ಸೌತಾಂಪ್ಟನ್ : ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೂ ಮುನ್ನ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ನಡೆಯನ್ನಾಡುವುದರಿಂದ ಭಾರತಕ್ಕಿಂತ ಹೆಚ್ಚು ನ್ಯೂಜಿಲ್ಯಾಂಡ್ಗೆ ಅನುಕೂಲವಾಗುತ್ತಿದೆ ಎಂದು ಕಿವೀಸ್ ಸ್ಟಾರ್ ಬ್ಯಾಟ್ಸ್ಮನ್ ರಾಸ್ ಟೇಲರ್ ಹೇಳಿದ್ದಾರೆ.
ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಬಗ್ಗೆ ಯಾವುದೇ ರೀತಿಯ ಆಲೋಚನೆಗಳು ನನ್ನಲ್ಲಿಲ್ಲ ಎಂದರೆ ಅದು ಸುಳ್ಳಾಗುತ್ತದೆ. ಇಂಗ್ಲೆಂಡ್ ವಿರುದ್ಧ ನಡೆಯುವ 2 ಟೆಸ್ಟ್ ಪಂದ್ಯಗಳು ನಮಗೆ ವಿಶ್ವಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೆ ಉತ್ತಮ ತಯಾರಿ ಮತ್ತೊಂದಿಲ್ಲ ಎಂದು ನಾನು ಭಾವಿಸುತ್ತೇನೆ.
ಅದರಲ್ಲೂ ತಟಸ್ಥ ಸ್ಥಳದಲ್ಲಿ ಈ ಪಂದ್ಯ ನಡೆಯುತ್ತಿರುವುದು ಭಾರತಕ್ಕಿಂತ ನಮಗೆ ಹೆಚ್ಚು ಪ್ರಾಯೋಜನಕಾರಿಯಾಗಿದೆ ಎಂದು ಕಿವೀಸ್ ಹಿರಿಯ ಬ್ಯಾಟ್ಸ್ಮನ್ ರಾಸ್ ಟೇಲರ್ ಹೇಳಿದ್ದಾರೆ.
"ಎರಡು ಟೆಸ್ಟ್ ಆಡುವಿಕೆಯು ನಮಗೆ ಸ್ವಲ್ಪ ಪ್ರಯೋಜನವನ್ನು ನೀಡುತ್ತದೆ ಎಂದು ನಾನು ಭಾವಿಸುತ್ತೇನೆ. ಆದರೆ, ಈ ಭಾರತೀಯ ತಂಡವು ದೀರ್ಘಕಾಲದವರೆಗೆ ಪ್ರಥಮ ಸ್ಥಾನದಲ್ಲಿದೆ ಮತ್ತು ಇಂಗ್ಲೆಂಡ್‌ನಲ್ಲಿ ಸಾಕಷ್ಟು ಯಶಸ್ಸನ್ನು ಗಳಿಸಿದೆ " ಎಂದು ಅವರು ಹೇಳಿದ್ದಾರೆ.
ಪಿಪಿಎಲ್ ಮುಂದೂಡಿಕೆಯಿಂದ ಭಾರತ ತಂಡಕ್ಕೆ ಅನುಕೂಲ
ಇಂಡಿಯನ್ ಪ್ರೀಮಿಯರ್ ಲೀಗ್ ಕೋವಿಡ್ ಸಾಂಕ್ರಾಮಿಕ ಕಾರಣದಿಂದ ಮುಂದೂಡಲ್ಪಟ್ಟಿರುವುದರಿಂದ ಭಾರತೀಯ ಆಟಗಾರರು ಅನುಕೂಲ ಪಡೆದುಕೊಂಡಿದ್ದಾರೆ.
ಅವರು ಈ ಬಿಡುವಿನ ವೇಳೆಯಲ್ಲಿ ಸದೃಢವಾಗಿರಲು ಮತ್ತು ಚೈತನ್ಯದಿಂದಿರಲು ಕಾರಣವಾಗಿದೆ. ಒಂದು ವೇಳೆ ಐಪಿಎಲ್ ಎಂದಿನಂದೆ ನಡೆದಿದ್ದರೆ ಭಾರತೀಯರಿಗೆ ಕೇವಲ 17 ದಿನ ಮಾತ್ರ ಸಿಗುತ್ತಿತ್ತು.
ಇದರಿಂದ ಅವರು ಪ್ರಯಾಣ ಮತ್ತು ಕ್ವಾರಂಟೈನ್ಗೆ ಹೆಚ್ಚಿನ ಸಮಯ ವ್ಯರ್ಥವಾಗುತ್ತಿತ್ತು ಎಂದು 37 ವರ್ಷದ ಆಟಗಾರ ಹೇಳಿದ್ದಾರೆ.
ಇದನ್ನು ಓದಿ: ಟಿ.ನಟರಾಜನ್ ಆರೋಗ್ಯ ಚೇತರಿಕೆ ಬಗ್ಗೆ ಟ್ವೀಟ್ ಮಾಡಿದ SRH