ಓವಲ್(ಇಂಗ್ಲೆಂಡ್): ಟೀಂ ಇಂಡಿಯಾ-ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಕೊಹ್ಲಿ ಪಡೆ 191 ರನ್‌ಗಳಿಗೆ ಸರ್ವಪತನ ಕಂಡಿದೆ. ನಾಯಕ ವಿರಾಟ್ ಕೊಹ್ಲಿ ಮತ್ತು ಶಾರ್ದೂಲ್ ಠಾಕೂರ್ ಅವರ ಅರ್ಧ ಶತಕದ ನೆರವಿನಿಂದ 191 ರನ್ ಗಳಿಸಲು ಸಾಧ್ಯವಾಗಿದೆ.
-
India finish the first day on a high after a solid bowling performance.#WTC23 | #ENGvIND | https://t.co/zRhnFiKhzZ pic.twitter.com/4YuwlSZJLU
— ICC (@ICC) September 2, 2021 " class="align-text-top noRightClick twitterSection" data="
">India finish the first day on a high after a solid bowling performance.#WTC23 | #ENGvIND | https://t.co/zRhnFiKhzZ pic.twitter.com/4YuwlSZJLU
— ICC (@ICC) September 2, 2021India finish the first day on a high after a solid bowling performance.#WTC23 | #ENGvIND | https://t.co/zRhnFiKhzZ pic.twitter.com/4YuwlSZJLU
— ICC (@ICC) September 2, 2021
ಪಂದ್ಯದಲ್ಲಿ ರೋಹಿತ್ ಶರ್ಮಾ 11, ಕೆ.ಎಲ್. ರಾಹುಲ್ 17, ಪೂಜಾರಾ 4, ರವೀಂದ್ರ ಜಡೇಜಾ 10, ರಹಾನೆ 14, ಪಂಥ್ 9, ಉಮೇಶ್ ಯಾದವ್ 10 ರನ್ ಗಳಿಸಲಷ್ಟೇ ಶಕ್ತರಾದರು. ಬೂಮ್ರಾ ಶೂನ್ಯಕ್ಕೆ ಔಟಾಗಿದ್ದು, ಸಿರಾಜ್ 1 (ನಾಟ್ಔಟ್) ರನ್ ಗಳಿಸಿದರು.
-
Shardul Thakur's entertaining knock comes to an end on 57.
— BCCI (@BCCI) September 2, 2021 " class="align-text-top noRightClick twitterSection" data="
Live - https://t.co/OOZebPnBZU #ENGvIND pic.twitter.com/eFVovn3Wvb
">Shardul Thakur's entertaining knock comes to an end on 57.
— BCCI (@BCCI) September 2, 2021
Live - https://t.co/OOZebPnBZU #ENGvIND pic.twitter.com/eFVovn3WvbShardul Thakur's entertaining knock comes to an end on 57.
— BCCI (@BCCI) September 2, 2021
Live - https://t.co/OOZebPnBZU #ENGvIND pic.twitter.com/eFVovn3Wvb
ಟಾಸ್ ಗೆದ್ದ ನಂತರ ಅತ್ಯದ್ಭುತವಾಗಿ ಬೌಲಿಂಗ್ ಮಾಡಿದ ಆತಿಥೇಯರು, ಭಾರತೀಯ ಬ್ಯಾಟ್ಸ್ಮನ್ಗಳನ್ನು ಕಟ್ಟಿಹಾಕುವಲ್ಲಿ ಸಫಲರಾದರು. ರಾಬಿನ್ಸನ್ 3, ಕ್ರಿಸ್ ವೋಕ್ಸ್ 4, ಕ್ರೇಗ್ ಓವರ್ಟನ್ ಹಾಗೂ ಜೇಮ್ಸ್ ಆ್ಯಂಡರ್ಸನ್ ತಲಾ ಒಂದು ವಿಕೆಟ್ ಪಡೆದರು.
ಭಾರತ ಆಲೌಟ್ ಆದ ಬಳಿಕ ಮೊದಲ ಇನ್ನಿಂಗ್ಸ್ ಶುರು ಮಾಡಿದ ಇಂಗ್ಲೆಂಡ್ ತಂಡ ಆದಷ್ಟು ಬೇಗ ಮೂರು ವಿಕೆಟ್ ಕಳೆದುಕೊಂಡಿತು. ಬೂಮ್ರಾ ಕೇವಲ 4.5 ಓವರ್ಗಳಲ್ಲಿ 14 ರನ್ ನೀಡಿ 2 ವಿಕೆಟ್ ಪಡೆದುಕೊಂಡರು. ಇದರ ಬೆನ್ನಲ್ಲೇ ಉಮೇಶ್ ಯಾದವ್ ಕ್ಯಾಪ್ಟನ್ ರೂಟ್ ವಿಕೆಟ್ ಪಡೆದು ಗಮನ ಸೆಳೆದರು.
-
We bowl India out for 191 in the first innings 👏
— England Cricket (@englandcricket) September 2, 2021 " class="align-text-top noRightClick twitterSection" data="
Scorecard/Clips: https://t.co/HBX3tgrqlr
🏴 #ENGvIND 🇮🇳 pic.twitter.com/VTdW25bXfU
">We bowl India out for 191 in the first innings 👏
— England Cricket (@englandcricket) September 2, 2021
Scorecard/Clips: https://t.co/HBX3tgrqlr
🏴 #ENGvIND 🇮🇳 pic.twitter.com/VTdW25bXfUWe bowl India out for 191 in the first innings 👏
— England Cricket (@englandcricket) September 2, 2021
Scorecard/Clips: https://t.co/HBX3tgrqlr
🏴 #ENGvIND 🇮🇳 pic.twitter.com/VTdW25bXfU
ರೋರಿ ಬರ್ನ್ಸ್ 11 ರನ್ ಗಳಿಸಿ ಔಟಾದರೆ, ಹಸೀಬ್ ಹಮೀದ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ಜೋ ರೂಟ್ (21ರನ್) ಗಳಿಸಿ ವಿಕೆಟ್ ಒಪ್ಪಿಸಿದರು. ಸದ್ಯ ಡೇವಿಡ್ ಮಲನ್ (26) ಹಾಗೂ ಓವರ್ಟನ್(1) ಕಣದಲ್ಲಿದ್ದು, ಇಂಗ್ಲೆಂಡ್ ತಂಡ 3 ವಿಕೆಟ್ ನಷ್ಟಕ್ಕೆ ಒಟ್ಟು 53ರನ್ ಗಳಿಸಿದ್ದು, ಇನ್ನು 138ರನ್ಗಳ ಹಿನ್ನಡೆಯಲಿದೆ.
ಇದನ್ನೂ ಓದಿ: ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್ನಿಂದ ಆರ್.ಅಶ್ವಿನ್ ಕೈಬಿಟ್ಟಿದ್ದಕ್ಕೆ ಆಕ್ರೋಶ: ಯಾರು, ಏನಂದ್ರು? ಇಲ್ಲಿದೆ ನೋಡಿ..