ಹೈದರಾಬಾದ್ : ಭಾರತ ಮತ್ತು ಇಂಗ್ಲೆಂಡ್ ಮೊದಲ ಟೆಸ್ಟ್ ಪಂದ್ಯ ಎಂ ಎಂ ಚಿದಂಬರಂ ಸ್ಟೇಡಿಯಂನಲ್ಲಿ ಇಂದು ಆರಂಭವಾಗಿದೆ. ಟಾಸ್ ಗೆದ್ದ ರೂಟ್ ನೇತೃತ್ವದ ಆಂಗ್ಲ ಪಡೆ ಬ್ಯಾಟಿಂಗ್ ಆಯ್ದುಕೊಂಡಿದೆ.
-
We win the toss and will bat first! 🦁🦁🦁#INDvENG
— England Cricket (@englandcricket) February 5, 2021 " class="align-text-top noRightClick twitterSection" data="
">We win the toss and will bat first! 🦁🦁🦁#INDvENG
— England Cricket (@englandcricket) February 5, 2021We win the toss and will bat first! 🦁🦁🦁#INDvENG
— England Cricket (@englandcricket) February 5, 2021
ಕೋವಿಡ್-19ನಿಂದಾಗಿ ಒಂದು ವರ್ಷ ಸುದೀರ್ಘ ವಿರಾಮದ ನಂತರ ಭಾರತದಲ್ಲಿ ಆಡುತ್ತಿರುವ ಅಂತಾರಾಷ್ಟ್ರೀಯ ಕ್ರಿಕೆಟ್ನ ಮೊದಲ ಸರಣಿ ಇದಾಗಿದೆ. ಹಾಗಾಗಿ, ಸಹಜವಾಗಿಯೇ ಎಲ್ಲರಲ್ಲೂ ಕುತೂಹಲ ಕೆರಳಿಸಿದೆ. ಈ ಸರಣಿ ಎಲ್ಲಾ ಸರಣಿಗಿಂತಲೂ ದೊಡ್ಡದಾಗಿರಲಿದೆ ಅಂತಾ ಕ್ರಿಕೆಟ್ ಪಂಡಿತರು ಹೇಳುತ್ತಿದ್ದಾರೆ. ಹೀಗಾಗಿ, ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ನೇತೃತ್ವದ ತಂಡಗಳ ನಡುವೆ ರೋಚಕತೆ ಸೃಷ್ಟಿಯಾಗಿದೆ.
-
1st Test. India XI: R Sharma, S Gill, C Pujara, V Kohli, A Rahane, R Pant, W Sundar, R Ashwin, I Sharma, J Bumrah, S Nadeem https://t.co/VJF6Q6jMis #INDvENG @Paytm
— BCCI (@BCCI) February 5, 2021 " class="align-text-top noRightClick twitterSection" data="
">1st Test. India XI: R Sharma, S Gill, C Pujara, V Kohli, A Rahane, R Pant, W Sundar, R Ashwin, I Sharma, J Bumrah, S Nadeem https://t.co/VJF6Q6jMis #INDvENG @Paytm
— BCCI (@BCCI) February 5, 20211st Test. India XI: R Sharma, S Gill, C Pujara, V Kohli, A Rahane, R Pant, W Sundar, R Ashwin, I Sharma, J Bumrah, S Nadeem https://t.co/VJF6Q6jMis #INDvENG @Paytm
— BCCI (@BCCI) February 5, 2021
ಆಸ್ಟ್ರೇಲಿಯಾ ವಿರುದ್ಧ ಐತಿಹಾಸಿಕ ಸರಣಿ ಗೆಲುವಿನ ನಂತರ ಮತ್ತೊಂದು ಸರಣಿ ಗೆಲುವಿನ ಹುಮ್ಮಸ್ಸಿನಲ್ಲಿರುವ ಭಾರತ, ಈಚೆಗೆಷ್ಟೇ ಲಂಕಾದ ಎದುರು ಅದ್ಭುತ ಪ್ರದರ್ಶನ ತೋರಿ 2-0 ಸರಣಿ ವಶಪಡಿಸಿಕೊಂಡ ಇಂಗ್ಲೆಂಡ್ ವಿರುದ್ಧ ಇಂದು ತಮ್ಮ ಹೋರಾಟ ಆರಂಭಿಸಲಿದೆ.
ಇತ್ತ ನಾಯಕ ಜೋ ರೂಟ್ಗೆ 100ನೇ ಪಂದ್ಯ ಇದಾಗಿದೆ. ಮತ್ತೊಂದು ವಿಶೇಷ ಅಂದ್ರೇ ರೂಟ್ ಟೆಸ್ಟ್ಗೆ ಪದಾರ್ಪಣೆ ಮಾಡಿದ್ದು, ಕೂಡ ಭಾರತದ ಎದುರೇ.. ಈಗ ನೂರನೇ ಪಂದ್ಯವನ್ನೂ ಟೀಂ ಇಂಡಿಯಾ ಎದುರೇ ಆಡುತ್ತಿದ್ದಾರೆ.
ಓದಿ : ಯಾರಿಗೆ ಡಬ್ಲ್ಯೂಟಿಸಿ ಫೈನಲ್ ಟಿಕೆಟ್? ತವರಿನಲ್ಲಿ ಸೋಲಿಲ್ಲದ ಸರದಾರನಿಗೆ ಆಂಗ್ಲರು ಹಾಕ್ತಾರಾ ಬ್ರೇಕ್?
ಭಾರತ: ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ (ಉಪನಾಯಕ), ರೋಹಿತ್ ಶರ್ಮಾ, ಶುಭಮನ್ ಗಿಲ್, ಚೇತೇಶ್ವರ ಪೂಜಾರ, ರಿಷಬ್ ಪಂತ್ (ಕೀಪರ್), ರವಿಚಂದ್ರನ್ ಅಶ್ವಿನ್, ಜಸ್ಪ್ರಿತ್ ಬುಮ್ರಾ, ಇಶಾಂತ್ ಶರ್ಮಾ, ವಾಷಿಂಗ್ಟನ್ ಸುಂದರ್, ಶಹಬಾಜ್ ನದೀಮ್.
ಇಂಗ್ಲೆಂಡ್: ಜೋ ರೂಟ್ (ನಾಯಕ), ಡೊಮಿನಿಕ್ ಸಿಬ್ಲಿ, ರೋರಿ ಬರ್ನ್ಸ್, ಪೋಪ್, ಡಾನ್ ಲಾರೆನ್ಸ್, ಬೆನ್ ಸ್ಟೋಕ್ಸ್, ಜೋಸ್ ಬಟ್ಲರ್ (ಕೀಪರ್), ಜೋಫ್ರಾ ಆರ್ಚರ್, ಜೇಮ್ಸ್ ಆ್ಯಂಡರ್ಸನ್, ಡೊಮಿನಿಕ್ ಬೆಸ್, ಜ್ಯಾಕ್ ಲೀಚ್.