಲಿ 3 ಸಿಕ್ಸರ್​ ಮತ್ತು 6 ಬೌಂಡರಿಗಳ ನೆರವಿನಿಂದ 57 ರನ್​ಗಳಿಸಿ ಅನುಮಾನಾಸ್ಪದ ಕ್ಯಾಚ್​ಗೆ ಬಲಿಯಾದರು

ಕೊನೆಯಲ್ಲಿ ಅಬ್ಬರಿಸಿದ ಅಯ್ಯರ್ 18 ಎಸೆತಗಳಲ್ಲಿ 37 ರನ್​ ಹಾಗೂ ಪಂತ್ 23 ಎಸೆತಗಳಲ್ಲಿ 30 ರನ್​ಗಳಿಸಿದರು. ಪಾಂಡ್ಯ 11, ಠಾಕೂರ್ 10 ರನ್​ಗಳಿಸಿ ತಂಡದ ಮೊತ್ತವನ್ನು ಹೆಚ್ಚಿಸಿದರು. ಇಂಗ್ಲೆಂಡ್​ ತಂಡದ ಪರ ಆರ್ಚರ್​ 4 ವಿಕೆಟ್, ರಶೀದ್, ಮಾರ್ಕ್​ ವುಡ್​, ಸ್ಟೋಕ್ಸ್​ ಹಾಗೂ ಕರ್ರನ್​ ತಲಾ 1 ವಿಕೆಟ್​ ಪಡೆದುಕೊಂಡರು.

186 ರನ್​ಗಳ ಬೆನ್ನತ್ತಿದ ಇಂಗ್ಲೆಂಡ್ ತಂಡ 20 ಓವರ್​​ಗಳಲ್ಲಿ 8 ವಿಕೆಟ್ ಕಳೆದುಕೊಂಡು 177 ರನ್​ಗಳಿಸಿ 8 ರನ್​ಗಳ ಸೋಲುಂಡಿತು. ಆರಂಭಿಕ ಬ್ಯಾಟ್ಸ್​ಮನ್ ಜೋಸ್ ಬಟ್ಲರ್​ನನ್ನು ಕೇವಲ 9 ರನ್​ಗಳಿಗೆ ಔಟ್ ಮಾಡುವ ಮೂಲಕ ಭುವನೇಶ್ವರ್​ ಕುಮಾರ್ ಆರಂಭದಲ್ಲೇ ಭಾರತಕ್ಕೆ ಮೇಲುಗೈ ತಂದುಕೊಟ್ಟರು. ನಂತರ ಜೇಸನ್ ರಾಯ್​ ಸೇರಿಕೊಂಡ ಮಲನ್​ ಭಾರತದ ದಾಳಿಗೆ ರನ್​ ಗಳಿಸಲಾರದೇ ಪರದಾಡಿದರು. ಮಲನ್​ 17 ಎಸೆತಗಳಲ್ಲಿ 14 ರನ್​ಗಳಿಸಿ ರಾಹುಲ್ ಚಹಾರ್​ಗೆ ವಿಕೆಟ್ ಒಪ್ಪಿಸಿದರು.

ಆದರೆ ಅಬ್ಬರಿಸಿದ ರಾಯ್​ 27 ಎಸೆತಗಳಲ್ಲಿ 6 ಬೌಂಡರಿ ಮತ್ತು 1 ಸಿಕ್ಸರ್​ ಸಹಿತ 40 ರನ್​ಗಳಿಸಿ ಪೆವಿಲಿಯನ್ ಸೇರಿದರು. 66 ರನ್​ಗಳಿಗೆ 3 ವಿಕೆಟ್ ಕಳೆದುಕೊಂಡಿದ್ದ ಇಂಗ್ಲೆಂಡ್ ಸೋಲಿನ ಸುಳಿಗೆ ಸಿಲುಕಿತ್ತು. ಆದರೆ ಈ ಹಂತದಲ್ಲಿ ಒಂದಾದ ಬೈರ್ಸ್ಟೋವ್ ಮತ್ತು ಬೆನ್​ ಸ್ಟೋಕ್ಸ್​ 4ನೇ ವಿಕೆಟ್​ಗೆ 65 ರನ್ ಸೇರಿಸಿ ತಂಡವನ್ನ ಸೋಲಿನ ಸುಳಿಯಿಂದ ಪಾರು ಮಾಡಿದಲ್ಲದೇ ಇಂಗ್ಲೆಂಡ್​ ಮತ್ತೆ ಸ್ಪರ್ಧೆಗೆ ಮರಳುವಂತೆ ಮಾಡಿದರು.

