ETV Bharat / sports

ಇಂಡೋ-ಆಂಗ್ಲೋ 3ನೇ ಟಿ-20.. ಎರಡೂ ತಂಡಕ್ಕೆ ಗೆಲುವೇ ಮಂತ್ರ.. ಕೆ ಎಲ್‌ ರಾಹುಲ್‌ಗೆ ಬೆಂಚ್‌!? - ಟೀಮ್​ ಇಂಡಿಯಾ

ಪಾಂಡ್ಯ 4 ಓವರ್‌ ಬೌಲ್‌ ಮಾಡುವಷ್ಟು ಫಿಟ್‌ ಆಗಿರುವುದು ಉತ್ತಮ ಬೆಳವಣಿಗೆ. ಇದರಿಂದಾಗಿ ಒಬ್ಬ ಹೆಚ್ಚುವರಿ ಬ್ಯಾಟ್ಸ್‌ಮನ್‌ನನ್ನು ಆಡಿಸಬಹುದು. ಯಜುವೇಂದ್ರ ಚಹಲ್‌ ಎರಡು ಪಂದ್ಯಗಳಲ್ಲಿ ಕೇವಲ 2 ವಿಕೆಟ್​ ಪಡೆದಿದ್ದು, 8 ಓವರ್​​ಗಳಲ್ಲಿ ಸುಮಾರು 60ಕ್ಕೂ ಹೆಚ್ಚು ರನ್ ಬಿಟ್ಟುಕೊಟ್ಟು ದುಬಾರಿಯಾಗಿದ್ದಾರೆ. ಅವರು ತಮ್ಮ ರಣತಂತ್ರ ಬದಲಿಸಿಕೊಳ್ಳಬೇಕಿದೆ..

IND vs ENG 3rd T-20:
IND vs ENG 3rd T-20:
author img

By

Published : Mar 16, 2021, 1:16 PM IST

ಅಹಮದಾಬಾದ್‌ : ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟಿ-20 ಸರಣಿಯ ಮೊದಲ ಪಂದ್ಯದಲ್ಲಿ ಆರಂಭಿಕ ಆಘಾತ ಅನುಭವಿಸಿದ್ದ ಟೀಂ​ ಇಂಡಿಯಾ, ಎರಡನೇ ಪಂದ್ಯದಲ್ಲಿ ಭರ್ಜರಿ ಕಮ್​ಬ್ಯಾಕ್​ ಮಾಡುವ ಮೂಲಕ, ಸರಣಿಯಲ್ಲಿ ಸಮಬಲ ಸಾಧಿಸಿದೆ. ಇಂದು ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ 3ನೇ ಟಿ20 ಪಂದ್ಯದಲ್ಲಿ ಕೊಹ್ಲಿ ಬಾಯ್ಸ್​ ಮತ್ತೊಮ್ಮೆ ಅಬ್ಬರಿಸುವ ಉತ್ಸಾಹದಲ್ಲಿದ್ದಾರೆ. 2ನೇ ಪಂದ್ಯದಲ್ಲಿ ದಿಟ್ಟ ಆಟವಾಡಿ ಗೆಲುವು ಒಲಿಸಿಕೊಂಡಿದ್ದ ಕೊಹ್ಲಿ ಪಡೆ, ಅದೇ ಧೈರ್ಯದೊಂದಿಗೆ ಸರಣಿಯಲ್ಲಿ ಮುನ್ನಡೆಯುವ ವಿಶ್ವಾಸದಲ್ಲಿದೆ.

ಮೊದಲ ಪಂದ್ಯದಲ್ಲಿ ಮೂರು ವಿಭಾಗಗಳಲ್ಲಿ ವೈಫಲ್ಯ ಕಂಡಿದ್ದ ಟೀಂ​ ಇಂಡಿಯಾ, 2ನೇ ಪಂದ್ಯದಲ್ಲಿ ಮೂರು ವಿಭಾಗಗಳಲ್ಲೂ ಸುಧಾರಿತ ಪ್ರದರ್ಶನ ತೋರಿತ್ತು. ಯುವ ಬ್ಯಾಟ್ಸ್‌ಮನ್‌ ಇಶಾನ್‌ ಕಿಶನ್‌ ಸೇರ್ಪಡೆಯಿಂದಾಗಿ ತಂಡದ ಬಲ ಮತ್ತಷ್ಟು ಹೆಚ್ಚಾಗಿತ್ತು. ಮೊದಲೆರಡು ಪಂದ್ಯಗಳಿಂದ ಹೊರಗುಳಿದಿದ್ದ ರೋಹಿತ್‌ ಶರ್ಮಾ ಇಂದಿನ ಪಂದ್ಯದಲ್ಲಿ ತಂಡಕ್ಕೆ ವಾಪಸಾಗುವ ನಿರೀಕ್ಷೆ ಇದೆ.

