ಪುಣೆ: ಭಾರತ ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ, ಎರಡು ಪಂದಗಳು ಮುಕ್ತಾಯವಾಗಿದ್ದು, ಎರಡು ತಂಡಗಳು ತಲಾ ಒಂದು ಪಂದ್ಯ ಗೆದ್ದು ಸರಣಿ ಸಮಬಲ ಸಾಧಿಸಿವೆ. ಎರಡನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡ 6 ವಿಕೆಟ್ಗಳ ಭರ್ಜರಿ ಗೆಲವು ಸಾಧಿಸಿತ್ತು.
ಪಂದ್ಯದ ನಂತರ ಮಾತನಾಡಿದ ಟೀಮ್ ಇಂಡಿಯಾ ವೇಗಿ ಪ್ರಸಿದ್ಧ್ ಕೃಷ್ಣ, ನಮ್ಮ ತಂಡ ಉತ್ತಮವಾಗಿ ಬೌಲಿಂಗ್ ಮಾಡಬಹುದಿತ್ತು ಎಂದು ಅಭಿಪ್ರಾಯ ಪಟ್ಟಿದ್ದಾರೆ.
ನಾವು ನಮ್ಮದೇ ಆದ ಯೋಜನೆಗಳನ್ನು ಹೊಂದಿದ್ದೇವೆ, ಅವುಗಳನ್ನು ಹೇಗೆ ಕಾರ್ಯಗತಗೊಳಿಸಬೇಕು ಎನ್ನುವುದರಲ್ಲಿ ಎಡವಿದೆವು. ನಮ್ಮ ತಂಡ ಅತ್ಯುತ್ತಮ ಪ್ರಯತ್ನ ಮಾಡಿದೆ. ಇಂಗ್ಲೆಂಡ್ ಈ ಪಂದ್ಯದಲ್ಲಿ ಉತ್ತಮವಾಗಿ ಆಡಿದೆ. ಮುಂದಿನ ಪಂದ್ಯದಲ್ಲಿ ನಮ್ಮ ತಂಡ ಶೇಕಡಾ 100 ಸುಧಾರಣೆಯೊಂದಿಗೆ ಕಣಕ್ಕಿಳಿಯಲಿದೆ ಎಂದು ಟೀಮ್ ಇಂಡಿಯಾ ವೇಗಿ ಪ್ರಸಿದ್ಧ್ ಕೃಷ್ಣ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.
ತಮ್ಮ ಕೊನೆಯ ಎರಡು ಏಕದಿನ ಪಂದ್ಯಗಳಲ್ಲಿ ತಮ್ಮದೇ ಬೌಲಿಂಗ್ ಬಗ್ಗೆ ಮಾತನಾಡಿ, "ವೈಯಕ್ತಿಕವಾಗಿ ನಾನು ಉತ್ತಮ ಆರಂಭ ಒದಗಿಸಲು ಬಯಸುತ್ತೇನೆ. ಹೊಸ ಚೆಂಡಿನೊಂದಿಗೆ ಬೌಲಿಂಗ್ ಅನ್ನು ಸುಧಾರಿಸಲು ನಾನು ಬಯಸುತ್ತೇನೆ." ಎಂದು ಹೇಳಿದರು.
ಓದಿ : ಭಾರತ-ಇಂಗ್ಲೆಂಡ್ ನಡುವಿನ ಒಂದೇ ಪಂದ್ಯದಲ್ಲಿ ಹಲವು ದಾಖಲೆ ನಿರ್ಮಾಣ.. ಕಂಪ್ಲೀಟ್ ಸ್ಟೋರಿ
ಅಂಪೈರಿಂಗ್ ನಿರ್ಧಾರದ ಬಗ್ಗೆ ಉತ್ತರಿಸಿದ ಪ್ರಸಿದ್ಧ ಕೃಷ್ಣ, "ನಾವು ನಿರ್ಧಾರ ತೆಗೆದುಕೊಳ್ಳುವವರಲ್ಲ, ಸರಿಯಾದ ವ್ಯಕ್ತಿ ಅಲ್ಲಿ ಕುಳಿತಿದ್ದರು, ಅವರು ಏನು ಮಾಡಿದರೂ, ನಾವು ಆ ಬಗ್ಗೆ ಪ್ರತಿಕ್ರಿಯಿಸಲು ಯಾರು" ಎಂದು ಹೇಳಿದರು.
ಶುಕ್ರವಾರ ನಡೆದ ಪಂದ್ಯದಲ್ಲಿ ಭಾರತ ನೀಡಿದ 337 ರನ್ ಗುರಿಯನ್ನ ಬೆನ್ನಟ್ಟಿದ ಇಂಗ್ಲೆಂಡ್, 43.3 ಓವರ್‌ಗಳಲ್ಲೇ ನಾಲ್ಕು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ಇದರೊಂದಿಗೆ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-1ರ ಅಂತರದ ಸಮಬಲ ದಾಖಲಿಸಿದೆ.