ಓದಿ : ಕೊನೆ ಓವರ್​ನಲ್ಲಿ ರೋಹಿತ್​ ನೀಡಿದ ಸಲಹೆ ವರ್ಕೌಟ್​ ಆಯ್ತು: ಶಾರ್ದುಲ್ ಠಾಕೂರ್

19 ಎಸೆತಗಳಲ್ಲಿ 25 ರನ್​ಗಳಿಸಿದ್ದ ಬೈರ್ಸ್ಟೋವ್​ರನ್ನು ರಾಹುಲ್ ಚಹಾರ್​ ಪೆವಿಲಿಯನ್​ಗಟ್ಟುವ ಮೂಲಕ ಜೊತೆಯಾಟವನ್ನು ಬ್ರೇಕ್ ಮಾಡಿದರು. ನಂತರ 17ನೇ ಓವರ್​ನಲ್ಲಿ 23 ಎಸೆತಗಳಲ್ಲಿ 3 ಸಿಕ್ಸರ್​ ಮತ್ತು 4 ಬೌಂಡರಿಗಳೊಂದಿಗೆ 46 ರನ್​ಗಳಿಸಿದ್ದ ಸ್ಟೋಕ್ಸ್​ ಮತ್ತು 4 ರನ್​ಗಳಿಸಿದ್ದ ಮಾರ್ಗನ್​ ಅವ​​ರನ್ನ, ಶಾರ್ದುಲ್ ಸತತ 2 ಎಸೆತಗಳಲ್ಲಿ ಪೆವಿಲಿಯನ್​ಗಟ್ಟುವ ಮೂಲಕ ಭಾರತಕ್ಕೆ ಗೆಲುವನ್ನು ಖಚಿತಪಡಿಸಿದರು. ಇವರಿಬ್ಬರ ಬೆನ್ನಲ್ಲೇ ಪಾಂಡ್ಯ ಸ್ಯಾಮ್ ಕರ್ರನ್​​ರನ್ನು ಬೌಲ್ಡ್​ ಮಾಡಿದರು.

ಕೊನೆಯ ಓವರ್​ನಲ್ಲಿ ಇಂಗ್ಲೆಂಡ್​ಗೆ ಗೆಲ್ಲಲು 23 ರನ್​ಗಳ ಅವಶ್ಯಕತೆಯಿತ್ತು. ಠಾಕೂರ್ ಎಸೆದ ಮೊದಲ ಎಸೆತದಲ್ಲಿ ಸಿಂಗಲ್ಸ್​ ಬಂದರೆ 2 ಮತ್ತು 3ನೇ ಎಸೆತಗಳಲ್ಲಿ ಆರ್ಚರ್​ ಬೌಂಡರಿ ಮತ್ತು ಸಿಕ್ಸರ್​ ಬಾರಿಸಿದರು. ನಂತರ 2 ವೈಡ್ ಎಸೆದರು. 3 ಎಸೆತಗಳಲ್ಲಿ 10 ರನ್​ಗಳ ಅವಶ್ಯಕತೆಯಿತ್ತು. ಆದರೆ, 4ನೇ ಎಸೆತದಲ್ಲಿ ಒಂದು ರನ್​ ಬಿಟ್ಟುಕೊಟ್ಟ ಠಾಕೂರ್, ನಂತರದ ಎಸೆತದಲ್ಲಿ ಜೋರ್ಡನ್ ವಿಕೆಟ್ ಪಡೆದು ಭಾರತಕ್ಕೆ 8 ರನ್​ಗಳ ರೋಚಕ ಜಯ ತಂದುಕೊಟ್ಟರು.

ಆರ್ಚರ್ 8 ಎಸೆತಗಳಲ್ಲಿ 18 , ಜೋರ್ಡನ್​ 12 ರನ್​ಗಳಿಸಿದರು. ಭಾರತದ ಪರ ಶಾರ್ದುಲ್ ಠಾಕೂರ್ 3 , ಹಾರ್ದಿಕ್ ಪಾಂಡ್ಯ ಮತ್ತು ರಾಹುಲ್ ಚಹಾರ್​ ತಲಾ 2 ಮತ್ತು ಭುವನೇಶ್ವರ್ ಕುಮಾರ್ ಒಂದು ವಿಕೆಟ್ ಪಡೆದು ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.