ETV Bharat / sports

ಅಂತಿಮ ಹಣಾಹಣೆಯಲ್ಲಿ ಮತ್ತೆ ಮೋಡಿ ಮಾಡಿದ ಅಕ್ಸರ್ ಪಟೇಲ್​; ಊಟದ ಸಮಯಕ್ಕೆ ಇಂಗ್ಲೆಂಡ್ 74/3 - ಭಾರತ ಮತ್ತು ಆಂಗ್ಲರ ನಡುವಿನ ಟೆಸ್ಟ್​

ಭಾರತ ಮತ್ತು ಆಂಗ್ಲರ ನಡುವೆ ಕೊನೆಯ ಹಾಗೂ ಅಂತಿಮ ಟೆಸ್ಟ್​ ಆರಂಭವಾಗಿದ್ದು, ಎದುರಾಳಿ ತಂಡ ಊಟದ ಸಮಯಕ್ಕೆ ಮೂರು ವಿಕೆಟ್​ ಕಳೆದುಕೊಂಡು ಕೇವಲ 74 ರನ್​ ಕಲೆ ಹಾಕಿದೆ. ಇನ್ನು ಟೀಂ ಇಂಡಿಯಾದ ಬೌಲರ್​ಗಳು ಆತಿಥೇಯ ತಂಡಕ್ಕೆ ಆರಂಭದಲ್ಲೇ ಆಘಾತ ನೀಡುವ ಮೂಲಕ ಆಕ್ರಮಣಕಾರಿ ಆಟಕ್ಕೆ ಬ್ರೇಕ್​ ಹಾಕಿದ್ದಾರೆ. ಅಕ್ಸರ್ ಪಟೇಲ್ ಈ ಮೊದಲಿನ ಬೌಲಿಂಗ್​ ದಾಳಿಯನ್ನೇ ಇಲ್ಲಿಯೂ ಮುಂದುವರೆಸಿದ್ದಾರೆ.

IND vs ENG, 4th Test: Axar Patel continues good form, England 74/3 at lunch on Day 1
ಅಂತಿಮ ಟೆಸ್ಟ್​
author img

By

Published : Mar 4, 2021, 12:53 PM IST

ಗುಜರಾತ್ (ಅಹಮದಾಬಾದ್​) : ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾರತ ಮತ್ತು ಆಂಗ್ಲರ ನಡುವೆ ಅಂತಿಮ ಹಾಗೂ ಕೊನೆಯ ಟೆಸ್ಟ್​ ನಡೆಯುತ್ತಿದ್ದು, ಟಾಸ್​ ಗೆದ್ದ ಆತಿಥೇಯ ತಂಡದ ನಾಯಕ ಜೋ ರೂಟ್​ ಬ್ಯಾಟಿಂಗ್​​ ಆರಿಸಿಕೊಳ್ಳುವ ಮೂಲಕ ಆರಂಭಿಕ ಆಘಾತ ಎದುರಿಸಿದ್ದಾರೆ.

ಟೀಂ ಇಂಡಿಯಾದ ಮಾರಕ ಬೌಲಿಂಗ್​ ದಾಳಿಗೆ ಮೊದಲ ದಿನದಾಟದ ಆರಂಭದಲ್ಲೇ ವಿರೋಧಿ ತಂಡದ ದಾಂಡಿಗರು ಮೂರು ವಿಕೆಟ್​ ಒಪ್ಪಿಸಿ ಒತ್ತಡಕ್ಕೆ ಸಿಲುಕಿಕೊಂಡಿದ್ದಾರೆ. ಒತ್ತಡದಲ್ಲಿರುವ ಆಂಗ್ಲರು ಟೀಂ ಇಂಡಿಯಾದ ಬೌಲರ್​ಗಳನ್ನು ಬಹಳ ಎಚ್ಚರಿಕೆಯಿಂದ ಎದುರಿಸುತ್ತಿದ್ದಾರೆ.

ಊಟದ ಸಮಯಕ್ಕೆ ಇದುವರೆಗೆ ಭಾರತ ಬೌಲ್​ ಮಾಡಿರುವ 25 ಓವರ್​ಗಳಲ್ಲಿ ಆತಿಥೇಯ ಇಂಗ್ಲೆಂಡ್ ತಂಡ 74ಕ್ಕೆ 3ಕ್ಕೆ ವಿಕೆಟ್​ ಕಳೆದುಕೊಳ್ಳುವ ಮೂಲಕ ಆರಂಭಿಕ ಆಘಾತ ಎದುರಿಸಿದೆ. ಜಾನಿ ಬೇರ್​ ಸ್ಟೋ 28 ಮತ್ತು ಬೆನ್​ ಸ್ಟೋಕ್ಸ್ 24 ರನ್ ಗಳಿಸಿ ಆಟ ಮುಂದುವರೆಸಿದ್ದಾರೆ.

ಇನ್ನು ಭಾರತದ ಪರ ಮತ್ತೊಮ್ಮೆ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿರುವ ಅಕ್ಸರ್ ಪಟೇಲ್ ಕೇವಲ 21 ರನ್​ ನೀಡಿ ಎರಡು ವಿಕೆಟ್​ ಪಡೆಯುವ ಮೂಲಕ ಮತ್ತೆ ಮೋಡಿ ಮಾಡಿದ್ದಾರೆ. ಟೀಂ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಕೂಡ ಆತಿಥೇಯ ತಂಡದ ನಾಯಕ ರೂಟ್ ಅವರ ವಿಕೆಟ್​ ಪಡೆದು ತಂಡದ ಆಕ್ರಮಣಕಾರಿ ಆಟಕ್ಕೆ ಬ್ರೇಕ್​ ಹಾಕಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.