ETV Bharat / sports

Ind V/s Eng Test : ಟೀಂ ಇಂಡಿಯಾಗೆ ಐತಿಹಾಸಿಕ ಗೆಲುವು

ಲಾರ್ಡ್ಸ್​ನಲ್ಲಿ ನಡೆದ 2ನೇ ಟೆಸ್ಟ್​ ಪಂದ್ಯದಲ್ಲಿ 272 ರನ್​ಗಳ ಟಾರ್ಗೆಟ್​ ಬೆನ್ನತ್ತಿದ ಇಂಗ್ಲೆಂಡ್​ ಭಾರತೀಯ ವೇಗಿಗಳ ದಾಳಿಗೆ ಕಂಗೆಟ್ಟು ಸೋಲನ್ನು ಅನುಭವಿಸಿದೆ.

ಎರಡನೇ ಟೆಸ್ಟ್​ ಪಂದ್ಯದಲ್ಲಿ ಟೀಂ ಇಂಡಿಯಾಗೆ ರೋಚಕ ಜಯ

author img

By

Published : Aug 16, 2021, 11:10 PM IST

Updated : Aug 17, 2021, 3:06 PM IST

ಲಂಡನ್​​: ಲಾರ್ಡ್ಸ್​ನಲ್ಲಿ ನಡೆದ 2ನೇ ಟೆಸ್ಟ್​ ಪಂದ್ಯದಲ್ಲಿ 272 ರನ್​ಗಳ ಟಾರ್ಗೆಟ್​ ಬೆನ್ನತ್ತಿದ ಇಂಗ್ಲೆಂಡ್​ ಭಾರತೀಯ ಬೌಲರ್​ಗಳ ದಾಳಿಗೆ ಕಂಗೆಟ್ಟು 151ರನ್​ಗಳ ಸೋಲು ಅನುಭವಿಸಿದೆ.

ಐದು ಪಂದ್ಯಗಳ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಭಾರತ ತಂಡ ರೋಚಕ ಗೆಲುವು ಸಾಧಿಸಿದ್ದು, ಈಗ 1-0 ಮುನ್ನಡೆಯಲ್ಲಿದೆ.

ಎರಡನೇ ಟೆಸ್ಟ್ ಪಂದ್ಯದಲ್ಲಿ ಸಂಕಷ್ಟದಲ್ಲಿದ್ದ ಟೀಂ ಇಂಡಿಯಾಗೆ ಸೋಮವಾರ (ಐದನೇ ದಿನ) ಮೊಹಮ್ಮದ್ ಶಮಿ 56 ರನ್ (ನಾಟ್ ಔಟ್​​) ಮತ್ತು ಜಸ್‌ಪ್ರೀತ್ ಬುಮ್ರಾ 34 ರನ್ (ನಾಟ್​ಔಟ್​​) ಆಸರೆ ನೀಡಿ ಮತ್ತೆ ಭಾರತ ತಂಡ ಪುಟಿದೇಳುವಂತೆ ಮಾಡಿದ್ದರು. ಈ ಮೂಲಕ 298ರನ್​ಗಳಿಸಿದ ಭಾರತ ಇಂಗ್ಲೆಂಡ್​ಗೆ 272 ರನ್ ಗುರಿ ನೀಡಿತು.

ಇದಾದ ಬಳಿಕ ಮಿಂಚಿದ ಭಾರತದ ಬೌಲರ್​​ಗಳ 51.5 ಓವರ್​ಗಳಲ್ಲಿ 120 ರನ್​ಗೆ ಇಂಗ್ಲೆಂಡ್​ ಅನ್ನು ಆಲ್​ ಔಟ್ ಮಾಡಿದ್ದು, ಡ್ರಾ ಆಗುವ ಸಾಧ್ಯತೆಗಳಿದ್ದ ಪಂದ್ಯದಲ್ಲಿ ಭಾರತ ತಂಡ 151 ರನ್​ಗಳ ಅಂತರದಲ್ಲಿ ಗೆಲುವಿನ ನಗೆ ಬೀರಿತು.

ಭಾರತ ಪರ ಮೊಹಮ್ಮದ್ ಸಿರಾಜ್ 4, ಜಸ್‌ಪ್ರೀತ್ ಬೂಮ್ರಾ 3, ಇಶಾಂತ್ ಶರ್ಮಾ 2, ಮೊಹಮ್ಮದ್ ಶಮಿ ಒಂದು ವಿಕೆಟ್ ಪಡೆದು ಮಿಂಚಿದರು.

Last Updated : Aug 17, 2021, 3:06 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.