2 ಪಂದ್ಯಗಳಲ್ಲೂ ವೈಫಲ್ಯ ಕಂಡ ಕೆ ಎಲ್‌ ರಾಹುಲ್‌ ಹೊರ ಕೂರುವ ಸಾಧ್ಯತೆ ಇದೆ. ಇದನ್ನು ಹೊರತು ಪಡಿಸಿ ಭಾರತ ತಂಡದಲ್ಲಿ ಮತ್ತ್ಯಾವುದೇ ಬದಲಾವಣೆ ನಿರೀಕ್ಷೆ ಇಲ್ಲ. ವಿರಾಟ್‌ ಕೊಹ್ಲಿ ಲಯಕ್ಕೆ ಮರಳಿರುವುದು ಸಹಜವಾಗಿಯೇ ಎದುರಾಳಿಗಳಲ್ಲಿ ನಡುಕ ಹುಟ್ಟಿಸಿದೆ. ರಿಷಭ್‌ ಪಂತ್‌ ತಮ್ಮ ಸಾಮರ್ಥ್ಯಕ್ಕೆ ತಕ್ಕ ಆಟವಾಡುತ್ತಿದ್ದಾರೆ. ಸೂರ್ಯಕುಮಾರ್‌, ಹಾರ್ದಿಕ್‌ ಪಾಂಡ್ಯ ಫಿನಿಶರ್‌ಗಳ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಭಾರತದ ಬ್ಯಾಟಿಂಗ್‌ ಪಡೆಯೂ ಇಂಗ್ಲೆಂಡ್‌ನಷ್ಟೇ ಸದೃಢ ಹಾಗೂ ಅಪಾಯಕಾರಿಯಾಗಿದೆ.

ಮೂರನೇ ಟಿ-20 ಪಂದ್ಯದಲ್ಲಿ ಟೀಂ ಇಂಡಿಯಾದ ಹಿಟ್​ಮ್ಯಾನ್ ರೋಹಿತ್ ಶರ್ಮಾ ಕಮ್​ಬ್ಯಾಕ್​ ಮಾಡುವ ಸಾಧ್ಯತೆ ಇದೆ. ರೋಹಿತ್‌ಗೆ ಮೊದಲೆರಡು ಪಂದ್ಯಗಳಿಂದ ವಿಶ್ರಾಂತಿ ನೀಡಲಾಗಿತ್ತು. ರೋಹಿತ್ ಶರ್ಮಾ ತಂಡಕ್ಕೆ ಮರಳಿದರೆ ಟೀಂ​ ಇಂಡಿಯಾ ಪರ ಯಾರು ಇನ್ನಿಂಗ್ಸ್​ ಆರಂಭಿಸಬೇಕು ಎನ್ನುವುದು ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಓದಿ : ಇಂದು 3ನೇ ಟಿ-20 ಪಂದ್ಯ: ರೋಹಿತ್​ ಬಂದರೆ ಇವರ ಜೊತೆ ಇನ್ನಿಂಗ್ಸ್ ​ಆರಂಭಿಸೋರು ಯಾರು..?

ಮೊದಲ ಪಂದ್ಯದಲ್ಲಿ ಶಿಖರ್ ಧವನ್, ಕೆ.ಎಲ್ ರಾಹುಲ್ ಇನ್ನಿಂಗ್ಸ್​​ ಆರಂಭಿಸಿದ್ದರು. ಆದರೆ, ಈ ಜೋಡಿ ಹೇಳಿಕೊಳ್ಳುವಂತಹ ಆರಂಭ ನೀಡಿರಲಿಲ್ಲ. 2ನೇ ಪಂದ್ಯದಲ್ಲಿ ಧವನ್​ಗೆ ಕೊಕ್​ ನೀಡಿ, ಇಶಾನ್​ ಕಿಶನ್​ಗೆ ಅವಕಾಶ ನೀಡಲಾಗಿತ್ತು. ಸಿಕ್ಕ ಅವಕಾಶ ಸರಿಯಾಗಿ ಬಳಿಸಿದ್ದ ಕಿಶನ್​ ಅರ್ಧಶತಕ ಸಿಡಿಸಿ ಮಿಂಚಿದ್ದರು. ಎರಡು ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿರು ರಾಹುಲ್​ಗೆ ಇಂದಿನ ಪಂದ್ಯದಲ್ಲಿ ಮತ್ತೆ ಚಾನ್ಸ್​ ಸಿಗುತ್ತಾ ಎನ್ನುವುದೇ ಪ್ರಶ್ನೆ.

