ಚೆನ್ನೈ: ಎಂ. ಎ ಚಿದಂಬರಂ ಸ್ಟೇಡಿಯಂ ನಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಟೀಂ ಇಂಡಿಯಾ ಬ್ಯಾಟಿಂಗ್ ಆಯ್ದುಕೊಂಡಿದೆ. ಆರಂಭದಲ್ಲೇ ಮೊದಲ ವಿಕೆಟ್ ಪತನವಾಗಿದ್ದು, ಗಿಲ್ ಪೆವಿಲಿಯನ್ ಸೇರಿದ್ದಾರೆ.
-
Team News:
— BCCI (@BCCI) February 13, 2021 " class="align-text-top noRightClick twitterSection" data="
3⃣ changes for #TeamIndia as @akshar2026, @imkuldeep18 & Mohammad Siraj named in the playing XI for the 2nd @Paytm #INDvENG Test!
England make 4⃣ changes to their XI from the first Test & bring in Stuart Broad, Ben Foakes, Moeen Ali & Olly Stone. pic.twitter.com/ZaiDKCjn4Y
">Team News:
— BCCI (@BCCI) February 13, 2021
3⃣ changes for #TeamIndia as @akshar2026, @imkuldeep18 & Mohammad Siraj named in the playing XI for the 2nd @Paytm #INDvENG Test!
England make 4⃣ changes to their XI from the first Test & bring in Stuart Broad, Ben Foakes, Moeen Ali & Olly Stone. pic.twitter.com/ZaiDKCjn4YTeam News:
— BCCI (@BCCI) February 13, 2021
3⃣ changes for #TeamIndia as @akshar2026, @imkuldeep18 & Mohammad Siraj named in the playing XI for the 2nd @Paytm #INDvENG Test!
England make 4⃣ changes to their XI from the first Test & bring in Stuart Broad, Ben Foakes, Moeen Ali & Olly Stone. pic.twitter.com/ZaiDKCjn4Y
ಚಿಪಾಕ್ ಅಂಗಳದಲ್ಲಿ ಟಾಸ್ ಗೆದ್ದ ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ. ಇಂಗ್ಲೆಂಡ್ ತಂಡದಲ್ಲಿ ನಾಲ್ಕು ಬದಲಾವಣೆಯಾಗಿದ್ದು, ಟೀಂ ಇಂಡಿಯಾದಲ್ಲೂ ಮೂರು ಬದಲವಾಣೆ ಮಾಡಲಾಗಿದೆ. ಭಾರತದ ಪರ ಅಕ್ಷರ್ ಪಟೇಲ್ ಟೆಸ್ಟ್ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದರೆ, ಕುಲದೀಪ್ ಯಾದವ್ ತಂಡದಲ್ಲಿ ಅವಕಾಶ ಪಡೆದಿದ್ದಾರೆ. ಬುಮ್ರಾಗೆ ವಿಶ್ರಾಂತಿ ನೀಡಲಾಗಿದ್ದು, ಮೊಹಮದ್ ಸಿರಾಜ್ ಇಂದು ಇಶಾಂತ್ ಗೆ ಸಾಥ್ ನೀಡಲಿದ್ದಾರೆ.
ಇಂದಿನ ಪಂದ್ಯದಲ್ಲಿ ಶೇ.50ರಷ್ಟು ಪ್ರೇಕ್ಷಕರಿಗೆ ಅವಕಾಶ ನೀಡಲಾಗಿದೆ. ಚೆನ್ನೈನಲ್ಲೇ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಯಾವುದೇ ಪ್ರೇಕ್ಷಕರಿಗೆ ಅವಕಾಶ ನೀಡಿರಲಿಲ್ಲ.
-
Toss Update: #TeamIndia have won the toss & elected to bat against England in the 2nd @Paytm #INDvENG Test at Chepauk! pic.twitter.com/9q28PbUxZ7
— BCCI (@BCCI) February 13, 2021 " class="align-text-top noRightClick twitterSection" data="
">Toss Update: #TeamIndia have won the toss & elected to bat against England in the 2nd @Paytm #INDvENG Test at Chepauk! pic.twitter.com/9q28PbUxZ7
— BCCI (@BCCI) February 13, 2021Toss Update: #TeamIndia have won the toss & elected to bat against England in the 2nd @Paytm #INDvENG Test at Chepauk! pic.twitter.com/9q28PbUxZ7
— BCCI (@BCCI) February 13, 2021
ಇಂಗ್ಲೆಂಡ್ ತಂಡ 4 ಬದಲಾವಣೆಯೊಂದಿಗೆ ಕಣಕ್ಕಿಳಿಯಲಿದೆ. ಜೇಮ್ಸ್ ಆ್ಯಂಡರ್ಸನ್, ಜೋಫ್ರಾ ಆರ್ಚರ್, ಡಾಮಿನಿಕ್ ಬೆಸ್, ವಿಕೆಟ್ ಕೀಪರ್ ಬಟ್ಲರ್ ಪಂದ್ಯದಿಂದ ಹೊರಗೂಳಿದಿದ್ದಾರೆ. ಸ್ಟುವರ್ಟ್ ಬ್ರಾಡ್, ಮೊಯಿನ್ ಅಲಿ, ಕ್ರಿಸ್ ವೋಕ್ಸ್, ಓಲೀ ಸ್ಟೋನ್, ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಭಾರತ ತಂಡ: ರೋಹಿತ್ ಶರ್ಮ, ಶುಭಮನ್ ಗಿಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ರಿಷಭ್ ಪಂತ್, ಆರ್. ಅಶ್ವಿನ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಇಶಾಂತ್ ಶರ್ಮ, ಮೊಹಮ್ಮದ್ ಸಿರಾಜ್.
ಇಂಗ್ಲೆಂಡ್ ತಂಡ: ಡೊಮಿನಿಕ್ ಸಿಬ್ಲಿ, ರೋರಿ ಬರ್ನ್ಸ್, ಡೇನಿಯಲ್ ಲಾರೆನ್ಸ್, ಜೋ ರೂಟ್ (ನಾಯಕ), ಓಲೀ ಪೋಪ್, ಸ್ಟೋಕ್ಸ್, ಬೆನ್ ಫೋಕ್ಸ್, ಮೊಯಿನ್ ಅಲಿ, ಸ್ಟುವರ್ಟ್ ಬ್ರಾಡ್, ಓಲೀ ಸ್ಟೋನ್, ಜಾಕ್ ಲೀಚ್