ಚೆನ್ನೈ: ಭಾರತದ ತಂಡದ ಬ್ಯಾಟ್ಸ್ಮನ್ಗಳಿಗೆ ಕಾಡಿದ ಆಂಗ್ಲರ ವೇಗಿ ಆಂಡರ್ಸನ್ ಬೌಲಿಂಗ್ ದಾಳಿಯನ್ನು ಮಾಜಿ ಇಂಗ್ಲೆಂಡ್ ಕ್ರಿಕೆಟಿಗ ಕೆವಿನ್ ಪೀಟರ್ಸನ್ ಹಾಡಿ ಹೊಗಳಿದ್ದಾರೆ. ಆಂಡರ್ಸನ್ ಇಂಗ್ಲೆಂಡ್ನ ಎಲ್ಲಾ ಆವೃತ್ತಿಯ ಗ್ರೇಟೆಸ್ಟ್ ಬೌಲರ್ ಎಂದಿದ್ದಾರೆ.
ಭಾರತ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಪ್ರಮುಖ ವಿಕೆಟ್ ಪಡೆದಿದ್ದಾರೆ. ಶುಭ್ಮನ್ ಗಿಲ್, ರಿಷಬ್ ಪಂಥ್ ಹಾಗೂ ಅಜಿಂಕ್ಯಾ ರಹಾನೆಯಂತಹ ಬಲಿಷ್ಟರ ವಿಕೆಟ್ ಉರುಳಿಸಿದ್ದು, ಇಂಗ್ಲೆಂಡ್ ಗೆಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪೀಟರ್ಸನ್, ನಿಮ್ಮ ದೇಶದ ಶ್ರೇಷ್ಠ ಆಟಗಾರ ಎನಿಸಿಕೊಳ್ಳಬೇಕಾದರೆ ನೀವು ಎಲ್ಲಾ ಆವೃತ್ತಿಯಲ್ಲೂ ಉತ್ತಮ ಪ್ರದರ್ಶನ ನೀಡಬೇಕು. ಜಿಮ್ಮಿ ಅದನ್ನು ಮಾಡಿದ್ದಾರೆ. ಇದು ಇಂಗ್ಲೆಂಡ್ನ ಬೃಹತ್ ಗೆಲುವು ಎಂದು ಟ್ವೀಟ್ನಲ್ಲಿ ಉಲ್ಲೇಖಿಸಿದ್ದಾರೆ.
-
To be the greatest for your country, you need to have ‘done it’ it all conditions.
— Kevin Pietersen🦏 (@KP24) February 9, 2021 " class="align-text-top noRightClick twitterSection" data="
Jimmy has done that!
Huge WIN for England!
">To be the greatest for your country, you need to have ‘done it’ it all conditions.
— Kevin Pietersen🦏 (@KP24) February 9, 2021
Jimmy has done that!
Huge WIN for England!To be the greatest for your country, you need to have ‘done it’ it all conditions.
— Kevin Pietersen🦏 (@KP24) February 9, 2021
Jimmy has done that!
Huge WIN for England!
ಇವರಲ್ಲದೆ ಆಂಗ್ಲರ ನಾಯಕ ರೂಟ್ ಸಹ ಆಂಡರ್ಸನ್ ಅವರನ್ನು ಹೊಗಳಿದ್ದಾರೆ. ಆಂಡರ್ಸನ್ ಅವರ ಇಂದಿನ ಬೌಲಿಂಗ್ ದಾಳಿಯು ನನಗೆ 2005ರಲ್ಲಿ ಫ್ಲಿಂಟ್ ಆಫ್ ಅವರ ಅದ್ಭುತ ಬೌಲಿಂಗ್ ನೆನಪಿಸಿತು ಎಂದಿದ್ದಾರೆ.
ಭಾರತ ವಿರುದ್ಧದ ಮೊದಲ ಟೆಸ್ಟ್ ಗೆಲುವಿನಿಂದಾಗಿ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಫೈನಲ್ ಪ್ರವೇಶಿಸುವ ಕನಸನ್ನು ಆಂಗ್ಲರ ಪಡೆ ಉಳಿಸಿಕೊಂಡಿದೆ. ಈ ಗೆಲುವಿನಿಂದ ಇಂಗ್ಲೆಂಡ್ ತಂಡ ಶೇ.70.2ರಷ್ಟು ಅಂಕ ಗಳಿಸಿದೆ.
ಇದನ್ನೂ ಓದಿ: ಇಂಗ್ಲೆಂಡ್ ತಂಡ ನಮಗಿಂತ ಹೆಚ್ಚು ಸ್ಥಿರತೆ, ವೃತ್ತಿಪರ ಪ್ರದರ್ಶನ ತೋರಿದೆ: ವಿರಾಟ್ ಕೊಹ್ಲಿ