ಅಹಮದಾಬಾದ್: ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ 4 ನೇ ಟಿ - 20 ಪಂದ್ಯದಲ್ಲಿ ಸೂರ್ಯಕುಮಾರ್ ಭರ್ಜರಿ ಅರ್ಧಶತಕ ಮತ್ತು ಶಾರ್ದುಲ್ ಠಾಕೂರ್ ಬೌಲಿಂಗ್ ನೆರವಿನಿಂದ 8 ರನ್ಗಳಿಂದ ಗೆದ್ದ ಭಾರತ ತಂಡ ಸರಣಿಯಲ್ಲಿ 2-2ರಲ್ಲಿ ಸಮಬಲ ಸಾಧಿಸಿದೆ.
ಈ ವರ್ಷದ ಕೊನೆಯಲ್ಲಿ ಟಿ-20 ವಿಶ್ವಕಪ್ ಆಡುವ ಮೊದಲು ಈ ಸರಣಿ ಆಡುತ್ತಿರುವುದು ನಮ್ಮ ಕಲಿಕೆಗೆ ಸ್ಪೂರ್ತಿದಾಯಕವಾಗಿದೆ ಎಂದು ಇಂಗ್ಲೆಂಡ್ ತಂಡದ ನಾಯಕ ಇಯಾನ್ ಮಾರ್ಗನ್ ಹೇಳಿದ್ದಾರೆ.
"ಇದು ಖಂಡಿತವಾಗಿಯೂ ಒಳ್ಳೆಯ ಪಂದ್ಯವಾಗಿತ್ತು. ಇದು ಎರಡು ತಂಡಗಳ ಗೆಲುವಿನ ಹತ್ತಿರದ ಆಟವಾಗಿತ್ತು. ಭಾರತ ತಂಡವು ಉತ್ತಮವಾಗಿ ಆಡಿದ್ದು, ಈ ಗೆಲುವಿಗೆ ಸಂಪೂರ್ಣ ಅರ್ಹವಾಗಿದೆ. ಪಂದ್ಯದ ವೇಳೆ ಹೆಚ್ಚು ಇಬ್ಬನಿ ಇದ್ದ ಪರಿಣಾಮ ಎರಡು ತಂಡಗಳಿಗೆ ಕಷ್ಟಕರವಾಗಿತ್ತು. ಕೊನೆಯ ಓವರ್ ಬಹಳ ರೋಚಕತೆಯಿಂದ ಕೂಡಿದ್ದು, ಭಾರತ ಈ ಓವರ್ನಲ್ಲಿ ಕಮ್ಬ್ಯಾಕ್ ಮಾಡಿತು. ಈ ಸರಣಿಯಲ್ಲಿ ನಾವು ಎಷ್ಟು ಸಾಧ್ಯವೋ ಅಷ್ಟು ಕಲಿಯಲು ಪ್ರಯತ್ನಿಸುತ್ತಿದ್ದೇವೆ. ಇದು ಟಿ-20 ವಿಶ್ವಕಪ್ ಪ್ರಗತಿ ಮುಖ್ಯವಾಗಿದೆ "ಎಂದು ಪಂದ್ಯದ ನಂತರ ಮಾರ್ಗನ್ ಹೇಳಿದರು.
ಓದಿ : ಕೊನೆ ಓವರ್ನಲ್ಲಿ ರೋಹಿತ್ ನೀಡಿದ ಸಲಹೆ ವರ್ಕೌಟ್ ಆಯ್ತು: ಶಾರ್ದುಲ್ ಠಾಕೂರ್
"ಅರ್ಧದಷ್ಟು ಹಂತದಲ್ಲಿ ಇಬ್ಬನಿ ಇದೆ ಎಂದು ತಿಳಿದು ನಾವು ತುಂಬಾ ಸಂತೋಷಪಟ್ಟಿದ್ದೇವೆ. ಚೆಂಡು ಹೆಚ್ಚು ಸ್ವಿಂಗ್ ಆಗದ ಕಾರಣ ನಾವು ಭಾರತದ ಮೇಲೆ ಹಿಡಿತ ಸಾಧಿಸಿದ್ದೆವು. 16 ಮತ್ತು 17 ಓವರ್‌ಗಳಲ್ಲಿ ನಾವು ಎಂಟು ಎಸೆತಗಳಲ್ಲಿ ಮೂರು ವಿಕೆಟ್‌ಗಳನ್ನು ಕಳೆದುಕೊಂಡೆವು, ಅದು ನಮ್ಮ ಹಿನ್ನಡೆಗೆ ಕಾರಣವಾಯಿತು. ಉನ್ನತ-ಗುಣಮಟ್ಟದ ಬೌಲಿಂಗ್ ನಡುವೆಯು ಬೈರ್‌ಸ್ಟೋವ್ ಮತ್ತು ಸ್ಟೋಕ್ಸ್ ತಂಡಕ್ಕೆ ಉತ್ತಮ ಕೊಡುಗೆ ನೀಡಿದರು. ಮುಂದಿನ ಪಂದ್ಯವನ್ನು ಗೆಲ್ಲಲು ನಾವು ಆಡುತ್ತೇವೆ "ಎಂದು ಅವರು ಹೇಳಿದರು.