ನವದೆಹಲಿ: ಭಾರತದಲ್ಲಿ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಿನಲ್ಲಿ ಏಕದಿನ ವಿಶ್ವಕಪ್ ನಡೆಯಲಿದೆ. ಇದಕ್ಕೆ ಈಗಾಗಲೇ ಏಳು ತಂಡಗಳು ಕ್ವಾಲಿಫೈ ಆಗಿದೆ. ಐಸಿಸಿ ಲೀಗ್‌ನ ಅಂಕ ಪಟ್ಟಿ ನವೀಕರಣ ಆಗಿದ್ದು ಇಂಗ್ಲೆಂಡ್ ಪ್ರಥಮ ಸ್ಥಾನಕ್ಕೇರಿದೆ. ಏಕದಿನ ವಿಶ್ವಕಪ್ಗೂ ಮೊದಲು ಏಷ್ಯಾ ರಾಷ್ಟ್ರಗಳಿಗೆ ಪ್ರತಿಷ್ಠಿತ ಏಷ್ಯಾಕಪ್ ನಡೆಯಲಿದೆ. ಈ ಟ್ರೋಫಿಯನ್ನೂ ಏಕದಿನ ಮಾದರಿಯಲ್ಲಿ ನಡೆಸಲಾಗುವುದು ಎಂದು ಏಷ್ಯಾ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ತಿಳಿಸಿದೆ. ಇನ್ನು ಏಷ್ಯಾಕಪ್ನ ಸ್ಥಳ ಗೊಂದಲದಲ್ಲಿದೆ. ಈ ಹಿಂದೆ ಪಾಕಿಸ್ತಾನ ಎಂದು ನಿರ್ಣಯಿಸಲಾಗಿತ್ತು. ಆದರೆ, ಭಾರತ ಪಾಕ್ಗೆ ಹೋಗಲು ನಿರಾಕರಿಸಿರುವುದರಿಂದ ತಟಸ್ಥ ತಳದಲ್ಲಿ ಆಯೋಜನೆ ಸಾಧ್ಯತೆ ಇದೆ.
-
England are back on top of the @cricketworldcup Super League standings after their win in the second ODI against Bangladesh 💪#CWCSL pic.twitter.com/rghoGVyGpR
— ICC (@ICC) March 4, 2023 " class="align-text-top noRightClick twitterSection" data="
">England are back on top of the @cricketworldcup Super League standings after their win in the second ODI against Bangladesh 💪#CWCSL pic.twitter.com/rghoGVyGpR
— ICC (@ICC) March 4, 2023England are back on top of the @cricketworldcup Super League standings after their win in the second ODI against Bangladesh 💪#CWCSL pic.twitter.com/rghoGVyGpR
— ICC (@ICC) March 4, 2023
ವಿಶ್ವಕಪ್ ಸೂಪರ್ ಲೀಗ್‌ನ ಎರಡನೇ ಏಕದಿನ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಸೋಲಿಸಿದ ಇಂಗ್ಲೆಂಡ್ ಮತ್ತೆ ಅಗ್ರಸ್ಥಾನಕ್ಕೇರಿದೆ. ಇಂಗ್ಲೆಂಡ್ 155 ಅಂಕಗಳೊಂದಿಗೆ ಮೊದಲ ಸ್ಥಾನ ಪಡೆದುಕೊಂಡಿದೆ. 150 ಅಂಕ ಗಳಿಸಿರುವ ನ್ಯೂಜಿಲ್ಯಾಂಡ್ ತಂಡ ಎರಡನೇ ಸ್ಥಾನ ಕುಸಿದಿದೆ. ಅದೇ ವೇಳೆ 2ನೇ ಸ್ಥಾನದಲ್ಲಿದ್ದ ಭಾರತ (139 ಅಂಕ) ಮೂರನೇ ಸ್ಥಾನಕ್ಕೆ ತಲುಪಿದೆ. ಪಾಕಿಸ್ತಾನ 130 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಆಸ್ಟ್ರೇಲಿಯಾ 120 ಅಂಕಗಳೊಂದಿಗೆ ಐದನೇ ಸ್ಥಾನದಲ್ಲಿದೆ. ಅದೇ ಸಮಯದಲ್ಲಿ ಬಾಂಗ್ಲಾದೇಶ ಕೂಡ 120 ಅಂಕಗಳೊಂದಿಗೆ ಆರನೇ ಸ್ಥಾನದಲ್ಲಿದೆ. ಅಫ್ಘಾನಿಸ್ತಾನ 115 ಅಂಕಗಳೊಂದಿಗೆ ಏಳನೇ ಸ್ಥಾನಕ್ಕೆ ತಲುಪಿದೆ. ವೆಸ್ಟ್ ಇಂಡೀಸ್ 88 ಅಂಕಗಳೊಂದಿಗೆ ಎಂಟನೇ ಸ್ಥಾನದಲ್ಲಿದೆ. ದಕ್ಷಿಣ ಆಫ್ರಿಕಾ 78 ಮತ್ತು ಶ್ರೀಲಂಕಾ 77 ಅಂಕಗಳೊಂದಿಗೆ 9 ನೇ ಸ್ಥಾನದಲ್ಲಿದೆ.
