ಅಹಮದಾಬಾದ್: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭರ್ಜರಿ ಗೆಲುವು ಸಾಧಿಸಿ ದಾಖಲೆ ನಿರ್ಮಾಣ ಮಾಡಿದ್ದ ಟೀಂ ಇಂಡಿಯಾ, ಇದೀಗ 5 ಪಂದ್ಯಗಳ ಟಿ-20 ಕ್ರಿಕೆಟ್ ಸರಣಿಯನ್ನು ಸಹ ಗೆದ್ದು ಬೀಗಿದೆ. ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ 36 ರನ್ಗಳ ಗೆಲುವು ದಾಖಲಿಸಿ ಪ್ರಶಸ್ತಿಗೆ ಮುತ್ತಿಕ್ಕಿದೆ.
ಟಿ-20 ಸರಣಿಯನ್ನ 2-3 ರಿಂದ ಸೋತ ಬಳಿಕ ಇಂಗ್ಲೆಂಡ್ ತಂಡದ ನಾಯಕ ಇಯಾನ್ ಮಾರ್ಗನ್ ಪ್ರತಿಕ್ರಿಯಿಸಿದ್ದು, ಟೀಮ್ ಇಂಡಿಯಾ ಎಲ್ಲಾ ವಿಭಾಗದಲ್ಲೂ ಅತ್ಯುತ್ತಮ ಪ್ರದರ್ಶನ ನೀಡಿದೆ. ಈ ಗೆಲುವು ಅವರ ತಂಡಕ್ಕೆ ಅರ್ಹ ಜಯವಾಗಿದೆ ಎಂದಿದ್ದಾರೆ.
"ಭಾರತವು ಅರ್ಹ ಗೆಲುವನ್ನು ಪಡೆದಿದೆ. ಈ ಸರಣಿಯಲ್ಲಿ ನಾವು ಬಹಳ ಕಲಿತಿದ್ದವೆ. ಈ ಪಂದ್ಯದಲ್ಲಿ ನಮ್ಮ ಹಿನ್ನಡೆಗೆ ಮಧ್ಯಮ ಕ್ರಮಾಂಕದ ವೈಫಲ್ಯವೇ ಕಾರಣವಾಗಿದೆ." ಎಂದು ಮಾರ್ಗನ್ ಹೇಳಿದ್ದಾರೆ.
"ಪ್ರಬಲ ಭಾರತೀಯ ತಂಡದ ವಿರುದ್ಧ ಆಡುವುದು ಒಂದು ಅದ್ಭುತ. ಈ ಸರಣಿಯಲ್ಲಿ ನಾವು ಉತ್ತಮ ಕ್ರಿಕೆಟ್ ಆಡಿದ್ದೇವೆ, ನಮ್ಮ ಸಾಮರ್ಥ್ಯ ಮೀರಿ ಆಡಿದ್ದೇವೆ, ಆದರೆ ಇಂದು ನಮ್ಮ ದಿನವಲ್ಲ." ಎಂದು ಅವರು ಹೇಳಿದರು.
ಓದಿ : ಇಂಗ್ಲೆಂಡ್ ಮೇಲೆ ಭಾರತದ ಸವಾರಿ: 3-2 ಅಂತರದಿಂದ ಟಿ-20 ಸರಣಿ ಗೆದ್ದ ಕೊಹ್ಲಿ ಪಡೆ
ಪವರ್-ಪ್ಲೇ ಓವರ್‌ಗಳಲ್ಲಿ ಲೆಗ್ ಸ್ಪಿನ್ನರ್ ಆದಿಲ್ ರಶೀದ್ ಉತ್ತಮ ಬೌಲಿಂಗ್ ಮಾಡಿದರು. ಅದು ನಮ್ಮ ತಂಡಕ್ಕೆ ಪ್ಲಸ್ ಪಾಯಿಂಟ್ ಆಗಿತ್ತು. ಹೊಸ ಚಂಡಿನಲ್ಲಿ ರಶೀದ್ ಬೌಲಿಂಗ್ ಅದ್ಭುತವಾಗಿತ್ತು. ನಾವು ಗೆದ್ದ ಎರಡು ಪಂದ್ಯಗಳಲ್ಲಿ ಟಾಪ್ ಆರ್ಡರ್ ಉತ್ತಮವಾಗಿದ್ದು, ಜೇಸನ್ ರಾಯ್ ಮತ್ತು ಜೋಸ್ ಬಟ್ಲರ್ ತಂಡಕ್ಕೆ ಉತ್ತಮ ಕೊಡುಗೆ ನೀಡಿದ್ದರು ಎಂದರು.