ಓದಿ : ಭಾರತ - ಇಂಗ್ಲೆಂಡ್ ಮುಂದಿನ​ ಟಿ-20 ಪಂದ್ಯಗಳ ಟಿಕೆಟ್​ ಹಣ ಮರುಪಾವತಿ: ಜಿಸಿಎ ನಿರ್ಧಾರ

ಪಾಂಡ್ಯ 4 ಓವರ್‌ ಬೌಲ್‌ ಮಾಡುವಷ್ಟು ಫಿಟ್‌ ಆಗಿರುವುದು ಉತ್ತಮ ಬೆಳವಣಿಗೆ. ಇದರಿಂದಾಗಿ ಒಬ್ಬ ಹೆಚ್ಚುವರಿ ಬ್ಯಾಟ್ಸ್‌ಮನ್‌ನನ್ನು ಆಡಿಸಬಹುದು. ಯಜುವೇಂದ್ರ ಚಹಲ್‌ ಎರಡು ಪಂದ್ಯಗಳಲ್ಲಿ ಕೇವಲ 2 ವಿಕೆಟ್​ ಪಡೆದಿದ್ದು, 8 ಓವರ್​​ಗಳಲ್ಲಿ ಸುಮಾರು 60ಕ್ಕೂ ಹೆಚ್ಚು ರನ್ ಬಿಟ್ಟುಕೊಟ್ಟು ದುಬಾರಿಯಾಗಿದ್ದಾರೆ. ಅವರು ತಮ್ಮ ರಣತಂತ್ರ ಬದಲಿಸಿಕೊಳ್ಳಬೇಕಿದೆ.

ಭುವನೇಶ್ವರ್‌, ಶಾರ್ದೂಲ್‌ ಹಾಗೂ ವಾಷಿಂಗ್ಟನ್‌ ಸುಂದರ್‌ ಕಳೆದ ಪಂದ್ಯದಲ್ಲಿ ಸಂಘಟಿತ ದಾಳಿನಡೆಸಿದ್ದರು. ಇಂದಿನ ಪಂದ್ಯದಲ್ಲೂ ಕೂಡ ಇದೇ ಸ್ಥಿರ ಪ್ರದರ್ಶನ ನೀಡಬೇಕಾಗಿದೆ. ಹಿಮ್ಮಡಿ ನೋವಿನಿಂದಾಗಿ 2ನೇ ಪಂದ್ಯದಿಂದ ಹೊರಗುಳಿದಿದ್ದ ಇಂಗ್ಲೆಂಡ್​ ವೇಗಿ ಮಾರ್ಕ್ ವುಡ್‌ ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ. ಕಳೆದ ಪಂದ್ಯದಲ್ಲಿ ಅವರ ಅನುಪಸ್ಥಿತಿ ತಂಡವನ್ನು ಬಹುವಾಗಿ ಕಾಡಿತ್ತು. ಜೇಸನ್‌ ರಾಯ್‌ ಎರಡೂ ಪಂದ್ಯಗಳಲ್ಲಿ ಆಕರ್ಷಕ ಆಟವಾಡಿದರೂ ಅರ್ಧಶತಕದಿಂದ ವಂಚಿತರಾಗಿದ್ದಾರೆ. ಇಂಗ್ಲೆಂಡ್‌ ತಂಡ ಮ್ಯಾಚ್‌ ವಿನ್ನರ್‌ಗಳಿಂದ ತುಂಬಿ ತುಳುಕುತ್ತಿದ್ದು, ಭಾರತ ಪ್ರಬಲ ಪೈಪೋಟಿ ಎದುರಿಸಲಿದೆ.

ಸಂಭವನೀಯ ತಂಡಗಳು
ಭಾರತ: ವಿರಾಟ್‌ ಕೊಹ್ಲಿ(ನಾಯಕ), ರೋಹಿತ್‌/ರಾಹುಲ್‌, ಇಶಾನ್‌ ಕಿಶನ್‌, ಶ್ರೇಯಸ್‌ ಅಯ್ಯರ್‌, ರಿಷಭ್‌ ಪಂತ್‌, ಸೂರ್ಯಕುಮಾರ್‌, ಹಾರ್ದಿಕ್‌ ಪಾಂಡ್ಯ, ವಾಷಿಂಗ್ಟನ್‌ ಸುಂದರ್‌, ಶಾರ್ದೂಲ್‌ ಠಾಕೂರ್‌, ಭುವನೇಶ್ವರ್‌ ಕುಮಾರ್‌, ಯುಜ್ವೇಂದ್ರ ಚಹಾಲ್.

ಇಂಗ್ಲೆಂಡ್‌: ಜೇಸನ್‌ ರಾಯ್‌, ಜೋಸ್‌ ಬಟ್ಲರ್‌, ಡೇವಿಡ್‌ ಮಲಾನ್‌, ಜಾನಿ ಬೇರ್‌ಸ್ಟೋವ್‌, ಇಯಾನ್‌ ಮೊರ್ಗನ್‌(ನಾಯಕ), ಬೆನ್‌ ಸ್ಟೋಕ್ಸ್‌, ಸ್ಯಾಮ್‌ ಕರ್ರನ್‌, ಕ್ರಿಸ್‌ ಜೋರ್ಡನ್‌, ಜೋಫ್ರಾ ಆರ್ಚರ್‌, ಆದಿಲ್‌ ರಶೀದ್‌, ಮಾರ್ಕ್ ವುಡ್‌.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.