ETV Bharat / sports

ನಾಯಕನ ಬದಲಾವಣೆ ಬಗ್ಗೆ ಮಸಲಾ ಹಾಕುವ ಅಗತ್ಯವಿಲ್ಲ, ವಿರಾಟ್​​ ನಮ್ಮ ನಾಯಕ: ಅಂಜಿಕ್ಯ ರಹಾನೆ - ವಿರಾಟ್​​ ಕೊಹ್ಲಿ

ಮೊದಲ ಟೆಸ್ಟ್​ ಪಂದ್ಯದಲ್ಲಿ ದಾಖಲೆಯ 420 ರನ್​ಗಳ ಗುರಿ ಬೆನ್ನಟ್ಟಿದ ಭಾರತ ಇಂಗ್ಲೆಂಡ್​ ಬೌಲರ್​​ಗಳ ಮಾರಕ ದಾಳಿಗೆ ತತ್ತರಿಸಿದ್ದಲ್ಲದೇ, 227 ರನ್​​ಗಳ ಸೋಲನುಭವಿಸಿದರು. ತಾಜಾ ಪಿಚ್ ಮತ್ತು ಒಣಗಿರುವ ಕಾರಣ ನಾಳೆಯ ಪಂದ್ಯ ಸ್ಪಿನ್ನರ್‌ಗಳ ಸ್ವರ್ಗ ಎಂಬ ಭರವಸೆ ಮೂಡಿಸಿದೆ

Ajinkya Rahane
ಉಪ ನಾಯಕ ಅಂಜಿಕ್ಯ ರಹಾನೆ
author img

By

Published : Feb 13, 2021, 12:58 PM IST

ಚೆನ್ನೈ: ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನದಿಂದಲೇ ಚೆಪಾಕ್​​ ಪಿಚ್ ಗಂಭೀರ ತಿರುವು ನೀಡಲಿದೆ ಎಂದು ಭಾರತ ತಂಡದ ಉಪನಾಯಕ ಅಜಿಂಕ್ಯ ರಹಾನೆ ನಿರೀಕ್ಷಿಸಿದ್ದಾರೆ. ಈ ಪಂದ್ಯವನ್ನು ಗೆದ್ದು ಭಾರತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್​ಗೇರುವ ವಿಶ್ವಾಸದಲ್ಲಿದೆ.

ಮೊದಲ ಟೆಸ್ಟ್​ ಪಂದ್ಯದಲ್ಲಿ ದಾಖಲೆಯ 420 ರನ್​ಗಳ ಗುರಿ ಬೆನ್ನಟ್ಟಿದ ಭಾರತ ಇಂಗ್ಲೆಂಡ್​ ಬೌಲರ್​​ಗಳ ಮಾರಕ ದಾಳಿಗೆ ತತ್ತರಿಸಿದ್ದಲ್ಲದೇ, 227 ರನ್​​ಗಳ ಸೋಲನುಭವಿಸಿದರು. ತಾಜಾ ಪಿಚ್ ಮತ್ತು ಒಣಗಿರುವ ಕಾರಣ ನಾಳೆಯ ಪಂದ್ಯ ಸ್ಪಿನ್ನರ್‌ಗಳ ಸ್ವರ್ಗ ಎಂಬ ಭರವಸೆ ಮೂಡಿಸಿದೆ.

ಉಪ ನಾಯಕ ಅಂಜಿಕ್ಯ ರಹಾನೆ

"ನಾವು ಎರಡು ವರ್ಷಗಳ ನಂತರ ತವರು ನೆಲದಲ್ಲಿ ಆಡುತ್ತಿದ್ದೇವೆ. ನಮ್ಮ ಕೊನೆಯ ತವರು ಸರಣಿ ದಕ್ಷಿಣ ಆಫ್ರಿಕಾ ವಿರುದ್ಧವಾಗಿತ್ತು. ಹಾಗಾಗಿ ಮೊದಲ ಪಂದ್ಯದಲ್ಲಿ ಪಿಚ್​ ಬಗ್ಗೆ ಸರಿಯಾಗಿ ಅರಿತುಕೊಳ್ಳಲು ಕಷ್ಟವಾಯಿತು, ಇದರಿಂದ ನಾವು ವೈಫಲ್ಯ ಅನುಭವಿಸಿದವು. ಆದರೆ ಮುಂದಿನ ಪಂದ್ಯಗಳಲ್ಲಿ ಮರಳಿ ಪಾರ್ಮ್​​ಗೆ ಮರಳುತ್ತೇವೆ ಎಂದು ಭಾರತ ತಂಡದ ಉಪ ನಾಯಕ ಅಜಿಂಕ್ಯ ರಹಾನೆ ಹೇಳಿದ್ದಾರೆ.

ಓದಿ : ಭಾರತ vs ಇಂಗ್ಲೆಂಡ್​ 2ನೇ ಟೆಸ್ಟ್​: ಆರಂಭಿಕ ಆಘಾತದ ನಡುವೆಯೂ ಭಾರತಕ್ಕೆ ಪವರ್​ ನೀಡಿದ ಹಿಟ್​​ಮ್ಯಾನ್​

"ನಾನು ಮೊದಲೇ ಹೇಳಿದ್ದೇನೆ ನಾಯಕನ ಬದಲಾವಣೆ ಇಲ್ಲ. ಟೀಮ್​ ಇಂಡಿಯಾಗೆ ವಿರಾಟ್​​ ಕೊಹ್ಲಿಯೆ ನಾಯಕ. ಅವರೇ ನಮ್ಮ ಕ್ಯಾಪ್ಟನ್​. ಅವರೇ ಮುಂದೆ ನಮ್ಮ ನಾಯಕನಾಗಿ ಮುಂದುವರೆಯುತ್ತಾರೆ. ಅದಕ್ಕೆ ಮಸಲಾ ಹಾಕುವ ಅಗತ್ಯವಿಲ್ಲ ಎಂದು ಹೇಳಿದರು. ನಾನು ನಾಯಕತ್ವದ ಬದಲಾವಣೆ ಬಿಟ್ಟು ತಂಡಕ್ಕೆ ಉತ್ತಮ ಆಟವಾಡುವ ಬಗ್ಗೆ ಯೋಚನೆ ಮಾಡುತ್ತಿದ್ದೇನೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.