ಇದಕ್ಕೂ ಮೊದಲು ಜನವರಿ 12, 2023 ರಂದು, ಕರಾಚಿಯಲ್ಲಿ ನಡೆದ ಎರಡನೇ ಏಕದಿನದಲ್ಲಿ ಪಾಕಿಸ್ತಾನವನ್ನು 79 ರನ್‌ಗಳಿಂದ ಸೋಲಿಸಿದ ನಂತರ ನ್ಯೂಜಿಲ್ಯಾಂಡ್ ಐಸಿಸಿ ಕ್ರಿಕೆಟ್ ವಿಶ್ವಕಪ್ ಸೂಪರ್ ಲೀಗ್‌ನ ಪಾಯಿಂಟ್‌ಗಳ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಪಡೆದಿತ್ತು. ಅಂದಿನಿಂದ ನ್ಯೂಜಿಲ್ಯಾಂಡ್ ಅಗ್ರಸ್ಥಾನದಲ್ಲಿತ್ತು. ಇಂಗ್ಲೆಂಡ್, ನ್ಯೂಜಿಲ್ಯಾಂಡ್ , ಭಾರತ, ಪಾಕಿಸ್ತಾನ, ಆಸ್ಟ್ರೇಲಿಯಾ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ನೇರವಾಗಿ ವಿಶ್ವಕಪ್‌ಗೆ ಅರ್ಹತೆ ಪಡೆದಿವೆ.
ಏನಿದು ಐಸಿಸಿ ವಿಶ್ವಕಪ್ ಸೂಪರ್ ಲೀಗ್: ವಿಶ್ವಕಪ್ ಸೂಪರ್ ಲೀಗ್‌ನಲ್ಲಿ ಎಲ್ಲಾ ತಂಡಗಳು 8 ಸರಣಿಗಳನ್ನು ಆಡಬೇಕಿದೆ. ಇದರಲ್ಲಿ 4 ಸರಣಿಗಳು ಸ್ವದೇಶದಲ್ಲಿ ಮತ್ತು 4 ಸರಣಿಗಳನ್ನು ವಿದೇಶದಲ್ಲಿ ಆಡಲಾಗುತ್ತದೆ. ಈ ಲೀಗ್‌ನಲ್ಲಿ, ಪ್ರತಿ ಸರಣಿಯು 3 ಪಂದ್ಯಗಳನ್ನು ಹೊಂದಿದೆ, ಇದರಲ್ಲಿ ವಿಜೇತ ತಂಡವು 10 ಅಂಕಗಳನ್ನು ಪಡೆಯುತ್ತದೆ. ಪಂದ್ಯ ಟೈ ಅಥವಾ ಫಲಿತಾಂಶ ಬಾರದಿದ್ದಲ್ಲಿ ಎರಡೂ ತಂಡಗಳು 5-5 ಅಂಕ ಪಡೆಯುತ್ತವೆ. 13 ತಂಡಗಳ ನಡುವೆ ಈ ಟೂರ್ನಿ ನಡೆಯುತ್ತಿದೆ. ಇದರಲ್ಲಿ ಭಾರತ, ಆಸ್ಟ್ರೇಲಿಯಾ, ಪಾಕಿಸ್ತಾನ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ನ್ಯೂಜಿಲ್ಯಾಂಡ್ , ಬಾಂಗ್ಲಾದೇಶ, ಅಫ್ಘಾನಿಸ್ತಾನ, ವೆಸ್ಟ್ ಇಂಡೀಸ್, ಐರ್ಲೆಂಡ್, ಜಿಂಬಾಬ್ವೆ, ನೆದರ್ಲ್ಯಾಂಡ್ಸ್ ಮತ್ತು ಶ್ರೀಲಂಕಾ ಸೇರಿವೆ.
ಭಾರತವನ್ನು ಸೇರಿದಂತೆ 7 ತಂಡಗಳು ಲೀಗ್ ಹಂತದಲ್ಲಿ 2023ರ ಐಸಿಸಿ ವಿಶ್ವಕಪ್‌ಗೆ ನೇರವಾಗಿ ಅರ್ಹತೆ ಪಡೆದಿವೆ. ಶ್ರೀಲಂಕಾ, ದಕ್ಷೀಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ತಂಡಗಳು ಇನ್ನೂ ಕ್ವಾಲಿಫೈ ಆಗಿಲ್ಲ. ಲೀಗ್ ಹಂತದಲ್ಲಿ ಈ ತಂಡಗಳನ್ನು ಹಿಮ್ಮೆಟ್ಟಿಸಿ ಐರ್ಲೆಂಡ್, ಜಿಂಬಾಬ್ವೆ ಮತ್ತು ನೆದರ್ಲ್ಯಾಂಡ್ಸ್ ಅವಕಾಶ ಪಡೆಯುವ ಸಾಧ್ಯತೆಯೂ ಇದೆ.
ಇದನ್ನೂ ಓದಿ: ಐಪಿಎಲ್ ಗೀತೆ ಬಿಡುಗಡೆ: ಪಂದ್ಯ ಆರಂಭ ವಿಳಂಬ