ಚೆನ್ನೈ: ಚೆಂಡಿಗೆ ಲಾಲಾರಸ ಬಳಸದಂತೆ ತಡೆಯಲು ಜಾರಿಗೆ ತಂದಿರುವ ಕೋವಿಡ್-19 ನಿಯಮಗಳಿಂದ ಚಿದಂಬರಂ ಕ್ರೀಡಾಗಂಣಗಳಂತಹ ಫ್ಲಾಟ್ ಪಿಚ್ಗಳಲ್ಲಿ ಬೌಲಿಂಗ್ ಮಾಡುವುದು ತುಂಬಾ ಕಠಿಣ ಎಂದು ಭಾರತದ ವೇಗಿ ಜಸ್ಪ್ರಿತ್ ಬುಮ್ರಾ ಹೇಳಿದರು.
ತವರಿನಲ್ಲಿ ಆಡುತ್ತಿರುವ ಮೊದಲ ಟೆಸ್ಟ್ ಪಂದ್ಯದ ದಿನದಾಂತ್ಯದ ಬಳಿಕ ಮಾತನಾಡಿದ ಬುಮ್ರಾ, ಚೆಂಡಿನ ಗ್ರಿಪ್ಗೆ ಲಾಲಾರಸ ಬಳಸಬಾರದು. ಪಿಚ್ ಚಪ್ಪಟೆಯಾಗಿದ್ದರೆ ಬೌನ್ಸಿಂಗ್ ಕಷ್ಟ. ಚೆಂಡು ಬಳಸಿದಂತೆಲ್ಲಾ ಸ್ವಲ್ಪ ಮಟ್ಟಿಗೆ ಮೃದುವಾಗುತ್ತದೆ. ಹೀಗಾಗಿ ಇರುವ ಸೀಮಿತ ಆಯ್ಕೆಗಳೊಂದಿಗೆ ಚೆಂಡನ್ನು ಹೊಳಪಿಸಲು ಪ್ರಯತ್ನಿಸುತ್ತೇವೆ. ಆದರೆ ತುಂಬಾ ಕಷ್ಟ ಎಂದರು.
ಇದನ್ನೂ ಓದಿ...ಸಿಬ್ಲಿ-ರೂಟ್ ಬೊಂಬಾಟ್ ಆಟಕ್ಕೆ ಭಾರತ ಸುಸ್ತು...ಮೊದಲ ದಿನದಾಂತ್ಯಕ್ಕೆ ಇಂಗ್ಲೆಂಡ್ 263ರನ್
ಲಾಲಾರಸ ಬಳಸದ ಕಾರಣ ಚೆಂಡು ಕೈಯಿಂದ ಜಾರಿ ಹೋಗುತ್ತದೆ. ಕೆಲವೊಮ್ಮೆ ಬೆವರಿನೊಂದಿಗೆ ಚೆಂಡನ್ನು ಗ್ರಿಪ್ಗೆ ಪ್ರಯತ್ನಸಲಾಗುತ್ತದೆ. ಆದರೆ ಅದು ನಮ್ಮ ಉದ್ದೇಶ ಪೂರೈಸುವುದಿಲ್ಲ. ಸಾಧ್ಯವಾದಷ್ಟು ನಮ್ಮ ಅನುಕೂಲಕ್ಕೆ ಎಷ್ಟೇ ಬಳಸಿಕೊಂಡರೂ ನಿಯಂತ್ರಣಕ್ಕೆ ಬರುತ್ತಿಲ್ಲ. ಪ್ರಸ್ತುತ ಸಂದರ್ಭಗಳಲ್ಲಿ ಫ್ಲಾಟ್ ಪಿಚ್ಗಳಲ್ಲಿ ಬೌಲಿಂಗ್ ಮಾಡುವುದೇ ದೊಡ್ಡ ಸವಾಲು ಎಂದರು.
ಭಾರತದ ಬೌಲರ್ಗಳು ಇಂಗ್ಲೆಂಡ್ ಬ್ಯಾಟ್ಸ್ಮನ್ಗಳ ವಿಕೆಟ್ ಕಬಳಿಸಲು ಕೊನೆಯವರೆಗೂ ಹೆಣಗಾಡಿದರು. ಇಂಗ್ಲೆಂಡ್ ಆಟಗಾರರು ಆರಂಭದಲ್ಲಿ ಸಾಲಿಡ್ ಪ್ರದರ್ಶನ ತೋರಿದರೂ ತಂಡದ ಮೊತ್ತ 63ಕ್ಕೆ ಬಂದಾಗ 2 ವಿಕೆಟ್ ಪತನಗೊಂಡವು. ಆದಾದ ನಂತರ ಭಾರತದ ಬೌಲರ್ಗಳು ವಿಕೆಟ್ ಕಬಳಿಸಲು ಹೆಣಗಾಡಿದರು. ಮೊದಲ ದಿನದ ಕಡೆಯ ಓವರ್ನಲ್ಲಿ ಬುಮ್ರಾ ಕೊನೆಗೂ ವಿಕೆಟ್ ಪಡೆದರು.
ಬುಮ್ರಾ ವಿದೇಶಗಳಲ್ಲಿ ಆಡಿದ 17 ಟೆಸ್ಟ್ಗಳಲ್ಲಿ 79 ವಿಕೆಟ್ ಕಿತ್ತಿದ್ದಾರೆ. ತವರಿನಲ್ಲಿ ಆಡುತ್ತಿರುವ ಮೊದಲ ಟೆಸ್ಟ್ನ ಪ್ರಥಮ ಇನ್ನಿಂಗ್ಸ್ನಲ್ಲಿ 2 ವಿಕೆಟ್ ಕಬಳಿಸಿಕೊಂಡಿದ್ದಾರೆ. ಡಾಮಿನಿಕ್ ಸಿಬ್ಲಿ ಮತ್ತು ಜೋ ರೂಟ್ ಅವರ ಸೊಗಸಾದ 200 ರನ್ಗಳ ಜೊತೆಯಾಟದಿಂದ ಇಂಗ್ಲೆಂಡ್ ಮೊದಲ ದಿನದ ಅಂತ್ಯಕ್ಕೆ 3 ವಿಕಟ್ ಕಳೆದುಕೊಂಡು 263 ರನ್ ಗಳಿಸಿದ್ದು, ರೂಟ್ ಅಜೇಯರಾಗಿ (128*) ಎರಡನೇ ದಿನಕ್ಕೆ ಆಟ ಕಾಯ್ದುಕೊಂಡಿದ್ದಾರೆ.