ಇಸ್ಲಾಮಾಬಾದ್(ಪಾಕಿಸ್ತಾನ): 17 ವರ್ಷಗಳ ಬಳಿಕ ಇಂಗ್ಲೆಂಡ್ ಕ್ರಿಕೆಟ್ ತಂಡ ಪಾಕಿಸ್ತಾನ ಪ್ರವಾಸ ಕೈಗೊಳ್ಳಲಿದ್ದು, 7 ಟಿ20 ಪಂದ್ಯಗಳ ಸರಣಿ ಹಾಗೂ ಟೆಸ್ಟ್ನಲ್ಲಿ ಭಾಗಿಯಾಗಲಿದೆ. ಇದಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮಾಹಿತಿ ಹಂಚಿಕೊಂಡಿದೆ.
ಸೆಪ್ಟೆಂಬರ್ 20ರಿಂದ ಅಕ್ಟೋಬರ್ 2ರವರೆಗೆ ಉಭಯ ತಂಡಗಳ ಮಧ್ಯೆ ಕರಾಚಿ ಮತ್ತು ಲಾಹೋರ್ನಲ್ಲಿ ಕ್ರಿಕೆಟ್ ಪಂದ್ಯಗಳು ಆಯೋಜನೆಗೊಳ್ಳಲಿವೆ. ಆರಂಭದಲ್ಲಿ ಕರಾಚಿ ಕ್ರಿಕೆಟ್ ಮೈದಾನದಲ್ಲಿ ಸೆಪ್ಟೆಂಬರ್ 20,22, 23 ಮತ್ತು 25 ರಂದು ಪಂದ್ಯಗಳು ನಡೆಯಲಿವೆ. ಉಳಿದಂತೆ, ಲಾಹೋರ್ನ ಗಡಾಫಿ ಮೈದಾನದಲ್ಲಿ 28, 30 ಹಾಗೂ ಅಕ್ಟೋಬರ್ 2ರಂದು ಉಳಿದ ಪಂದ್ಯಗಳು ನಿಗದಿಯಾಗಿವೆ.
ಇದನ್ನೂ ಓದಿ: IND vs WI: ಭಾರತ-ವಿಂಡೀಸ್ 3ನೇ ಟಿ20 ಪಂದ್ಯವೂ ಒಂದೂವರೆ ಗಂಟೆ ವಿಳಂಬ!
ಭದ್ರತಾ ಕಾರಣ ನೀಡಿ ಕಳೆದ ಕೆಲವು ತಿಂಗಳ ಹಿಂದೆ ನ್ಯೂಜಿಲ್ಯಾಂಡ್ ತಂಡ ಪಾಕ್ ಪ್ರವಾಸ ಕೈಗೊಂಡು ವಾಪಸ್ ಆಗಿತ್ತು. ಇದರ ಬೆನ್ನಲ್ಲೇ ಇಂಗ್ಲೆಂಡ್ ಕೂಡಾ ಸರಣಿಯಿಂದ ಹಿಂದೆ ಸರಿದಿದೆ. ಆದರೆ, ಇದೀಗ ಪಾಕಿಸ್ತಾನ ಪ್ರವಾಸ ಕೈಗೊಳ್ಳುತ್ತಿರುವುದಾಗಿ ತಿಳಿಸಿದೆ. ಅಕ್ಟೋಬರ್-ನವೆಂಬರ್ ಅವಧಿಯಲ್ಲಿ ಆಸ್ಟ್ರೇಲಿಯಾದಲ್ಲಿ ಐಸಿಸಿ ಟಿ20 ವಿಶ್ವಕಪ್ ಆಯೋಜನೆಗೊಂಡಿದೆ. ಹೀಗಾಗಿ, ಈ ಸರಣಿ ಉಭಯ ತಂಡಗಳಿಗೂ ಮಹತ್ವದ್ದಾಗಿದೆ.